Headlines

ಕರ್ತವ್ಯದಲ್ಲಿದ್ದ ಹೋಂ ಗಾರ್ಡ್‌ಗೆ ಕಮಾಂಡೆಂಟ್ ಕಪಾಳಮೋಕ್ಷ , ಜಾತಿ ನಿಂದನೆ ಮಾಡಿದ್ರಾ !? ಹೋಮ್ ಗಾರ್ಡ್ ಆರೋಪವೇನು!?

A Home Guard from Hosanagara, Mahesh (Madakari), has alleged physical assault and caste abuse by Shivamogga District Home Guard Commandant Chetan Kumar. The incident reportedly occurred at the commandant’s office, and the injured Home Guard is currently receiving treatment at Hosanagara Government Hospital.

ಕರ್ತವ್ಯದಲ್ಲಿದ್ದ ಹೋಂ ಗಾರ್ಡ್‌ಗೆ ಕಮಾಂಡೆಂಟ್ ಕಪಾಳಮೋಕ್ಷ , ಜಾತಿ ನಿಂದನೆ ಮಾಡಿದ್ರಾ !? ಹೋಮ್ ಗಾರ್ಡ್ ಆರೋಪವೇನು!?

ಶಿವಮೊಗ್ಗ: ಕರ್ತವ್ಯ ನಿರತ ಹೋಂ ಗಾರ್ಡ್ ಮೇಲೆ ಶಿವಮೊಗ್ಗ ಜಿಲ್ಲಾ ಹೋಂ ಗಾರ್ಡ್ ಕಮಾಂಡೆಂಟ್ ದೈಹಿಕ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಹೊಸನಗರ ತಾಲ್ಲೂಕಿನ ಹೋಂ ಗಾರ್ಡ್ ಮಹೇಶ್ (ಮದಕರಿ) ಅವರ ಮೇಲೆ ಶಿವಮೊಗ್ಗ ಜಿಲ್ಲಾ ಹೋಂ ಗಾರ್ಡ್ ಕಮಾಂಡೆಂಟ್ ಚೇತನ್ ಕುಮಾರ್ ಅವರು ಹಲ್ಲೆ ನಡೆಸಿದ್ದಾರೆ ಎಂದು ಮಹೇಶ್ ಆರೋಪಿಸಿದ್ದಾರೆ.

ಶುಕ್ರವಾರ ಶಿವಮೊಗ್ಗದಲ್ಲಿರುವ ಜಿಲ್ಲಾ ಕಮಾಂಡೆಂಟ್ ಕಚೇರಿಯಲ್ಲಿ ಸಾರ್ವಜನಿಕರ ಎದುರೇ ಕಪಾಳಮೋಕ್ಷ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

ಘಟನೆಯಿಂದ ತತ್ತರಿಸಿದ ಮಹೇಶ್ ಅವರನ್ನು ಹೊಸನಗರದ ಸರ್ಕಾರಿ ಸಮುದಾಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆ ನಂತರ ತಾನು ಮಾನಸಿಕವಾಗಿ ಜರ್ಜರಿತನಾಗಿದ್ದೇನೆ ಎಂದು ಮಹೇಶ್ ಹೇಳಿದ್ದಾರೆ.

ತನ್ನ ಸಾವಿಗೆ ಜಿಲ್ಲಾ ಕಮಾಂಡೆಂಟ್ ಚೇತನ್ ಕುಮಾರ್ ಅವರೇ ಕಾರಣರಾಗುತ್ತಾರೆ ಎಂದು ಕೂಡ ಮಹೇಶ್ ಆರೋಪಿಸಿದ್ದಾರೆ. ಕಳೆದ 15 ವರ್ಷಗಳಿಂದ ಹೆಂಡತಿ ಮಕ್ಕಳನ್ನು ಬಿಟ್ಟು ಹೋಂ ಗಾರ್ಡ್ ಸೇವೆ ಮಾಡುತ್ತಿದ್ದರೂ ಸಾರ್ವಜನಿಕವಾಗಿ ಅವಮಾನ ಮಾಡಿ ಕಪಾಳಮೋಕ್ಷ ಮಾಡುವ ಜೊತೆಗೆ ಜಾತಿ ನಿಂದನೆ ಮಾಡಿದ್ದಾರೆ ಎಂದು ಅವರು ದೂರಿದ್ದಾರೆ.

ಇದೇ ವೇಳೆ ಆಸ್ಪತ್ರೆಯಿಂದ ದೂರು ದಾಖಲಿಸಲು ಹೆಚ್‌ಎಂಆರ್ ಮೂಲಕ ಮಾಹಿತಿ ಕಳುಹಿಸಿದ್ದರೂ ಇದುವರೆಗೆ ಪೊಲೀಸರು ಆಸ್ಪತ್ರೆಗೆ ಬಂದು ದೂರು ಸ್ವೀಕರಿಸಿಲ್ಲ ಎಂದು ಮಹೇಶ್ ಆರೋಪಿಸಿದ್ದಾರೆ.

ಈ ಘಟನೆ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಗಮನ ಹರಿಸಿ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಮಹೇಶ್ ಆಗ್ರಹಿಸಿದ್ದಾರೆ.

About The Author