ಶಿವಮೊಗ್ಗ : ನಡುರಾತ್ರಿ ಮೂವರು ದುಷ್ಕರ್ಮಿಗಳಿಂದ ಯುವಕನ ಬರ್ಬರ ಹತ್ಯೆ

ಶಿವಮೊಗ್ಗ : ನಗರದಲ್ಲಿ ನಡುರಾತ್ರಿ ವ್ಯಕ್ತಿಯೊಬ್ಬನನ್ನ ಬರ್ಬರವಾಗಿ ಹತ್ಯೆ ಮಾಡಲಾಗಿದೆ.ಜೈನುದ್ದೀನ್ (23) ಎಂಬ ರೌಡಿಶೀಟರ್ ನನ್ನು ದುಷ್ಕರ್ಮಿಗಳು ನಿನ್ನೆ ರಾತ್ರಿ 12ರ ಸಮಯದಲ್ಲಿ ನಗರದ ವಾದಿ-ಎ ಹುದಾ ಬಡಾವಣೆಯಲ್ಲಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಇತ್ತೀಚೆಗಷ್ಟೇ ವಾದಿ-ಎ ಹುದಾ ಬಡಾವಣೆಗೆ ಜೈನುದ್ದೀನ್ ಸ್ಥಳಾಂತರಗೊಂಡಿದ್ದ. ಜೈನುದ್ದೀನ್ ಮನೆಯ ಬಳಿ ನಿಂತು ಮಾತನಾಡುತ್ತಿದ್ದಾಗ ಮೂರು ಜನ ದುಷ್ಕರ್ಮಿಗಳು ಏಕಾಏಕಿ ಬಂದು ಲಾಂಗ್, ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ. ದಾಳಿಯಿಂದಾಗಿ ಜೈನುದ್ದಿನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಹಳೆ ದ್ವೇಷದ ಹಿನ್ನೆಲೆಯಲ್ಲಿ ಅಥವಾ ಯಾವ ಕಾರಣಕ್ಕಾಗಿ ಈ…

Read More

ಸಾಗರ – ತಾಳಗುಪ್ಪ ಮಧ್ಯ ರಸ್ತೆಯಲ್ಲಿ ಧಗಧಗನೇ ಹೊತ್ತಿ ಉರಿದ ಕಾರು :

ಸಾಗರ ತಾಳಗುಪ್ಪ ಮಧ್ಯೆ ಕಾನಲೆ ತಿರುವು ಬಳಿ ಸಾಗರದ ವೆಂಕಟಗಿರಿ ಎಂಬುವವರ ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ‌ಕಾಣಿಸಿಕೊಂಡಿದ್ದು ನಂತರ ನಿಲ್ಲಿಸಿದಾಗ ಸಂಪೂರ್ಣ ಬೆಂಕಿ ಹತ್ತಿಕೊಂಡಿದೆ.  ….  ಸಾಗರ ವೆಂಕಟಗಿರಿ ಎಂಬುವವರ ಸೇರಿದ ಕಾರು ತಾಳಗುಪ್ಪ ಸಮೀಪ ಕಾನಲೆ ತಿರುವಿನ ಬಳಿ ಈ ಘಟನೆ ನಡೆದಿದೆ.ಯಾವುದೇ ಪ್ರಾಣಾಪಾಯವಾಗಿಲ್ಲ. ಅಗ್ನಿಶಾಮಕ ದಳದ ಸಿಬ್ಬಂದಿಗಳು  ಬೆಂಕಿ ನಂದಿಸಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸ್ಥಳೀಯರು ಕೂಡ ಸಹಕಾರಿಸಿದ್ದಾರೆ.  ಸ್ಥಳಕ್ಕೆ ಪೊಲೀಸರು ಧಾವಿಸಿದ್ದಾರೆ. ವರದಿ : ಓಂಕಾರ್ ತಾಳಗುಪ್ಪ

Read More

ಪುನೀತ್ ರಾಜಕುಮಾರ್ ನಿಧನಕ್ಕೆ ಕನ್ನಡಪರ ಸಂಘಟನೆಗಳಿಂದ ನಾಳೆ ರಿಪ್ಪನ್ ಪೇಟೆ ಬಂದ್ ಗೆ ಕರೆ:

