w
Headlines
Home » ಕಾರಗೋಡುವಿನಲ್ಲಿ ನಾಳೆ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ | ಗ್ರಾಮೀಣ ಹಾಗೂ ಸಿಟಿ ತಂಡಗಳ ಪೈಪೋಟಿ

ಕಾರಗೋಡುವಿನಲ್ಲಿ ನಾಳೆ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ | ಗ್ರಾಮೀಣ ಹಾಗೂ ಸಿಟಿ ತಂಡಗಳ ಪೈಪೋಟಿ

Volleyball image

The second annual floodlight volleyball tournament will be held on January 17, 2026, at Kargodu village near Ripponpet, Shivamogga district.

ಕಾರಗೋಡುವಿನಲ್ಲಿ ನಾಳೆ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ | ಗ್ರಾಮೀಣ ಹಾಗೂ ಸಿಟಿ ತಂಡಗಳ ಪೈಪೋಟಿ

ರಿಪ್ಪನ್‌ಪೇಟೆ : ಇಲ್ಲಿನ ಕಾರಗೋಡು–ಕರಡಿಗ–ಬೆಳಕೋಡು ಗ್ರಾಮಸ್ಥರ ಸಹಕಾರದೊಂದಿಗೆ ಶ್ರೀ ವಿದ್ಯಾಗಣಪತಿ ಸೇವಾ ಸಮಿತಿ ಹಾಗೂ ಅಪ್ಪು ಗೆಳೆಯರ ಬಳಗದ ಆಶ್ರಯದಲ್ಲಿ ದ್ವಿತೀಯ ವರ್ಷದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ.

ಈ ಪಂದ್ಯಾವಳಿ 2026ರ ಜನವರಿ 17ರಂದು (ಶನಿವಾರ) ಸಂಜೆ 7 ಗಂಟೆಗೆ ಕಾರಗೋಡು ಗ್ರಾಮದಲ್ಲಿ ನಡೆಯಲಿದ್ದು ರಾಜ್ಯದ ವಿವಿಧ ಭಾಗಗಳಿಂದ ಗ್ರಾಮೀಣ ಹಾಗೂ ನಗರ ತಂಡಗಳು ಪಾಲ್ಗೊಳ್ಳಲಿವೆ.

ಪಂದ್ಯಾವಳಿಯಲ್ಲಿ ವಿಜೇತ ತಂಡಗಳಿಗೆ ಆಕರ್ಷಕ ನಗದು ಬಹುಮಾನ ಮತ್ತು ಟ್ರೋಫಿಗಳನ್ನು ನೀಡಲಾಗುತ್ತದೆ.
ಪ್ರಥಮ ಬಹುಮಾನ ₹12,000, ದ್ವಿತೀಯ ಬಹುಮಾನ ₹8,000, ತೃತೀಯ ಬಹುಮಾನ ₹6,000 ಹಾಗೂ ಚತುರ್ಥ ಬಹುಮಾನ ₹4,000 ನಗದು ಹಾಗೂ ಟ್ರೋಫಿ ನೀಡಲಾಗುತ್ತದೆ. ಜೊತೆಗೆ ಬೆಸ್ಟ್ ಆಟ್ಯಾಕರ್, ಬೆಸ್ಟ್ ಪಾಸರ್ ಮತ್ತು ಬೆಸ್ಟ್ ಲಿಬ್ರೋ ಪ್ರಶಸ್ತಿಗಳು ಇರಲಿವೆ.

ತಂಡಗಳಿಗಾಗಿ ಪ್ರವೇಶ ಶುಲ್ಕ ₹900 ನಿಗದಿಪಡಿಸಲಾಗಿದೆ. ಗ್ರಾಮೀಣ ತಂಡಗಳಿಗೆ ಪ್ರತ್ಯೇಕ ಪೋಲ್ ವ್ಯವಸ್ಥೆ ಮಾಡಲಾಗಿದ್ದು, ಗ್ರಾಮೀಣ ಆಟಗಾರರಿಗೆ ಮಾತ್ರ ಅವಕಾಶ ನೀಡಲಾಗಿದೆ. ಕ್ಲಬ್ ಪಂದ್ಯಗಳಲ್ಲಿ ಭಾಗವಹಿಸಿರುವ ಆಟಗಾರರಿಗೆ ಗ್ರಾಮೀಣ ಪೋಲ್‌ನಲ್ಲಿ ಅವಕಾಶ ಇರುವುದಿಲ್ಲ. ಸಿಟಿ ತಂಡಗಳಿಗೆ ಮುಕ್ತ ಅವಕಾಶವಿದ್ದು, ಊಟದ ವ್ಯವಸ್ಥೆ ಕಲ್ಪಿಸಲಾಗಿದೆ.

ಪಂದ್ಯಾವಳಿಯಲ್ಲಿ ಭಾಗವಹಿಸಲು ಇಚ್ಛಿಸುವ ತಂಡಗಳು 2026ರ ಜನವರಿ 16ರೊಳಗೆ ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕು. ಎಲ್ಲಾ ತಂಡಗಳು ಪಂದ್ಯ ದಿನ ಸಂಜೆ 7 ಗಂಟೆಯೊಳಗೆ ಸ್ಥಳಕ್ಕೆ ಹಾಜರಾಗಬೇಕು. ಅಸಭ್ಯ ವರ್ತನೆ ತೋರಿಸುವ ತಂಡಗಳನ್ನು ಪಂದ್ಯಾವಳಿಯಿಂದ ಹೊರಹಾಕಲಾಗುವುದು. ವ್ಯವಸ್ಥಾಪಕರು ಹಾಗೂ ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ ಎಂದು ಆಯೋಜಕರು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 9902477782, 8277126915, 9008145561, 8861877056

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.