w
Headlines
Home » Ranks Institute–ಜೆಸಿಐ ಹೊಸನಗರ ಡೈಮಂಡ್‌ ಆಯೋಜನೆಯಲ್ಲಿ ‘Gen Z Connect’ ಯಶಸ್ವಿ

Ranks Institute–ಜೆಸಿಐ ಹೊಸನಗರ ಡೈಮಂಡ್‌ ಆಯೋಜನೆಯಲ್ಲಿ ‘Gen Z Connect’ ಯಶಸ್ವಿ

IMG 20260816 WA0055

ರ‍್ಯಾಂಕ್ಸ್ ಇನ್ಸ್ಟಿಟ್ಯೂಟ್–ಜೆಸಿಐ ಹೊಸನಗರ ಡೈಮಂಡ್‌ ಸಹಯೋಗದಲ್ಲಿ ‘Gen Z Connect’ ತರಬೇತಿ ಯಶಸ್ವಿ

Ranks Institute–JCI Hosanagara Diamond Hosts Successful ‘Gen Z Connect’ Training Program

ಹೊಸನಗರ: ರ‍್ಯಾಂಕ್ಸ್ ಇನ್ಸ್ಟಿಟ್ಯೂಟ್, ಹೊಸನಗರ ಹಾಗೂ ಜೆಸಿಐ ಹೊಸನಗರ ಡೈಮಂಡ್ ಇವರ ಸಹಯೋಗದಲ್ಲಿ “IGNITE GenZ Connect” ಯುವಜನರ ವಿಶೇಷ ನಾಯಕತ್ವ ತರಬೇತಿ ಕಾರ್ಯಕ್ರಮವು ಆಗಸ್ಟ್ 15, 2026ರಂದು ಬಟ್ಟೆಮಲ್ಲಪ್ಪದ ಸಾರಾ ಸೆಂಟರ್‌ನಲ್ಲಿ ಯಶಸ್ವಿಯಾಗಿ ನಡೆಯಿತು.

Ranks Institute Hosanagara

ಯುವಜನರಲ್ಲಿ ನಾಯಕತ್ವ ಗುಣ, ಆತ್ಮವಿಶ್ವಾಸ, ಸಂವಹನ ಕೌಶಲ್ಯ ಹಾಗೂ ತಂಡವಾಗಿ ಕಾರ್ಯನಿರ್ವಹಿಸುವ ಮನೋಭಾವ ಬೆಳೆಸುವ ಉದ್ದೇಶದಿಂದ ಆಯೋಜಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ 38 ಯುವಜನರು ಉತ್ಸಾಹದಿಂದ ಭಾಗವಹಿಸಿದ್ದರು.

ಕಾರ್ಯಕ್ರಮದ ತರಬೇತುದಾರರಾದ ವಿನಾಯಕ ಅರಮನೆಯವರು ವೈಯಕ್ತಿಕ ವಿಕಸನ, ವಿವಿಧ ಚಟುವಟಿಕೆಗಳು ಹಾಗೂ ಪ್ರಾಯೋಗಿಕ ಕಲಿಕೆಯ ಮೂಲಕ ನಾಯಕತ್ವದ ಮಹತ್ವವನ್ನು ಯುವಜನರಿಗೆ ತಿಳಿಸಿಕೊಟ್ಟರು.

ರ‍್ಯಾಂಕ್ಸ್ ಇನ್ಸ್ಟಿಟ್ಯೂಟ್ ಹಾಗೂ ಜೆಸಿಐ ಹೊಸನಗರ ಡೈಮಂಡ್ ಆಯೋಜನೆಯಲ್ಲಿ, ನಡೆದ ಈ ತರಬೇತಿಯಲ್ಲಿ ರ‍್ಯಾಂಕ್ಸ್ ಇನ್ಸ್ಟಿಟ್ಯೂಟ್ ಮಾಲೀಕರಾದ ವಿನಾಯಕ ಕರಬ, ಜೆಸಿಐ ಹೊಸನಗರ ಡೈಮಂಡ್ ಅಧ್ಯಕ್ಷ ಜೆಸಿ ಸಂದೀಪ್ ಹೆಚ್. ಹಾಗೂ ಸಾರಾ ಸಂಸ್ಥೆಯ ಪ್ರಮುಖರು ಕಾರ್ಯಕ್ರಮಕ್ಕೆ ಸಹಕಾರ ನೀಡಿ, ಯುವಜನರು ಇಂತಹ ತರಬೇತಿಗಳ ಸದುಪಯೋಗ ಪಡೆದುಕೊಂಡು ಉತ್ತಮ ನಾಯಕರಾಗಿ ಬೆಳೆಯಬೇಕು ಎಂದು ಆಶಿಸಿದರು.

Ranks Institute Hosanagara

ಕಾರ್ಯಕ್ರಮದ ವಿಶೇಷ ಕ್ಷಣವಾಗಿ ರ‍್ಯಾಂಕ್ಸ್ ಇನ್ಸ್ಟಿಟ್ಯೂಟ್‌ನ ನೂತನ ವೆಬ್‌ಸೈಟ್ ಬಿಡುಗಡೆ ಮಾಡಲಾಯಿತು. ಇದರ ಮೂಲಕ ಸಂಸ್ಥೆಯ ಕೋರ್ಸ್‌ಗಳು, ತರಬೇತಿ ಕಾರ್ಯಕ್ರಮಗಳು ಹಾಗೂ ಇತರ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ಸುಲಭವಾಗಿ ತಲುಪಿಸುವ ಉದ್ದೇಶ ಹೊಂದಲಾಗಿದೆ.

Ranks Institute Hosanagara

ಕಾರ್ಯಕ್ರಮದ ಕೊನೆಯಲ್ಲಿ ತರಬೇತಿಯಲ್ಲಿ ಭಾಗವಹಿಸಿದ 38 ಯುವಜನರಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ಸ್ವಾತಂತ್ರ್ಯ ದಿನದಂದು ನಡೆದ “IGNITE GenZ Connect” ಕಾರ್ಯಕ್ರಮವು ಯುವಜನರಲ್ಲಿ ಹೊಸ ಚಿಂತನೆ, ಆತ್ಮವಿಶ್ವಾಸ ಮತ್ತು ನಾಯಕತ್ವದ ಆಸಕ್ತಿ ಮೂಡಿಸುವ ಮೂಲಕ ಅರ್ಥಪೂರ್ಣವಾಗಿ ಸಂಪನ್ನಗೊಂಡಿತು.

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.