ರಿಪ್ಪನ್ ಪೇಟೆ : ಜನಪ್ರಿಯ ಚಲನಚಿತ್ರ ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಕಾಲಿಕ ನಿಧನಕ್ಕೆ ರಿಪ್ಪನ್ ಪೇಟೆಯ ಪುನೀತ್ ರಾಜ್ ಅಭಿಮಾನಿ ಬಳಗ ಹಾಗೂ ಕಲಾ ಕೌಸ್ತುಭ ಕನ್ನಡ ಸಂಘದ ವತಿಯಿಂದ ನಾಳೆ ಬೆಳಿಗ್ಗೆ 6ರಿಂದ 12 ಗಂಟೆ ತನಕ ರಿಪ್ಪನ್ ಪೇಟೆ ಸಂಪೂರ್ಣವಾಗಿ ಬಂದ್ ಗೆ ಕರೆ ನೀಡಲಾಗಿದೆ. ರಿಪ್ಪನ್ ಪೇಟೆಯ ವರ್ತಕರು, ಸಾರ್ವಜನಿಕರು ,ಪುನೀತ್ ರಾಜ್ ಅಭಿಮಾನಿ ಬಳಗದವರು, ಸ್ವಯಂ ಪ್ರೇರಿತರಾಗಿ ಬಂದ್ ಮಾಡಲಿದ್ದು , ಬೆಳಿಗ್ಗೆ 11:30 ಕ್ಕೆ  ಗ್ರಾಮ…

Read More

ಆನಂದಪುರದಲ್ಲಿ ಅಪ್ಪು ಅಭಿಮಾನಿ ಬಳಗದಿಂದ ಪುನೀತ್ ರಾಜ್ ಕುಮಾರ್ ಅಕಾಲಿಕ ಮರಣಕ್ಕೆ ಭಾವಪೂರ್ಣ ಶ್ರದ್ಧಾಂಜಲಿ

 ಆನಂದಪುರ : ಕನ್ನಡದ ಯುವರತ್ನ  ಪವರ್‌ ಸ್ಟಾರ್‌ ಪುನೀತ್ ರಾಜ್ ಕುಮಾರ್  ರವರ ಅಕಾಲಿಕ ಮರಣದಿಂದ ಇಡೀ ಕರುನಾಡೇ ಇದೀಗ ದುಃಖದಲ್ಲಿ ಮರುಗಿದೆ. ಕೋಟ್ಯಂತರ ಅಭಿಮಾನಿಗಳನ್ನು ಅಗಲಿದ ಕನ್ನಡದ ರಾಜಕುಮಾರನಿಗೆ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಆನಂದಪುರದಲ್ಲಿ ಅಪ್ಪು ಅಭಿಮಾನಿ ಬಳಗದವರು ಬೃಹತ್ ಆಕಾರದ ಕಟೌಟ್ ಗೆ ಹೂವಿನ ಹಾರ ಹಾಕಿ ಬಸ್ ನಿಲ್ದಾಣದ ಆವರಣದಲ್ಲಿ ಮೌನಾಚರಣೆಯೊಂದಿಗೆ ಭಾವಪೂರ್ಣ ಶ್ರದ್ಧಾಂಜಲಿಯನ್ನು ಅರ್ಪಿಸಿ ಅಗಲಿದ ನಾಯಕನಿಗೆ ಕಂಬನಿ ಮಿಡಿದರು. ವರದಿ: ಪವನ್ ಕುಮಾರ್ ಕಠಾರೆ

Read More

ಪುನೀತ್ ರಾಜ್‍ಕುಮಾರ್ ನಿಧನ ಹಿನ್ನಲೆ ಭದ್ರಾವತಿ ಸ್ವಯಂ ಪ್ರೇರಿತ ಬಂದ್ :

ಭದ್ರಾವತಿ : ನಟ ಪುನೀತ್ ರಾಜ್ ಕುಮಾರ್ ನಿಧನ ಹಿನ್ನಲೆಯಲ್ಲಿ ಭದ್ರಾವತಿಯ ಪಟ್ಟಣದ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದ್ ಮಾಡುವುದರ ಮೂಲಕ ವರ್ತಕರು ಗೌರವ ಸಲ್ಲಿಸಿದ್ದಾರೆ.  ಇನ್ನು ಚಾಮೇಗೌಡ ಲೈನ್ ನ  ರಾಜ್ ಕುಮಾರ್ ಅಭಿಮಾನಿ ಬಳಗದಿಂದ ಬಂದ್ ಮಾಡುವಂತೆ ಆಟೋಗಳಲ್ಲಿ ಪ್ರಚಾರ ಮಾಡಲಾಗುತ್ತಿದ್ದು ಬಂದ್ ಮಾಡುವಂತೆ ಮನವಿ ಮಾಡುತ್ತಿದ್ದಾರೆ.  ಹುಚ್ಚು ಅಭಿಮಾನಿಗಳು ಟೈರ್ ಗೆ ಬೆಂಕಿ ಹಚ್ಚಿ ಪ್ರಕ್ಷುಬ್ಧ ವಾತವರಣ ನಿರ್ಮಿಸುತ್ತಿದ್ದು ಪೊಲೀಸರು ಹುಚ್ಚು ಅಭಿಮಾನಿಗಳನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಯಾವುದೇ ರೀತಿಯಲ್ಲಿ ತೊಂದರೆ ಹಾಗೂ…

