Headlines

ಆಗುಂಬೆ ಘಾಟಿಯಲ್ಲಿ ಭೀಕರ ಅಪಘಾತ : ನಾಲ್ವರು ಸಾವು , ಐವರ ಸ್ಥಿತಿ ಗಂಭೀರ

 

ಆಗುಂಬೆ: ಇಲ್ಲಿನ ಘಾಟಿಯ 9 ನೇ ತಿರುವಿನಲ್ಲಿ ಲಾರಿ ನಿಯಂತ್ರಣ ತಪ್ಪಿ ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ. ಐದು ಮಂದಿಗೆ ಗಂಭೀರ ಗಾಯಗಳಾಗಿದ್ದು, ಗಾಯಾಳುಗಳನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.

 ಲಾರಿ ಘಾಟಿಯನ್ನು ಇಳಿಯುವಾಗ ನಿಯಂತ್ರಣ ತಪ್ಪಿ ಈ ದುರಂತ ಸಂಭವಿಸಿದೆ. ಲಾರಿಯೂ ಪ್ರಪಾತಕ್ಕೆ ಮಗುಚಿ ಬಿದ್ದಿದ್ದು, ಮೃತದೇಹಗಳನ್ನು ಮೇಲೆತ್ತಲು ಸ್ಥಳೀಯರು ಹರಸಾಹಸ ಪಡುತ್ತಿದ್ದಾರೆ.
 ಹೆಬ್ರಿ ಮತ್ತು ಆಗುಂಬೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಾಯಾಳುಗಳಲ್ಲಿ ಕೆಲವರ ಸ್ಥಿತಿ,ಚಿಂತಾಜನಕವಾಗಿದೆ.

Leave a Reply

Your email address will not be published. Required fields are marked *