ತೀರ್ಥಹಳ್ಳಿ : ತಾಲೂಕಿನ ಕಟ್ಟೆಹಕ್ಕಲಿನ ಪ್ರಾರ್ಥಮಿಕ ಶಾಲೆಯ ಬಳಿ ವಾಹನ ಸವಾರರ ಮೇಲೆ ಮಚ್ಚಿನಿಂದ ದಾಳಿ ನಡೆಸುತ್ತಿದ್ದ ವ್ಯಕ್ತಿಯನ್ನು ತೀರ್ಥಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಅ. 26 ರಾತ್ರಿ ಶಾಲೆಯ ಸಮೀಪ ಕಾರಿನ ಮತ್ತು ಬೈಕಿನ ಮೇಲೆ ಕಟ್ಟೆಹಕ್ಲು ನಿವಾಸಿ ಸಂದೀಪ್ ಮಚ್ಚಿನಿಂದ ದಾಳಿ ನಡೆಸಿದ್ದಾನೆ.
ಬೆಂಗಳೂರಿನ ನಿವಾಸಿ ಮಹದೇವ ಪ್ರಸಾದ್ ಅವರು ಪತ್ನಿ, ಪತ್ನಿಯ ತಮ್ಮನ ಹೆಂಡತಿ, ದೊಡ್ಡಪ್ಪನ ಮಗ ಹಾಗೂ ಅವರ ಪತ್ನಿ ಯೊಂದಿಗೆ ಕಾರಿನಲ್ಲಿ ತೀರ್ಥಹಳ್ಳಿಗೆ ತಲುಪಿ ಕಟ್ಟೆಹಕ್ಲು ಮೂಲಕ ಹೆದ್ದೂರು ಹೊರಬೈಲಿಗೆ ಹೋಗುವಾಗ ಕಟ್ಟೆಹಕ್ಲುವಿನ ಶಾಲೆಯ ಬಳಿ ಸಂದೀಪ ದಿಡೀರನೆ ಅಡ್ಡಕಟ್ಟಿ ಮಚ್ಚು ಬೀಸಿದ್ದಾನೆ.
ಇದರಿಂದ ಕಾರಿನ ಹಿಂಬಾಗದ ಬ್ಯಾನಟ್, ಗ್ಲಾಜುಗಳು ಡ್ಯಾಮೇಜ್ ಆಗಿವೆ. ಇದೇರೀತಿ ದ್ವೀಚಕ್ರ ವಾಹನದಲ್ಲಿ ಬಂದ ಕೃಷ್ಣಮೂರ್ತಿ ಹಾಗೂ ಸುಬ್ರಹ್ಮಣ್ಯ ಎಂಬುವರನ್ನೂ ಅಡ್ಡಕಟ್ಟಿ ಮಚ್ಚಿನಿಂದ ದಾಳಿ ನಡೆಸಿದ್ದಾನೆ. ಕೃಷ್ಣಮೂರ್ತಿ ಅವರು ಹೆಲ್ಮೆಟ್ ಹಾಕಿಕೊಂಡ ಪರಿಣಾಮ ಅದು ಅವರ ಭುಜಕ್ಕೆ ಬಡೆದಿದೆ. ಸುಬ್ರಹ್ಮಣ್ಯರವರ ಬೈಕಿನ ಮೇಲೆ ಹೊಡೆತ ಬಿದ್ದಿದೆ.
ಇನ್ನು ಬೈಕಿನಲ್ಲಿ ಬರುತ್ತಿದ್ದ ಇಬ್ಬರ ಮೇಲು ದಾಳಿ ನಡೆಸಿದ್ದಾನೆ.
ಈ ಕಾರಣಕ್ಕೆ ಪೊಲೀಸರು ಸಂದೀಪ್ ನನ್ನು ಬಂಧಿಸಿದ್ದು ಆತ ಮಾನಸಿಕ ಅಸ್ವಸ್ಥ ಎಂದು ತಿಳಿದುಬಂದಿದೆ.