Headlines

ಹೊಸನಗರ ತಾಲೂಕ್ ಬಿಜೆಪಿ ಅಧ್ಯಕ್ಷ ಮತ್ತಿಮನೆ ಸುಬ್ರಹ್ಮಣ್ಯ ಹೃದಯಾಘಾತದಿಂದ ನಿಧನ

ಹೊಸನಗರ ತಾಲೂಕ್ ಬಿಜೆಪಿ ಅಧ್ಯಕ್ಷ ಮತ್ತಿಮನೆ ಸುಬ್ರಹ್ಮಣ್ಯ ಹೃದಯಾಘಾತದಿಂದ ನಿಧನ ಹೊಸನಗರ, ನ.21: ತಾಲೂಕು ಬಿಜೆಪಿ ಅಧ್ಯಕ್ಷ, ಮಾಜಿ ತಾಲೂಕು ಪಂಚಾಯತ್ ಸದಸ್ಯರಾಗಿದ್ದ ಹಿರಿಯ ನಾಯಕ ಮತ್ತಿಮನೆ ಸುಬ್ರಹ್ಮಣ್ಯ ಅವರು ತೀವ್ರ ಹೃದಯಾಘಾತದಿಂದ ಅಕಾಲಿಕವಾಗಿ ವಿಧಿವಶರಾಗಿದ್ದಾರೆ. ಇಂದು ಮಧ್ಯಾಹ್ನ ಏಕಾಏಕಿ ಅಸ್ವಸ್ಥತೆಯನ್ನು ಅನುಭವಿಸಿದ ಸುಬ್ಬಣ್ಣ ಅವರನ್ನು ಕುಟುಂಬ ಸದಸ್ಯರು ತಕ್ಷಣವೇ ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರೂ, ವೈದ್ಯಕೀಯ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದರು ಎಂದು ಕುಟುಂಬ ಮೂಲಗಳು ತಿಳಿಸಿವೆ. ಸುಬ್ಬಣ್ಣ ಅವರು ದಶಕಗಳ ಕಾಲ ರಾಜಕೀಯ ಹಾಗೂ…

Read More

ವಿದೇಶದಿಂದ ತಾಯ್ನಾಡಿಗೆ ಬಂದ ಎರಡು ದಿನಗಳಲ್ಲಿ ವಿಧಿಯ ಆಟ – ಹೃದಯಾಘಾತದಿಂದ ಯುವಕ ಸಾವು

Fate strikes within two days of returning to the homeland from abroad – young man dies of heart attack ವಿದೇಶದಿಂದ ತಾಯ್ನಾಡಿಗೆ ಬಂದ ಎರಡು ದಿನಗಳಲ್ಲಿ ವಿಧಿಯ ಆಟ – ಹೃದಯಾಘಾತದಿಂದ ಯುವಕ ಸಾವು ರಿಪ್ಪನ್ ಪೇಟೆ : ಇಲ್ಲಿನ ಮದೀನಾ ಕಾಲೋನಿಯ ಯುವಕನೊಬ್ಬ ತೀವ್ರ ಹೃದಯಾಘಾತದಿಂದ ಮೃತಪಟ್ಟ ಘಟನೆ ಇಂದು ಬೆಳಿಗ್ಗೆ ನಡೆದಿದೆ. ಇಮ್ರಾನ್ (36) ಮೃತಪಟ್ಟ ದುರ್ಧೈವಿಯಾಗಿದ್ದಾರೆ. ಕಳೆದ ಮೂರು ವರ್ಷದಿಂದ ಸೌದಿ ಅರೇಬಿಯಾದಲ್ಲಿ ಚಾಲಕ ವೃತ್ತಿ…

Read More

ಹೊಸನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ. ಚಂದ್ರಮೌಳಿಗೆ ಮಾತೃವಿಯೋಗ

ಹೊಸನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ. ಚಂದ್ರಮೌಳಿಗೆ ಮಾತೃವಿಯೋಗ ಹೊಸನಗರ: ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ. ಚಂದ್ರಮೌಳಿ ಅವರ ತಾಯಿ ಗಿರಿಜಮ್ಮ (90) ಅಲ್ಪಕಾಲದ ಅನಾರೋಗ್ಯದಿಂದ ಗುರುವಾರ ಮಧ್ಯಾಹ್ನ 12 ಗಂಟೆಗೆ ತಮ್ಮ ಸ್ವಗೃಹ ಗೌಡಕೊಪ್ಪದಲ್ಲಿ ನಿಧನರಾದರು. ಮೃತರು ನಾಲ್ವರು ಪುತ್ರರು, ಇಬ್ಬರು ಪುತ್ರಿಯರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ಕೋಡೂರಿನ ಗೌಡಕೊಪ್ಪದಲ್ಲಿರುವ ಅವರ ಜಮೀನಿನಲ್ಲಿ ವೀರಶೈವ ಲಿಂಗಾಯತ ಸಂಪ್ರದಾಯದಂತೆ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ….