Read More

ಆಗುಂಬೆ ಘಾಟಿಯಲ್ಲಿ ಭೀಕರ ಅಪಘಾತ : ನಾಲ್ವರು ಸಾವು , ಐವರ ಸ್ಥಿತಿ ಗಂಭೀರ

  ಆಗುಂಬೆ: ಇಲ್ಲಿನ ಘಾಟಿಯ 9 ನೇ ತಿರುವಿನಲ್ಲಿ ಲಾರಿ ನಿಯಂತ್ರಣ ತಪ್ಪಿ ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ. ಐದು ಮಂದಿಗೆ ಗಂಭೀರ ಗಾಯಗಳಾಗಿದ್ದು, ಗಾಯಾಳುಗಳನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.  ಲಾರಿ ಘಾಟಿಯನ್ನು ಇಳಿಯುವಾಗ ನಿಯಂತ್ರಣ ತಪ್ಪಿ ಈ ದುರಂತ ಸಂಭವಿಸಿದೆ. ಲಾರಿಯೂ ಪ್ರಪಾತಕ್ಕೆ ಮಗುಚಿ ಬಿದ್ದಿದ್ದು, ಮೃತದೇಹಗಳನ್ನು ಮೇಲೆತ್ತಲು ಸ್ಥಳೀಯರು ಹರಸಾಹಸ ಪಡುತ್ತಿದ್ದಾರೆ.  ಹೆಬ್ರಿ ಮತ್ತು ಆಗುಂಬೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಾಯಾಳುಗಳಲ್ಲಿ ಕೆಲವರ ಸ್ಥಿತಿ,ಚಿಂತಾಜನಕವಾಗಿದೆ.

Read More

ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗೆ ಲಘು ಹೃದಯಾಘಾತ: ಆಸ್ಪತ್ರೆಗೆ ದಾಖಲು

ಬೆಂಗಳೂರು:  ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಲಘು ಹೃದಯಾಘಾತವಾಗಿದ್ದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಲಘು ಹೃದಯಾಘಾತದಿಂದ ಅಸ್ವಸ್ಥರಾದ ನಟ ಪುನೀತ್ ರಾಜ್ ಕುಮಾರ್ ಅವರನ್ನ ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರು ಇಸಿಜಿ ಸೇರಿ ಹಲವು ಪರೀಕ್ಷೆಗಳನ್ನ ಮಾಡುತ್ತಿದ್ದು ಪುನೀತ್ ರಾಜ್ ಕುಮಾರ್ ಅವರ ಆರೋಗ್ಯ ಗಂಭೀರವಾಗಿದೆ ಎನ್ನಲಾಗಿದೆ. ಹಾಗೆಯೇ ಐಸಿಯುನಲ್ಲಿ ನಟ ಪುನೀತ್ ರಾಜ್ ಕುಮಾರ್ ಗೆ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ನಟ ಪುನೀತ್ ರಾಜ್ ಕುಮಾರ್…

