w
Headlines
Home » ಪುನೀತ್ ರಾಜ್ ಕುಮಾರ್ ಅಕಾಲಿಕ ಮರಣಕ್ಕೆ ಆನಂದಪುರ ಸಂಪೂರ್ಣ ಬಂದ್.!

ಪುನೀತ್ ರಾಜ್ ಕುಮಾರ್ ಅಕಾಲಿಕ ಮರಣಕ್ಕೆ ಆನಂದಪುರ ಸಂಪೂರ್ಣ ಬಂದ್.!

ಆನಂದಪುರ : ಕನ್ನಡದ ಕುವರ ವರನಟ ಡಾಕ್ಟರ್ ರಾಜ್ ಕುಮಾರ್ ಅವರ ಕಿರಿಯ ಪುತ್ರ ದೊಡ್ಮನೆ ಹುಡುಗ ನಟ ಪುನೀತ್ ರಾಜ್ ಕುಮಾರ್ ರವರ ಅಕಾಲಿಕ ಮರಣ ಇಡೀ ಕರುನಾಡಿಗೆ ಇದೀಗ ನೋವನ್ನುಂಟು ಮಾಡಿದೆ.
ಕೋಟ್ಯಂತರ ಅಪಾರ ಅಭಿಮಾನಿಗಳನ್ನು ಹೊಂದಿದ್ದ ಪುನೀತ್ ರಾಜ್ ಕುಮಾರ್ ರವರ ಮರಣವನ್ನು ಅರಗಿಸಿಕೊಳ್ಳಲು ಸಾಧ್ಯವಾಗದ ಪರಿಸ್ಥಿತಿಗೆ ಇಂದು ಕರುನಾಡು ಬಂದಿದೆ.
ಅತಿ ಕಿರಿಯ ವಯಸ್ಸಿನಲ್ಲೇ ಇಹಲೋಕ ತ್ಯಜಿಸಿದ ಖ್ಯಾತ ನಟ ಪುನೀತ್ ರಾಜ್ ಕುಮಾರ್ ರವರ ಅಕಾಲಿಕ ನಿಧನಕ್ಕೆ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಆನಂದಪುರ ದಲ್ಲಿ ಸಂಪೂರ್ಣ ಬಂದ್ ಮಾಡಲಾಯಿತು ಅಂಗಡಿ ಗ್ರಾಹಕರು ಹೋಟೆಲ್ ಉದ್ಯಮಿಗಳು ಸ್ವಯಂಪ್ರೇರಿತರಾಗಿ ಬಂದ್ ಮಾಡುವುದರ ಮೂಲಕ ಕನ್ನಡದ ರಣವಿಕ್ರಮ ನಿಗೆ ಅಂತಿಮ ನಮನ ಸಲ್ಲಿಸಿದರು.ಬಸ್ ಸ್ಟ್ಯಾಂಡ್ ಆವರಣದಲ್ಲಿ ಕಟೌಟ್ ನ ಮುಂಭಾಗದಲ್ಲಿ ಮೌನಾಚರಣೆಯನ್ನು ನಡೆಸುವುದರೊಂದಿಗೆ ಆನಂದಪುರದ ಮುಖ್ಯರಸ್ತೆಯಲ್ಲಿ ಶಾಂತಿ ಮೆರವಣಿಗೆಯೊಂದಿಗೆ ಅಗಲಿದ ನಾಯಕನಿಗೆ ಭಾವಪೂರ್ಣ ಶ್ರದ್ಧಾಂಜಲಿಯನ್ನು ಅರ್ಪಿಸಿ ನಮನ ಸಲ್ಲಿಸಿದರು.ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ರತ್ನಾಕರ ಹೊನಗೋಡು ಮತ್ತು ಇತರ ಮುಖಂಡರುಗಳ ತಂಡದೊಂದಿಗೆ ಈ ಬಂದ್ ಯಶಸ್ವಿಯಾಗಿ ನೆರವೇರಿತು.




 ವರದಿ :ಪವನ್ ಕುಮಾರ್ ಕಠಾರೆ

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.