ರಿಪ್ಪನ್ ಪೇಟೆ : ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿರುವ ಶಾಸಕ ಹರತಾಳು ಹಾಲಪ್ಪ

ರಿಪ್ಪನ್ ಪೇಟೆ : ಸಾಗರ – ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕರು ಮತ್ತು ಎಂಎಸ್ ಐಎಲ್ ಅಧ್ಯಕ್ಷರಾದ ಹರತಾಳು ಹಾಲಪ್ಪ ರವರು ಗುರುವಾರ ಕೆರೆಹಳ್ಳಿ ಹೋಬಳಿಯಾದ್ಯಂತ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮಗಳ ಪಟ್ಟಿ : 10:00 AM:- ರಿಪ್ಪನಪೇಟೆ ಗ್ರಾ.ಪಂ, ಕುಕ್ಕಳಲೆ ರಸ್ತೆಯಿಂದ ನಿಂಗಪ್ಪ ಪುರುಷೋತ್ತಮ ಮನೆಯವರೆಗಿನ ಎಸ್.ಸಿ ಕಾಲೋನಿ ರಸ್ತೆ ಅಭಿವೃದ್ಧಿ ಕಾಮಗಾರಿ ವೀಕ್ಷಣೆ. (20 ಲಕ್ಷ) 10:30 AM:- ತಮ್ಮಡಿಕೊಪ್ಪ ಧನಂಜಯ್ ಇವರ ಮನೆ ಭೇಟಿ. 11:00…

Read More

ದಲಿತ ರೈತನಿಗೆ ವಂಚನೆ ವಿರೋಧಿಸಿ ಅರೆಬೆತ್ತಲೆ ತಲೆ ಕೆಳಗಾಗಿ ನಿಂತು ಪ್ರತಿಭಟಿಸಿದ ಟಿ ಆರ್ ಕೃಷ್ಣಪ್ಪ

ರಿಪ್ಪನ್‌ಪೇಟೆ : ಗವಟೂರು ಗ್ರಾಮದ ಕಂದಾಯ ಇಲಾಖೆಯ ಸರ್ವೆ ನಂಬರ್ 157/2 ರಲ್ಲಿ ಪರಿಶಿಷ್ಟ ಜನಾಂಗದ ನಾಗಪ್ಪ ಎಂಬುವವರಿಗೆ 2 ಎಕರೆ ಜಮೀನು ದರಖಾಸ್ತು ಯೋಜನೆಯಡಿ ಮಂಜೂರು ಮಾಡಿ  ಹಕ್ಕು ಪತ್ರವನ್ನು ನೀಡಲಾಗಿತ್ತು.  ಈಗ ಸದರಿ ಜಾಗವನ್ನು ಎಂ.ಪಿ.ಎಂ ಅರಣ್ಯ ಇಲಾಖೆಗೆ 40 ವರ್ಷಕ್ಕೆ ಲೀಸ್ ನೀಡಲಾಗಿ ಅವರು ಅರಣ್ಯ ಪ್ರದೇಶದಲ್ಲಿ ಅಕೇಶಿಯಾ ಮರಗಳನ್ನು ಬೆಳಸಿ ಕಟಾವು ಮಾಡಲಾಗುತ್ತಿದ್ದು ಈ ಜಾಗ ಪರಿಶಿಷ್ಟ ಜನಾಂಗದ ನಾಗಪ್ಪ ಎಂಬುವರಿಗೆ ಮಂಜೂರಾಗಿ ಹಕ್ಕುಪತ್ರ ಸಹ ಇದ್ದು ಗಿಡಗಳನ್ನು ಫಲಾನುಭವಿಯೇ ಬೆಳೆಸಲಾಗಿತ್ತೆಂದು…