Read More

RIPPONPETE | ಪತ್ರಕರ್ತ ಚಿದಾನಂದ ಸ್ವಾಮಿರವರಿಗೆ ಮಾತೃ ವಿಯೋಗ

ಪತ್ರಕರ್ತ ಚಿದಾನಂದ ಸ್ವಾಮಿರವರಿಗೆ ಮಾತೃ ವಿಯೋಗ ರಿಪ್ಪನ್‌ಪೇಟೆ: ಪಟ್ಟಣದಲ್ಲಿ ವಿಜಯವಾಣಿ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿರುವ ಚಿದಾನಂದ ಸ್ವಾಮಿ ಅವರ ತಾಯಿ ಮುರಿಗೆಮ್ಮ (85) ಅವರು ನಿಧನರಾಗಿದ್ದಾರೆ. ಶಿವಮೊಗ್ಗ ರಸ್ತೆಯ ನಿವಾಸಿಗಿದ್ದ ದಿ. ಗುರುಪಾದಯ್ಯರವರ ಧರ್ಮಪತ್ನಿ ಹಾಗೂ ಪತ್ರಕರ್ತ ಚಿದಾನಂದ ಸ್ವಾಮಿಯವರ ತಾಯಿ ಮುರಿಗೆಮ್ಮ (85) ಅಲ್ಪಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು ಅವರು ಭಾನುವಾರ ಸಂಜೆ ತಮ್ಮ ಸ್ವಗೃಹದಲ್ಲಿ ಲಿಂಗೈಕ್ಯರಾದರು. ಮೃತರು ಪುತ್ರರು, ಸೊಸೆ, ಮಕ್ಕಳು , ಹಾಗೂ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ. ಸಂತಾಪ :ಅಲ್ಪಕಾಲದ ಅನಾರೋಗ್ಯದಿಂದ ಲಿಂಗೈಕ್ಯರಾದ…

Read More

ರಿಪ್ಪನ್‌ಪೇಟೆ – 33 ವರ್ಷದ ಮಹಿಳೆ ಕ್ಯಾನ್ಸರ್‌ಗೆ ಬಲಿ | “ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಸೋತ ಗೀತಾ”

ರಿಪ್ಪನ್‌ಪೇಟೆ – 33 ವರ್ಷದ ಮಹಿಳೆ ಕ್ಯಾನ್ಸರ್‌ಗೆ ಬಲಿ | “ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಸೋತ ಗೀತಾ” ರಿಪ್ಪನ್‌ಪೇಟೆ – ಮಹಾಮಾರಿ ಕ್ಯಾನ್ಸರ್ ಗೆ ಇನ್ನೂ ಬಾಳಿ ಬದುಕಬೇಕಾಗಿದ್ದ ಯುವತಿಯೊಬ್ಬಳು ಮೃತಪಟ್ಟಿರುವ ಘಟನೆ ಪಟ್ಟಣದ ವ್ಯಾಪ್ತಿಯಲ್ಲಿ ನಡೆದಿದೆ. ಗವಟೂರು ಗ್ರಾಮದ 33 ವರ್ಷದ ಗೀತಾ ಎಂಬ ಯುವತಿ ಮಹಾಮಾರಿ ಕ್ಯಾನ್ಸರ್‌ನಿಂದ ಚಿಕಿತ್ಸೆ ಫಲಿಸದೇ ಇಂದು ನಿಧನರಾಗಿದ್ದಾರೆ. ಪತಿ ಅನಿಲ್ ಕುಮಾರ್ ಅವರನ್ನು ಅಗಲಿದ ಗೀತಾ ಕಳೆದ ಕೆಲವು ತಿಂಗಳಿನಿಂದ ದುಸ್ತರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಮೂಲತಃ ಆರೋಗ್ಯವಂತಳಾಗಿದ್ದ…

