Headlines

ಪುನೀತ್ ರಾಜ್‍ಕುಮಾರ್ ಗೆ ಶ್ರದ್ದಾಂಜಲಿ : ರಿಪ್ಪನ್ ಪೇಟೆ ಸಂಪೂರ್ಣ ಬಂದ್

ರಿಪ್ಪನ್​​​​ಪೇಟೆ : ಪುನೀತ್ ರಾಜ್​ಕುಮಾರ್ ಅಗಲಿಕೆಯಿಂದ ಇಡೀ ರಾಜ್ಯ ಶೋಕ ಸಾಗರದಲ್ಲಿ ಮುಳುಗಿದೆ. ಈ ನಡುವೆ ರಿಪ್ಪನ್​​ಪೇಟೆ ನಗರ ಸಂಪೂರ್ಣ ಬಂದ್ ಆಗಿದೆ. ಎಲ್ಲಾ ವ್ಯಾಪಾರಸ್ಥರು ತಮ್ಮ ಅಂಗಡಿ ಬಂದ್ ಮಾಡಿದ್ದು, ಪಟ್ಟಣ ಖಾಲಿ ಖಾಲಿಯಾಗಿದೆ.
ಪಟ್ಟಣದ ಸರ್ಕಲ್​​​​​ನಲ್ಲಿ ಪುನೀತ್ ರಾಜ್​​ಕುಮಾರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅಂತಿಮ ನಮನ ಸಲ್ಲಿಸಲಾಗಿದೆ. ಪಟ್ಟಣದ ಮೆಡಿಕಲ್ ಶಾಪ್​​​ಗಳನ್ನು ಹೊರತುಪಡಿಸಿ ಉಳಿದೆಲ್ಲಾ ಅಂಗಡಿ ಬಂದ್ ಮಾಡಲಾಗಿದ್ದು, ಕೇವಲ ಬೆರಳೆಣಿಕೆಯ ಬಸ್​​ ಸಂಚಾರ ಮಾಡುತ್ತಿವೆ.
ಕನ್ನಡ ಚಲನಚಿತ್ರರಂಗದ ಮೇರುನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಿಧನದ ಪ್ರಯುಕ್ತ ಪೇಟೆಯಲ್ಲಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಕಲಾ ಕೌಸ್ತುಭ ಕನ್ನಡ ಸಂಘ ಮತ್ತು ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಶನಿವಾರ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು.ರಿಪ್ಪನ್ ಪೇಟೆಯ ವಿನಾಯಕ ವೃತ್ತದಲ್ಲಿ ಬೃಹತ್ ಆಕಾರದ ಕಟೌಟ್ ಗೆ ಮಾಲಾರ್ಪಣೆ ಮಾಡಿ ನಂತರ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮ ನೆರವೇರಿತು. ಪುನಿತ್ ರಾಜಕುಮಾರ್ ನಿಧನದ ಸಲುವಾಗಿ ರಿಪ್ಪನ್ ಪೇಟೆಯಲ್ಲಿ ಬೆಳಿಗ್ಗೆ 6 ಗಂಟೆಯಿಂದ 12:00 ಗಂಟೆ ತನಕ ಪೂರ್ಣವಾಗಿ ಸ್ವಯಂ ಪ್ರೇರಿತರಾಗಿ ಬಂದ್ ಮಾಡಲಾಯಿತು.ಈ ಸಂದರ್ಭದಲ್ಲಿ ಪುನೀತ್ ರಾಜಕುಮಾರ್ ಸ್ಮರಣಾರ್ಥವಾಗಿ ಪಟ್ಟಣದ ಯಾವುದಾದರೂ ಒಂದು  ವೃತ್ತ ಹಾಗೂ ರಸ್ತೆಗೆ ಪುನೀತ್ ಹೆಸರಿಡುವ ಕುರಿತು ನಿರ್ಧರಿಸಲಾಯಿತು.

ಜೊತೆಗೆ ಪುನೀತ್ ರಾಜ್ ಅಭಿಮಾನಿ ಬಳಗ ದಿಂದ ಶೆಟ್ಟಿಬೀಡು, ಹೊಂಬುಜ ,ಗರ್ತಿಕೆರೆ, ಹಿರೇಜೇನಿ,ಕೋಡೂರು,ಸೂಡೂರು ಸೇರಿದಂತೆ ಹಲವಾರು ಭಾಗಗಳಲ್ಲಿ ಪುನೀತ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಈ ಶ್ರದ್ಧಾಂಜಲಿ ಸಮಾರಂಭದಲ್ಲಿ ಕಲಾ ಕೌಸ್ತುಭ ಕನ್ನಡ ಸಂಘದ ಅಧ್ಯಕ್ಷೆ ಪದ್ಮ ಸುರೇಶ್,ಗೌರವ ಅಧ್ಯಕ್ಷ ಹಿರಿಯಣ್ಣ ಭಂಡಾರಿ, ತ.ಮ ನರಸಿಂಹ,ಸುರೇಶ್ ಸಿಂಗ್,ಎನ್ ಸತೀಶ್,ಎಂ.ಬಿ ಮಂಜುನಾಥ್,ಆರ್.ಡಿ  ಶೀಲಾ, ಲಕ್ಷ್ಮಿ ಶ್ರೀನಿವಾಸ್, ನಾಗರತ್ನ ದೇವರಾಜ್, ಸುಧೀಂದ್ರ ಪೂಜಾರಿ,ಪಿಯುಸ್ ರೋಡ್ರಿಗಸ್,ಆರ್. ಎನ್ ಮಂಜುನಾಥ್,ಮಂಜ ನಾಯಕ್,ಶ್ರೀಧರ್ ಉಪಸ್ಥಿತರಿದ್ದರು.




ವರದಿ:ದೇವರಾಜ್ ಆರಗ

Leave a Reply

Your email address will not be published. Required fields are marked *