Headlines

ಕೋಡೂರು ಸಮೀಪ ಜಾನುವಾರು ಮೇಲೆ ಹುಲಿ ದಾಳಿ ಶಂಕೆ -ಸ್ಥಳೀಯರಲ್ಲಿ ಆತಂಕ!!

ಕೋಡೂರು ಸಮೀಪ ಜಾನುವಾರು ಮೇಲೆ ಹುಲಿ ದಾಳಿ ಶಂಕೆ –
ಸ್ಥಳೀಯರಲ್ಲಿ ಆತಂಕ!!

Suspected tiger attack on cattle near Kodur – locals worried!!

ಕೋಡೂರು ಸಮೀಪ ಜಾನುವಾರು ಮೇಲೆ ಹುಲಿ ದಾಳಿ ಶಂಕೆ –
ಸ್ಥಳೀಯರಲ್ಲಿ ಆತಂಕ!!

Suspected tiger attack on cattle near Kodur – locals worried!!

ರಿಪ್ಪನ್ ಪೇಟೆ : ಇಲ್ಲಿನ ಕೋಡೂರು ಸಮೀಪದ ಕೀಳಂಬಿ ಗ್ರಾಮದಲ್ಲಿ ಜಾನುವಾರುವೊಂದರ ಮೇಲೆ ಕಾಡುಪ್ರಾಣಿಯೊಂದು ದಾಳಿ ನಡೆಸಿ ಕೊಂದಿರುವ ಘಟನೆ ವರದಿಯಾಗಿದ್ದು, ಇದು ಹುಲಿ ದಾಳಿಯೇ ಎಂಬ ಶಂಕೆ ಸ್ಥಳೀಯರಲ್ಲಿ ವ್ಯಕ್ತವಾಗಿದೆ. ಘಟನೆ ನಡೆದ ನಂತರ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.

ಕೀಳಂಬಿ ಗ್ರಾಮದ ಸರ್ಕಾರಿ ಶಾಲೆಯ ಹತ್ತಿರ ಇರುವ ಕೆರೆಯ ಸಮೀಪ, ರಘುರಾಮ್ ಎಂಬುವವರಿಗೆ ಸೇರಿದ ಗಬ್ಬದ ಜಾನುವಾರು ಮೇಲೆ ಕಾಡುಪ್ರಾಣಿಯೊಂದು ದಾಳಿ ನಡೆಸಿದೆ ಎನ್ನಲಾಗಿದೆ. ಸಂಜೆ ಜಾನುವಾರಿನ ಶವ ಪತ್ತೆಯಾಗಿದ್ದು, ದೇಹದ ಮೇಲೆ ಆಳವಾದ ಗಾಯದ ಗುರುತುಗಳು ಕಂಡುಬಂದಿವೆ. ಕುತ್ತಿಗೆ ಮತ್ತು ದೇಹದ ಭಾಗಗಳಲ್ಲಿ ಕಂಡುಬಂದ ಗಾಯಗಳನ್ನು ಗಮನಿಸಿದ ಗ್ರಾಮಸ್ಥರು, ಇದು ಹುಲಿಯ ದಾಳಿ ಇರಬಹುದೆಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಕೋಡೂರು ಹಾಗೂ ಸುತ್ತಮುತ್ತಲ ಗ್ರಾಮ ಪ್ರದೇಶಗಳಲ್ಲಿ ಕಾಡುಪ್ರಾಣಿಗಳ ಸಂಚಾರ ಹೆಚ್ಚಾಗಿರುವ ಬಗ್ಗೆ ಗ್ರಾಮಸ್ಥರು ಆತಂಕ ವ್ಯಕ್ತಪಡಿಸುತ್ತಿದ್ದು, ಜನರ ಜೀವ ಹಾಗೂ ಜಾನುವಾರುಗಳ ಸುರಕ್ಷತೆ ಬಗ್ಗೆ ಕಳವಳ ಹೆಚ್ಚಾಗಿದೆ. ಶಾಲೆ, ಕೆರೆ ಮತ್ತು ಕೃಷಿ ಭೂಮಿಗಳ ಸಮೀಪ ಈ ರೀತಿಯ ಘಟನೆ ನಡೆದಿರುವುದರಿಂದ ಮಕ್ಕಳು ಹಾಗೂ ರೈತರು ಹೊರಗೆ ಸಂಚರಿಸುವುದಕ್ಕೂ ಭಯಪಡುವ ಸ್ಥಿತಿ ನಿರ್ಮಾಣವಾಗಿದೆ.

ಘಟನೆಯ ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಸ್ಥಳೀಯರು ಭೇಟಿ ನೀಡಿ ಪರಿಶೀಲನೆ ನಡೆಸಿ, ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು, ದಾಳಿಯ ಸ್ವರೂಪವನ್ನು ಖಚಿತಪಡಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಅಲ್ಲದೆ, ಕಾಡುಪ್ರಾಣಿಗಳ ಸಂಚಾರವಿರುವ ಪ್ರದೇಶಗಳಲ್ಲಿ ನಿಗಾ ವಹಿಸಿ, ಗ್ರಾಮಸ್ಥರಿಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.

ಅರಣ್ಯ ಇಲಾಖೆ ತನಿಖೆಯ ಬಳಿಕವೇ ದಾಳಿ ಹುಲಿಯಿಂದಲೇ ಆಗಿದೆಯೇ ಎಂಬುದು ಸ್ಪಷ್ಟವಾಗಲಿದೆ, ಹದಿನೈದು ದಿನಗಳ ಹಿಂದೆ ಕೊಳವಳ್ಳಿ ಗ್ರಾಮದಲ್ಲಿ ಚಿರತೆಯೊಂದು ಜಾನುವಾರು ಮೇಲೆ ಎರಗಿ ಸಾಯಿಸಿತ್ತು ಅದಲ್ಲದೇ ಈ ಭಾಗದಲ್ಲಿ ಹುಲಿ ಇರುವ ಬಗ್ಗೆ ಯಾವುದೇ ಪೂರಕ ಪುರಾವೆಗಳಿಲ್ಲದೇ ಇರುವುದರಿಂದ ಇದು ಹುಲಿಯೋ ಅಥವಾ ಚಿರತೆಯೋ ಎಂಬುವುದು ಅರಣ್ಯ ಇಲಾಖೆಯ ತನಿಖೆಯಿಂದ ತಿಳಿದುಬರಬೇಕಾಗಿದೆ.