Read More

ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪ ನಿಧನ

ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪ ನಿಧನ ಕನ್ನಡ ಸಾಹಿತ್ಯ ಲೋಕದ ದಿಗ್ಗಜ, ಅಕ್ಷರ ಮಾಂತ್ರಿಕ, ಸರಸ್ವತಿ ಸಮ್ಮಾನ್ ಪುರಸ್ಕೃತ, ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪ (SL Bhyrappa) ನಿಧನರಾಗಿದ್ದಾರೆ. ವಯೋ ಸಹಜ ಖಾಯಿಲೆಯಿಂದ ಬಳಲುತ್ತಿದ್ದ ಅವರು, ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. 1931ರ ಆಗಸ್ಟ್ 20ರಂದು ಜನಿಸಿದ ಸಂತೆಶಿವರ ಲಿಂಗಣ್ಣಯ್ಯ ಭೈರಪ್ಪ ಅವರು ಕನ್ನಡದ ಜನಪ್ರಿಯ ಕಾದಂಬರಿಕಾರರಾಗಿ ಗುರುತಿಸಿಕೊಂಡಿದ್ದರು. ಅವರ ಕಾದಂಬರಿಗಳು ವಿಷಯ, ರಚನೆ ಮತ್ತು ಪಾತ್ರಗಳ ನಿರೂಪಣೆಯಲ್ಲಿ ವಿಶಿಷ್ಟವಾಗಿವೆ.ಭೈರಪ್ಪ ಅವರ ಕೃತಿಗಳು ನವೋದಯ, ನವ್ಯ, ಬಂದಾಯ…

Read More

ವೈದ್ಯಕೀಯ ಕ್ಷೇತ್ರದ ಹಿರಿಯ ಚರ್ಮರೋಗ ತಜ್ಞ ಡಾ. ಕೆ.ಬಿ. ನಟರಾಜ್ ನಿಧನ

ವೈದ್ಯಕೀಯ ಕ್ಷೇತ್ರದ ಹಿರಿಯ ತಜ್ಞ ಡಾ. ಕೆ.ಬಿ. ನಟರಾಜ್ ನಿಧನ ರಿಪ್ಪನ್ ಪೇಟೆ: ಪಟ್ಟಣದ ಶಿವಮೊಗ್ಗ ರಸ್ತೆ ನಿವಾಸಿ ಹಾಗೂ ಖ್ಯಾತ ಚರ್ಮರೋಗ ತಜ್ಞ ಡಾ. ಕೆ.ಬಿ. ನಟರಾಜ ಅವರು ಶನಿವಾರ ರಾತ್ರಿ ಶಿವಮೊಗ್ಗದ ತಮ್ಮ ನಿವಾಸದಲ್ಲಿ ನಿಧನರಾದರು. ಮೃತರು ಒರ್ವ ಪುತ್ರನನ್ನು ಒಳಗೊಂಡಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಮೆಗ್ಗಾನ್ ಆಸ್ಪತ್ರೆಗೆ ಸೇವೆ ಸಲ್ಲಿಸಿದ್ದ ಅವರು, ನಿವೃತ್ತಿಯ ನಂತರ ದುರ್ಗಿಗುಡಿಯಲ್ಲಿ ಖಾಸಗಿ ಸಲಹಾ ವೈದ್ಯರಾಗಿ ತಮ್ಮ ಸೇವೆ ಮುಂದುವರಿಸಿಕೊಂಡಿದ್ದರು. ಮೃತರ ಅಂತ್ಯಕ್ರಿಯೆ ಶಿವಮೊಗ್ಗದ ಹರಕೆರೆಯ ರುಧ್ರಭೂಮಿಯಲ್ಲಿ ನೆರವೇರಿತು….

Read More

ಕಲಾ ಕೌಸ್ತುಭ ಕನ್ನಡ ಸಂಘದ ಮಾಜಿ ಅಧ್ಯಕ್ಷ ಗ್ಯಾರೇಜ್ ರಾಮು ನಿಧನ

ಕಲಾ ಕೌಸ್ತುಭ ಕನ್ನಡ ಸಂಘದ ಮಾಜಿ ಅಧ್ಯಕ್ಷ ಗ್ಯಾರೇಜ್ ರಾಮು ನಿಧನ ಕನ್ನಡ ಪರ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ರಾಮಚಂದ್ರ (54) ಕಲಾ ಕೌಸ್ತುಭ ಕನ್ನಡ ಸಂಘದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು,ಪಟ್ಟಣದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗ್ಯಾರೇಜ್ ರಾಮು ಎಂದೇ ಪ್ರಸಿದ್ದರಾಗಿದ್ದ ಅವರು ಜನಮನ್ನಣೆ ಗಳಿಸಿದ್ದರು. ರಿಪ್ಪನ್ ಪೇಟೆ : ಕಲಾ ಕೌಸ್ತುಭ ಕನ್ನಡ ಸಂಘದ ಮಾಜಿ ಅಧ್ಯಕ್ಷರಾದ ಹೊಸನಗರ ರಸ್ತೆಯ ನಿವಾಸಿ ರಾಮಚಂದ್ರ (ಗ್ಯಾರೇಜ್ ರಾಮು) ಅನಾರೋಗ್ಯದ. ಹಿನ್ನಲೆಯಲ್ಲಿ ಮಣಿಪಾಲ್ ಆಸ್ಪತ್ರೆಯಲ್ಲಿ ಇಂದು ರಾತ್ರಿ ನಿಧನರಾಗಿದ್ದಾರೆ. ಕಳೆದ ಕೆಲವು…

