Headlines

ರಿಪ್ಪನ್ ಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಣಪತಿ ರವರಿಗೆ ಮಾತೃ ವಿಯೋಗ

ರಿಪ್ಪನ್ ಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಣಪತಿ ರವರಿಗೆ ಮಾತೃ ವಿಯೋಗ

ರಿಪ್ಪನ್ ಪೇಟೆ : ಇಲ್ಲಿನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಗ್ರಾಪಂ ಸದಸ್ಯರಾದ ಗಣಪತಿ ಗವಟೂರು ರವರ ತಾಯಿ ಗೌರಮ್ಮ (80) ವಯೋಸಹಜ ನಿಧನರಾಗಿದ್ದಾರೆ.

ಅಲ್ಪ ಕಾಲದ ಅನಾರೋಗ್ಯದಿಂದ ಬಳಲುತಿದ್ದ ಅವರು ಪಟ್ಟಣದ ಸಮೀಪದ ನೇರಲೆಮನೆಯ ಸ್ವಗೃಹದಲ್ಲಿ ಇಂದು ಸಂಜೆ ಕೊನೆಯುಸಿರೆಳೆದರು.ನೇರಲೆಮನೆ ಸ್ವಗೃಹದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಬುಧವಾರ ಬೆಳಿಗ್ಗೆ ನೇರಲೆಮನೆ ಗ್ರಾಮದಲ್ಲಿ ಮೃತರ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.