ಸಾಗರ: ನಗರ ಹಾಗೂ ಗ್ರಾಮಾಂತರ ಭಾಗದಲ್ಲಿ ಅಕ್ರಮವಾಗಿ ಗೋವು ಕಳ್ಳತನ ಮಾಡುತ್ತಿದ್ದ ಗೋ ಕಳ್ಳರನ್ನು ಸಾಗರ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಐದು ಆರೋಪಿ ಗಳನ್ನು ಹಾಗೂ ದನಕಳ್ಳತನಕ್ಕೆ ಬಳಸುತ್ತಿದ್ದ ಕಪ್ಪು ಬಣ್ಣದ ಸ್ಕಾರ್ಪಿಯೋ ಕಾರನ್ನು ವಶಕ್ಕೆ ಪಡೆದಿದ್ದಾರೆ.
ರಾತ್ರಿ ವೇಳೆ ಗೋವುಗಳನ್ನು ವಾಹನದಲ್ಲಿ ತುಂಬಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಗೋ ಕಳ್ಳತನ ಮಾಡುವ ಐದು ಜನರ ಗುಂಪನ್ನು ವಾಹನ ಸಮೇತ ಶನಿವಾರ ಸಾಗರ ಪೇಟೆ ಮತ್ತು ಗ್ರಾಮಾಂತರ ಠಾಣೆಯ ಪೊಲೀಸರು ಜಂಟಿಯಾಗಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಶಿವಮೊಗ್ಗ ಮೂಲದ ಸಯ್ಯದ್ ದಸ್ತಗೀರ್@ ತನ್ನು(24) ವರ್ಷ. ಸಿಖಂದರ್ (32) ತುಂಗಾ ನಗರ. ಅಮಾನುಲ್ಲಾ@ಅಮಾನ್ (22) ಶಿವಮೊಗ್ಗ. ಹಾರ್ನಳ್ಳಿ ಮೂಲದ ಮೊಹಮ್ಮದ್ ರೂಹಿತ್(24) ಹಾಗೂ ಮಂಗಳೂರು ಬಜಿಪೆ ಮೂಲದ ಫೈಝಲ್(37) ಬಂಧಿತ ಆರೋಪಿಗಳು ಹಾಗೂ ಕಪ್ಪು ಬಣ್ಣದ KA 34 M 3701ನೊಂದಾಣಿಯ ಸ್ಕಾರ್ಪಿಯೋ ಕಾರ್ ವಶ ಪಡಿಸಿಕೊಳ್ಳಲಾಗಿದೆ.
ಬಂಧಿತ ಈ ಐದು ಜನರ ತಂಡ ಸಾಗರ. ತೀರ್ಥಹಳ್ಳಿ ಹೊಸನಗರ. ಶಿವಮೊಗ್ಗ ಪಟ್ಟಣ ಮತ್ತು ಗ್ರಾಮಾಂತರ ಭಾಗಗಳಲ್ಲಿ ರಾತ್ರಿ ವೇಳೆ ಗೋವುಗಳನ್ನು ಕಳುವು ಮಾಡಿ ವಾಹನದಲ್ಲಿ ತುಂಬಿ ಸಾಗಾಟ ಮಾಡುತ್ತಿದ್ದರು.ಆರೋಪಿಗಳ ಜಾಡು ಹಿಡಿದು ಹೊರಟ ಸಾಗರ ಪೊಲೀಸರು ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಬಂಧಿಸಿ ಹೆಡೆಮುರಿಕಟ್ಟಿದ್ದಾರೆ. ಕರ್ನಾಟಕ ಗೋಹತ್ಯೆ ನಿಷೇಧ ಅಡಿಯಲ್ಲಿ ಸಾಗರ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿವಮೊಗ್ಗ ಜಿಲ್ಲಾ ವರಿಷ್ಠಾಧಿಕಾರಿ ಬಿ. ಎಂ. ಲಕ್ಷ್ಮಿ ಪ್ರಸಾದ್. ಹೆಚ್ಚುವರಿ ರಕ್ಷಾಣಾಧಿಕಾರಿ ಶೇಕರ್ ಟೆಕ್ಕಣ್ಣನವರ್ ಸೂಚನೆಯಂತೆ.* *ಸಾಗರ DYSP ವಿನಾಯಕ್ ಎನ್ ಶೇಟಗೆರಿ ನಿರ್ದೇಶನದಂತೆ ಸಾಗರ ಪೇಟೆ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಅಶೋಕ್ ಕುಮಾರ್ ಮತ್ತು ಸಾಗರ ಗ್ರಾಮಾಂತರ ಪೊಲೀಸ್ ಇನ್ಸ್ಪೆಕ್ಟರ್ ಗಿರೀಶ್* ರವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ ಕಾರ್ಯಚರಣೆ ನಡೆಸಿ ಗೋ ಕಳ್ಳತನದಲ್ಲಿ ಭಾಗಿಯಾಗಿದ್ದ ಐದು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಕಾರ್ಗಲ್ ಪೊಲೀಸ್ ಠಾಣೆಯ ಪಿ ಐ ತಿರುಮಲೇಶ್ , ಕ್ರೈಮ್ ಸಿಬ್ಬಂದಿಗಳಾದ ಸಂತೋಷ್ ನಾಯ್ಕ್, ಹಜರತ್ ಅಲಿ, ಶ್ರೀಧರ್,ಅಶೋಕ್.ತಾರಾನಾಥ್. ಬಸವರಾಜ್, ರಮೇಶ್, ಮಲ್ಲೇಶ,ಜಯಂತ್ ರಾಘು, ರವಿ, ಪ್ರಕಾಶ್ ಅಂಬಳಿ ಹಾಗೂ ಇನ್ನಿತರರು ಕಾರ್ಯಾಚರಣೆಯಲ್ಲಿದ್ದರು.
ದನ ಕಳ್ಳತನ ಮಾಡುತಿದ್ದ ಖದೀಮರ ಹೆಡೆ ಮುರಿ ಕಟ್ಟಿದ ಸಾಗರ ಪೊಲೀಸ ಕಾರ್ಯ ವೈಖರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆಯ ಮಹಾ ಪೂರವೆ ಹರಿದು ಬರುತ್ತಿದೆ..”