Read More

ಕನ್ನಡ ಚಿತ್ರರಂಗದ ಹಾಸ್ಯ ದಿಗ್ಗಜ ಬ್ಯಾಂಕ್ ಜನಾರ್ಧನ್ ನಿಧನ

ಕನ್ನಡ ಚಿತ್ರರಂಗದ ಹಾಸ್ಯ ದಿಗ್ಗಜ ಬ್ಯಾಂಕ್ ಜನಾರ್ಧನ್ ನಿಧನ ಕನ್ನಡದ ಹಿರಿಯ ಹಾಸ್ಯ ನಟ ಬ್ಯಾಂಕ್‌ ಜನಾರ್ಧನ್‌ (76) ಅವರು ನಿಧನರಾಗಿದ್ದಾರೆ. ಎ.13 ರ ರವಿವಾರ ಮಧ್ಯರಾತ್ರಿ ಸುಮಾರು 2.30ಕ್ಕೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ನಟ ಕೊನೆಯುಸಿರೆಳೆದಿದ್ದಾರೆ. ಹಲವು ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಕುಟುಂಬಸ್ಥರು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿದ್ದರು. 1965 ರಲ್ಲಿ ಅಂದು ಜಯಲಕ್ಷ್ಮಿ ಬ್ಯಾಂಕ್ ನಲ್ಲಿ 50 ರೂಪಾಯಿಗೆ ಕೆಲಸಕ್ಕೆ ಸೇರಿದ್ದರು. ರಾತ್ರಿ ವೇಳೆ ಮಲ್ಲಿಕಾರ್ಜುನ ಟೂರಿಂಗ್ ಟಾಕೀಸ್ ನಲ್ಲಿ ಅಸಿಸ್ಟೆಂಟ್…

Read More

ಬಾಳೂರು ಗ್ರಾಪಂ ಮಾಜಿ ಅಧ್ಯಕ್ಷ ಕುಕ್ಕಳಲೆ ನಾಗರಾಜ್ ಗೌಡ ನಿಧನ

ಬಾಳೂರು ಗ್ರಾಪಂ ಮಾಜಿ ಅಧ್ಯಕ್ಷ ಕುಕ್ಕಳಲೆ ನಾಗರಾಜ್ ಗೌಡ ನಿಧನ ರಿಪ್ಪನ್ ಪೇಟೆ : ಇಲ್ಲಿನ ಬಾಳೂರು ಗ್ರಾ.ಪಂ ಮಾಜಿ ಅಧ್ಯಕ್ಷರು ಹಾಗೂ ವೀರಶೈವ ಲಿಂಗಾಯತ ಸಮಾಜದ ಹಿರಿಯ ಮುಖಂಡರಾದ ಕುಕ್ಕಳಲೆ ಕೆ.ಆರ್ ನಾಗರಾಜ ಗೌಡರವರು ಹೃದಯಾಘಾತದಿಂದ ಬೆಳಗಿನ ಜಾವ ನಿಧನರಾಗಿದ್ದಾರೆ. ಬಾಳೂರು ಗ್ರಾಪಂ ಅಧ್ಯಕ್ಷರಾಗಿ ಹಾಗೂ ವೀರಶೈವ ಸಮಾಜದ ಮುಖಂಡರಾಗಿ ವಿವಿಧ ಸಮಾಜಮುಖಿ ಕಾರ್ಯಗಳಲ್ಲಿ ಮುಂಚೂಣಿಯಲ್ಲಿ ನಾಗರಾಜ್ ಗೌಡ ರವರು ಅಲ್ಪ ಕಾಲದ ಆರೋಗ್ಯ ಸಮಸ್ಯೆಯಿಂದ ಬಳಲುತಿದ್ದರು. ಕುಕ್ಕಳಲೆ ರೇಣುಕಪ್ಪ ಗೌಡ ರವರ ಪುತ್ರರಾದ ನಾಗರಾಜ್…

Read More