Headlines

ಇನ್‌ಸ್ಟಾಗ್ರಾಮ್‌ನಲ್ಲಿ ಮಹಿಳೆಯ ಖಾಸಗಿ ಫೋಟೋ ಪೋಸ್ಟ್ – ಡಿಲೀಟ್ ಮಾಡಲು ಹಣಕ್ಕೆ ಬೇಡಿಕೆ, ದೂರು ದಾಖಲು

ಇನ್‌ಸ್ಟಾಗ್ರಾಮ್‌ನಲ್ಲಿ ಮಹಿಳೆಯ ಖಾಸಗಿ ಫೋಟೋ ಪೋಸ್ಟ್ – ಡಿಲೀಟ್ ಮಾಡಲು ಹಣಕ್ಕೆ ಬೇಡಿಕೆ, ದೂರು ದಾಖಲು

In a shocking cybercrime incident in Shivamogga, a man posted a woman’s private photos on Instagram and demanded money to delete them. A case has been registered at CEN Police Station.

ಶಿವಮೊಗ್ಗ: ಮಹಿಳೆಯೊಬ್ಬರ ಖಾಸಗಿ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿ, ಅವುಗಳನ್ನು ಅಳಿಸಲು ಹಣಕ್ಕಾಗಿ ಬೇಡಿಕೆ ಇಟ್ಟಿರುವ ಗಂಭೀರ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ.

ದೂರುದಾರ ಮಹಿಳೆಗೆ ಕಳೆದ ಎರಡು ವರ್ಷಗಳಿಂದ ವ್ಯಕ್ತಿಯೊಬ್ಬರ ಪರಿಚಯವಾಗಿತ್ತು. ಇಬ್ಬರು ಒಟ್ಟಿಗೆ ಇದ್ದ ಸಂದರ್ಭ ಆ ವ್ಯಕ್ತಿ ತನ್ನ ಮೊಬೈಲ್‌ನಲ್ಲಿ ಮಹಿಳೆಯ ಖಾಸಗಿ ಫೋಟೋಗಳನ್ನು ತೆಗೆದುಕೊಂಡಿದ್ದ ಎನ್ನಲಾಗಿದೆ. ನಂತರದ ದಿನಗಳಲ್ಲಿ ಇಬ್ಬರ ನಡುವೆ ಜಗಳ ಉಂಟಾಗಿ, ಮಹಿಳೆ ಆತನಿಂದ ದೂರಾಗಿದ್ದರು.

ಇದೇ ಕಾರಣಕ್ಕೆ ಕೋಪಗೊಂಡ ಆರೋಪಿತ ವ್ಯಕ್ತಿ, ತನ್ನ ಬಳಿ ಇದ್ದ ಮಹಿಳೆಯ ಖಾಸಗಿ ಚಿತ್ರಗಳನ್ನು ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸಾರ್ವಜನಿಕವಾಗಿ ಪೋಸ್ಟ್ ಮಾಡಿ ಕಿರುಕುಳ ನೀಡಲು ಆರಂಭಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಅಷ್ಟೇ ಅಲ್ಲದೆ, ವಾಟ್ಸ್‌ಆಪ್ ಮೂಲಕ ಮಹಿಳೆಗೆ ಅದೇ ಫೋಟೋಗಳನ್ನು ಕಳುಹಿಸಿ, ಅವುಗಳನ್ನು ಡಿಲೀಟ್ ಮಾಡಬೇಕಾದರೆ ಹಣ ನೀಡಬೇಕು ಎಂದು ಬೆದರಿಕೆ ಹಾಕಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ.

ಈ ಘಟನೆ ಸಂಬಂಧ ಶಿವಮೊಗ್ಗ ಸಿಇಎನ್ (ಸೈಬರ್, ಎಕನಾಮಿಕ್ ಮತ್ತು ನಾರ್ಕೋಟಿಕ್ಸ್) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿತನ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.