w
Headlines
Home » ರಾತ್ರಿ ಗಸ್ತಿನಲ್ಲಿ ಸಿಕ್ಕಿಬಿದ್ದ ಜಂಬಿಟ್ಟಿಗೆ ಲಾರಿ! ರಿಪ್ಪನ್‌ಪೇಟೆಯಲ್ಲಿ ತಹಶೀಲ್ದಾರ್ ತಂಡದ ಕಾರ್ಯಾಚರಣೆ

ರಾತ್ರಿ ಗಸ್ತಿನಲ್ಲಿ ಸಿಕ್ಕಿಬಿದ್ದ ಜಂಬಿಟ್ಟಿಗೆ ಲಾರಿ! ರಿಪ್ಪನ್‌ಪೇಟೆಯಲ್ಲಿ ತಹಶೀಲ್ದಾರ್ ತಂಡದ ಕಾರ್ಯಾಚರಣೆ

Screenshot 2026 11 18 21 49 12 569 com.openai.chatgpt edit

ರಾತ್ರಿ ಗಸ್ತಿನಲ್ಲಿ ಸಿಕ್ಕಿಬಿದ್ದ ಜಂಬಿಟ್ಟಿಗೆ ಲಾರಿ! ರಿಪ್ಪನ್‌ಪೇಟೆಯಲ್ಲಿ ತಹಶೀಲ್ದಾರ್ ತಂಡದ ಕಾರ್ಯಾಚರಣೆ | A truck transporting jamba stone illegally from Anandapura towards Thirthahalli was intercepted by the Nighandara Tahsildar Bharat Raj-led team at Vinayaka Circle, Ripponpete.

ರಿಪ್ಪನ್‌ಪೇಟೆ: ಅಕ್ರಮವಾಗಿ ಜಂಬಿಟ್ಟಿಗೆಯನ್ನು ಸಾಗಿಸುತ್ತಿದ್ದ ಲಾರಿಯೊಂದನ್ನು ಹೊಸನಗರ ತಹಶೀಲ್ದಾರ್ ಭರತ್‌ರಾಜ್ ನೇತೃತ್ವದ ತಂಡ ಪತ್ತೆಹಚ್ಚಿ ಪೊಲೀಸ್ ವಶಕ್ಕೆ ಒಪ್ಪಿಸಿರುವ ಘಟನೆ ರಿಪ್ಪನ್‌ಪೇಟೆಯಲ್ಲಿ ನಡೆದಿದೆ.

ಹೊಸನಗರ ತಹಶೀಲ್ದಾರ್ ಭರತ್‌ರಾಜ್ ನೇತೃತ್ವದ ತಂಡ ರಾತ್ರಿ ಗಸ್ತು ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ, ಇಂದು ಮುಂಜಾನೆ ರಿಪ್ಪನ್‌ಪೇಟೆಯ ವಿನಾಯಕ ವೃತ್ತದಲ್ಲಿ ಲಾರಿಯೊಂದು ಜಂಬಿಟ್ಟಿಗೆಯನ್ನು ತುಂಬಿಕೊಂಡು ಸಾಗುತ್ತಿರುವುದು ಕಂಡುಬಂದಿದೆ.

ಆನಂದಪುರ ಕಡೆಯಿಂದ ರಿಪ್ಪನ್‌ಪೇಟೆ ಮಾರ್ಗವಾಗಿ ತೀರ್ಥಹಳ್ಳಿ ಕಡೆಗೆ ತೆರಳುತ್ತಿದ್ದ ಲಾರಿಯನ್ನು ತಡೆದು ಪರಿಶೀಲನೆ ನಡೆಸಿದ ಅಧಿಕಾರಿಗಳ ತಂಡ, ಅಕ್ರಮವಾಗಿ ಜಂಬಿಟ್ಟಿಗೆ ಸಾಗಿಸುತ್ತಿರುವುದನ್ನು ಪತ್ತೆಹಚ್ಚಿದೆ.

ಬಳಿಕ ಲಾರಿಯನ್ನು ವಶಕ್ಕೆ ಪಡೆದು ಮುಂದಿನ ಕ್ರಮಕ್ಕಾಗಿ ರಿಪ್ಪನ್‌ಪೇಟೆ ಪೊಲೀಸ್ ಠಾಣೆಗೆ ಒಪ್ಪಿಸಲಾಗಿದೆ.

ಈ ಸಂಧರ್ಭದಲ್ಲಿ ಕಂದಾಯ ಇಲಾಖೆಯ ಸಿಬ್ಬಂದಿಗಳಾದ ಶಿವಪ್ಪ ಹಾಗೂ ಗಣೇಶ್ ಇದ್ದರು.

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.