Read More

ತೀರ್ಥಹಳ್ಳಿಯ ಕಟ್ಟೆಹಕ್ಲು ಬಳಿ ವಾಹನ ಸವಾರರ ಮೇಲೆ ಮಚ್ಚಿನಿಂದ ದಾಳಿ ನೆಡೆಸಿದ್ದ ಆರೋಪಿ ಅಂದರ್

ತೀರ್ಥಹಳ್ಳಿ : ತಾಲೂಕಿನ ಕಟ್ಟೆಹಕ್ಕಲಿನ ಪ್ರಾರ್ಥಮಿಕ ಶಾಲೆಯ ಬಳಿ ವಾಹನ ಸವಾರರ ಮೇಲೆ ಮಚ್ಚಿನಿಂದ ದಾಳಿ ನಡೆಸುತ್ತಿದ್ದ ವ್ಯಕ್ತಿಯನ್ನು ತೀರ್ಥಹಳ್ಳಿ ಪೊಲೀಸರು ಬಂಧಿಸಿದ್ದಾರೆ.  ಅ. 26 ರಾತ್ರಿ ಶಾಲೆಯ ಸಮೀಪ ಕಾರಿನ ಮತ್ತು ಬೈಕಿನ ಮೇಲೆ ಕಟ್ಟೆಹಕ್ಲು ನಿವಾಸಿ ಸಂದೀಪ್ ಮಚ್ಚಿನಿಂದ ದಾಳಿ ನಡೆಸಿದ್ದಾನೆ.   ಬೆಂಗಳೂರಿನ ನಿವಾಸಿ  ಮಹದೇವ ಪ್ರಸಾದ್ ಅವರು ಪತ್ನಿ, ಪತ್ನಿಯ ತಮ್ಮನ ಹೆಂಡತಿ, ದೊಡ್ಡಪ್ಪನ ಮಗ ಹಾಗೂ ಅವರ ಪತ್ನಿ ಯೊಂದಿಗೆ ಕಾರಿನಲ್ಲಿ ತೀರ್ಥಹಳ್ಳಿಗೆ ತಲುಪಿ ಕಟ್ಟೆಹಕ್ಲು ಮೂಲಕ ಹೆದ್ದೂರು ಹೊರಬೈಲಿಗೆ ಹೋಗುವಾಗ ಕಟ್ಟೆಹಕ್ಲುವಿನ…

Read More

ಅಮೃತ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡಕ್ಕಾಗಿ ನಾವು ಅಭಿಯಾನ.

  ರಿಪ್ಪನ್ ಪೇಟೆ: ಅಮೃತ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಗುರುವಾರ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕನ್ನಡಕ್ಕಾಗಿ ನಾವು ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.  ಕಾರ್ಯಕ್ರಮದಲ್ಲಿ ಕನ್ನಡದ ಉಪನ್ಯಾಸಕ ರಾಜು ಶಿವಪುರ ಮಾತನಾಡಿ ಈ ಬಾರಿಯ ರಾಜ್ಯೋತ್ಸವವನ್ನು ವಿಶಿಷ್ಟವಾಗಿ ಆಚರಿಸಲು ಸರಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕನ್ನಡಕ್ಕಾಗಿ ನಾವು ಎಂಬ ವಿಭಿನ್ನ ಅಭಿಯಾನ ಹಮ್ಮಿಕೊಂಡಿದೆ ಪ್ರತಿಯೊಬ್ಬರು ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಲು ಕೈಜೋಡಿಸಬೇಕೆಂದರು.  ಎರಡು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆ ತನ್ನದೇ ಆದ ಭಾಷಾ ಸಂಸ್ಕೃತಿ…

Read More

ಏಕ ಕಾಲದಲ್ಲಿ 5 ಲಕ್ಷ ಜನ ಕನ್ನಡ ಗೀತೆಗಳನ್ನು ಹಾಡಿದ್ದು, ಇತಿಹಾಸ ಸೃಷ್ಟಿಸಿದ ದಿನ: ಕೆ ಎಸ್ ಈಶ್ವರಪ್ಪ

ಶಿವಮೊಗ್ಗ: ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಇಂದು ಕನ್ನಡದ ವಿಶೇಷ ಮೂರು ಗೀತೆಗಳನ್ನು ಹಾಡಿದ್ದು, ಇತಿಹಾಸ ಸೃಷ್ಟಿಸಿದ ದಿನವಾಗಿದೆ ಎಂದು ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್ ಈಶ್ವರಪ್ಪ ಅವರು ತಿಳಿಸಿದ್ದಾರೆ. ಇಂದು ನಗರದಲ್ಲಿ ನಡೆದ ಲಕ್ಷ ಕಂಠಗಳಲ್ಲಿ ಕನ್ನಡ ಗೀತಗಾಯನ ಕಾರ್ಯಕ್ರಮದ ನಿಮಿತ್ತ ಜಿಲ್ಲಾಧಿಕಾರಿಗಳ ಕಚೇರಿ ಎಂದು ನಡೆದ ಸಾಮೂಹಿಕ ಗಾಯನ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅವರು ಮಾತನಾಡಿದರು. ರಾಜ್ಯದ ಇತಿಹಾಸದಲ್ಲಿ ಈ ದಿನವನ್ನು ನೆನಪಿಟ್ಟುಕೊಳ್ಳಬೇಕು. ಈ ಯಶಸ್ವಿ ಕಾರ್ಯಕ್ರಮಕ್ಕೆ ಕಾರಣರಾದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ…

Read More