w
Headlines
Home » ಅತಿಶಯ ಶ್ರೀಕ್ಷೇತ್ರ ಹೊಂಬುಜ | ಶ್ರೀ ಮಹಾರಥೋತ್ಸವ – ಭಕ್ತಿಭಾವ ಸಂಗಮ

ಅತಿಶಯ ಶ್ರೀಕ್ಷೇತ್ರ ಹೊಂಬುಜ | ಶ್ರೀ ಮಹಾರಥೋತ್ಸವ – ಭಕ್ತಿಭಾವ ಸಂಗಮ

GridArt 20260313

The annual Maha Rathotsava of Shri Parshwanath Swamy and Goddess Padmavathi Devi was celebrated with great devotion at the historic Jain pilgrimage center Hombuja, under the divine guidance of Swastishri Dr. Devendrakirti Bhattaraka Mahaswamiji.

ಅತಿಶಯ ಶ್ರೀಕ್ಷೇತ್ರ ಹೊಂಬುಜ | ಶ್ರೀ ಮಹಾರಥೋತ್ಸವ – ಭಕ್ತಿಭಾವ ಸಂಗಮ

ಹೊಂಬುಜ : ಐತಿಹಾಸಿಕ ಜೈನ ಧಾರ್ಮಿಕ ಹಿನ್ನಲೆಯ ಅತಿಶಯ ಶ್ರೀಕ್ಷೇತ್ರ ಹೊಂಬುಜ ಶ್ರೀ ಪಾರ್ಶ್ವನಾಥ ಸ್ವಾಮಿ, ಜಗನ್ಮಾತೆ ಯಕ್ಷಿ ಶ್ರೀ ಪದ್ಮಾವತಿ ದೇವಿ ದಿವ್ಯ ಪಾವನ ಸನ್ನಿಧಿಯಲ್ಲಿ ವಾರ್ಷಿಕ ಮಹಾರಥೋತ್ಸವವು ಮೂಲಾ ನಕ್ಷತ್ರದಲ್ಲಿ ರಥಾರೋಹಣವು ಜಿನಾಗಮೋಕ್ತ ವಿಧಿಪೂರ್ವಕವಾಗಿ ಮಧ್ಯಾಹ್ನ 12.30 ಗಂಟೆಗೆ ನೆರವೇರಿತು.

“ಶ್ರೀ ಪಾರ್ಶ್ವನಾಥ ಕೀ ಜಯ”, “ಶ್ರೀ ಪದ್ಮಾವತಿ ದೇವಿ ಕೀ ಜಯ”, “ಅಹಿಂಸಾ ಪರಮೋ ಧರ್ಮ ಕೀ ಜಯ”, “ಜೈನ ಧರ್ಮ ಕೀ ಜಯ” ಎಂಬ ಭಕ್ತಿಭಾವದ ಜಯಘೋಷಗಳು ಊರು ಪರೂರು ಭಕ್ತರಿಂದ ಮೊಳಗಿದವು. ಗಜರಾಜ ಅಲಂಕೃತ ಮಹಾರಥಾರೋಹಣ ಜಿನಬಿಂಬದ ದರ್ಶನ ಮಾಡಿ ನಮಸ್ಕರಿಸುವ ದೃಶ್ಯ ಕಂಡು ಭಕ್ತರು ಭಾವಪರವಶರಾದರು.

ಶ್ರೀ ಜೈನಮಠದ ಪೀಠಾಧೀಶರಾಗಿರುವ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳ ದಿವ್ಯ ಸಾನಿಧ್ಯ, ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ಮೂಲಾ ನಕ್ಷತ್ರದಲ್ಲಿ ನಿತ್ಯವಿಧಿ ಸಹಿತ ಮಹಾನೈವೇದ್ಯ ಪೂಜೆ, ಬಲಿ ಉತ್ಸವ ನೆರವೇರಿತು.

ಕಂಬದಹಳ್ಳಿ ಪರಮಪೂಜ್ಯ ಸ್ವಸ್ತಿಶ್ರೀ ಭಾನುಕೀರ್ತಿ ಭಟ್ಟಾರಕ ಮಹಾಸ್ವಾಮಿಗಳು ಧಾರ್ಮಿಕ ವಿಧಿಗಳಲ್ಲಿ ಉಪಸ್ಥಿತರಿದ್ದರು.

ಸಂಜೆ ಮಹಾರಥಯಾತ್ರೆ ಹಾಗೂ ಶೋಭಾಯಾತ್ರೆಯಲ್ಲಿ ಭಕ್ತರು ಭಾಗಿಯಾದರು. ಸೇವಾಕರ್ತರಾದ ಶ್ರೀ ವಿಜಯ್ ಪಾಟ್ನಿ, ಶ್ರೀಮತಿ ಸರಿತಾ ಪಾಟ್ನಿ, ಧನಲಕ್ಷ್ಮಿ ಕುಟುಂಬ, ಇಂಫಾಲ್, ಮಣಿಪುರ ಬಳಗದವರನ್ನು ಪರಮಪೂಜ್ಯ ಸ್ವಸ್ತಿಶ್ರೀಗಳು ಆಶೀರ್ವದಿಸಿದರು.

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.