Headlines

ಅಮೃತ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡಕ್ಕಾಗಿ ನಾವು ಅಭಿಯಾನ.

 

ರಿಪ್ಪನ್ ಪೇಟೆ: ಅಮೃತ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಗುರುವಾರ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕನ್ನಡಕ್ಕಾಗಿ ನಾವು ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
 ಕಾರ್ಯಕ್ರಮದಲ್ಲಿ ಕನ್ನಡದ ಉಪನ್ಯಾಸಕ ರಾಜು ಶಿವಪುರ ಮಾತನಾಡಿ ಈ ಬಾರಿಯ ರಾಜ್ಯೋತ್ಸವವನ್ನು ವಿಶಿಷ್ಟವಾಗಿ ಆಚರಿಸಲು ಸರಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕನ್ನಡಕ್ಕಾಗಿ ನಾವು ಎಂಬ ವಿಭಿನ್ನ ಅಭಿಯಾನ ಹಮ್ಮಿಕೊಂಡಿದೆ ಪ್ರತಿಯೊಬ್ಬರು ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಲು ಕೈಜೋಡಿಸಬೇಕೆಂದರು.
 ಎರಡು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆ ತನ್ನದೇ ಆದ ಭಾಷಾ ಸಂಸ್ಕೃತಿ ಹೊಂದಿದ್ದು ಕನ್ನಡ ನೆಲ ಜಲ ಸಂಸ್ಕೃತಿ ಪರಂಪರೆಯ ಮೇಲೆ ಪ್ರತಿಯೊಬ್ಬ ಕನ್ನಡಿಗನೂ ಅಭಿಮಾನ ಇಟ್ಟುಕೊಳ್ಳಬೇಕು ಎಂದರು. ಭಾರತ ದೇಶದ ಉನ್ನತ ಹುದ್ದೆಗಳಾದ ಐಎಎಸ್ ಐಪಿಎಸ್ ಐಎಫ್ಎಸ್ ಹುದ್ದೆಗಳ ಲಿಖಿತ ಪರೀಕ್ಷೆ ಗಳು ಕನ್ನಡದಲ್ಲಿ ಬರೆಯಲು  ಅವಕಾಶ ವಿದೆ. ವಿದ್ಯಾರ್ಥಿಗಳು ಈ ಬಗ್ಗೆ ಆಸಕ್ತಿಯನ್ನು ಹೊಂದಿ ಕಠಿಣ ಶ್ರಮ ಹಾಗೂ ಪ್ರಾಮಾಣಿಕ ಪ್ರಯತ್ನದಿಂದ ಅಭ್ಯಾಸಮಾಡಿದರೆ ದೇಶದ ಉನ್ನತ ಉದ್ಯೋಗಗಳನ್ನು ಅಲಂಕರಿಸಬಹುದು ಎಂದು ತಿಳಿಸಿದರು.ಕನ್ನಡ ಭಾಷೆ ಸಂಪೂರ್ಣವಾಗಿ ಆಡಳಿತ ಭಾಷೆ ಆಗಬೇಕಾಗಿದೆ ಎಂದರು.
 ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಉಪನ್ಯಾಸಕರುಗಳು  ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳು  ಕನ್ನಡ ಪ್ರತಿಜ್ಞಾವಿಧಿ ಸ್ವೀಕರಿಸಿದರು ಕುವೆಂಪು ರಚಿತ ಬಾರಿಸು ಕನ್ನಡ ಡಿಂಡಿಮವ. ಕೆ ಎಸ್ ನಿಸಾರ್ ಅಹಮದ್ ರಚಿತ ಜೋಗದ ಸಿರಿ ಬೆಳಕಿನಲ್ಲಿ ಮತ್ತು ಹಂಸಲೇಖ ರಚಿತ ಹುಟ್ಟಿದರೆ ಕನ್ನಡನಾಡಲ್ಲಿ ಹುಟ್ಟಬೇಕು ಗೀತೆಗಳನ್ನು ಸಾಮೂಹಿಕವಾಗಿ ಹಾಡಲಾಯಿತು.

 ಕಾಲೇಜಿನ ಪ್ರಾಚಾರ್ಯ ಮಹ್ಮದ್ ಹಜರತ್ ಅಲಿ ಉಪನ್ಯಾಸಕರುಗಳಾದ ಹಾಲಪ್ಪ ಸಂಕೂ ರು.ಶಂಕ್ರಪ್ಪ.ಶಾಂತ. ಸತೀಶ್.ಬೆಂಜಮಿನ್ ಫ್ರಾನ್ಸಿಸ್. ಪ್ರಕಾಶ್. ನಾಗೇಶ್ ಸೋಮಯಾಜಿ. ಸಬಾ ಸ್ಟಿನ್.ಮಧು ಶೆಟ್ಟಿ.

Leave a Reply

Your email address will not be published. Required fields are marked *