Read More

ರಿಪ್ಪನ್ ಪೇಟೆ : ಕೃಷಿ ಹೊಂಡದಲ್ಲಿ ಬಿದ್ದು ವಿದ್ಯಾರ್ಥಿ ಸಾವು

 ರಿಪ್ಪನ್ ಪೇಟೆ : ಇಲ್ಲಿನ ಸಮೀಪದ ಹಾರಂಬಳ್ಳಿಯಲ್ಲಿ  ಮನೆಯ ಸಮೀಪದಲ್ಲಿದ್ದ ಕೃಷಿ ಹೊಂಡದಲ್ಲಿ ಬಿದ್ದು ವಿದ್ಯಾರ್ಥಿಯೋರ್ವ ಸಾವನ್ನಪ್ಪಿದ್ದಾನೆ. ವಾಸು ಎಂಬುವರ ಪುತ್ರ  ಭರತ್ ರಾಜ್ (15) ಸಾವನ್ನಪ್ಪಿದ ದುರ್ಧೈವಿ. ಈತ ರಿಪ್ಪನ್ ಪೇಟೆಯ ಮೇರಿ ಮಾತ ಪ್ರೌಢಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದು,ಈತನ ತಂದೆ ವಾಸು ಇದೇ ಶಾಲೆಯಲ್ಲಿ ಕಚೇರಿ ಸಹಾಯಕರಾಗಿ  ಕಾರ್ಯನಿರ್ವಹಿಸುತ್ತಿದ್ದರು. ಭರತ್ ರಾಜ್ ಶಾಲೆ ಮುಗಿಸಿಕೊಂಡು ಮನೆಯ ಬಳಿ ಆಟವಾಡಲು ತೆರಳಿದ್ದ ಸಮಯದಲ್ಲಿ ಕಾಲುಜಾರಿ ಕೃಷಿ ಹೊಂಡದಲ್ಲಿ ಬಿದ್ದಿದ್ದಾನೆ ಎನ್ನಲಾಗಿದೆ. ರಿಪ್ಪನ್ ಪೇಟೆ ಪೋಲೀಸ್ ಠಾಣಾ…

Read More

ಡಾ. ರಾಜ್ ಸ್ವರ ಸಂಭ್ರಮ ಸಂಗೀತ ಸ್ಪರ್ಧೆಯಲ್ಲಿ ಸ್ಪರ್ದಿಸಿರುವ ರಿಪ್ಪನ್ ಪೇಟೆಯ ಯುವ ಪ್ರತಿಭೆ ಪ್ರಣತಿ ಪ್ರವೀಣ್ ಗೆ ಬೆಂಬಲಿಸಿ:

ರಿಪ್ಪನ್ ಪೇಟೆ : ಸಾಗರದ ಯೂತ್ ಐಕಾನ್ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿಮಾನಿ ಬಳಗ ಇವರ ಆಶ್ರಯದಲ್ಲಿ ನಡೆಯುತ್ತಿರುವ “ಡಾ ರಾಜ್ ಸ್ವರ ಸಂಭ್ರಮ” ಕಾರ್ಯಕ್ರಮದ ಅಂತರ್ಜಾಲ ಸಂಗೀತ ಸ್ಪರ್ಧೆಯಲ್ಲಿ ರಿಪ್ಪನ್ ಪೇಟೆಯ ಪ್ರಣತಿ ಪ್ರವೀಣ್ ಸ್ಪರ್ಧಿಸಿದ್ದು  ಈ ಯುವ ಪ್ರತಿಭೆಯು ಸ್ಪರ್ಧೆಯಲ್ಲಿ ಮುಂದಿನ ಹಂತಕ್ಕೆ ತೆರಳಲು ವೀಕ್ಷಕರ ಸಹಕಾರದ ಅಗತ್ಯವಿದೆ. ರಿಪ್ಪನ್ ಪೇಟೆಯ ಮಹಾಲಕ್ಷ್ಮಿ ಹಾಗೂ ಪ್ರವೀಣ್ ದಂಪತಿಗಳ ಪುತ್ರಿಯಾದ ಪ್ರಣತಿ ಪ್ರವೀಣ್ ಸಂಗೀತ ಲೋಕದಲ್ಲಿ ಅಧ್ಬುತ ಸಾಧನೆಗೈದಿದ್ದು ಪ್ರಸ್ತುತ ಸಾಗರದ ಯೂತ್ ಐಕಾನ್…

Read More

ರಿಪ್ಪನ್ ಪೇಟೆ: ಗುರುವಾರದಂದು ಕಾಂಗ್ರೆಸ್ ಕಾರ್ಯಕರ್ತರ ಸಭೆ:

ರಿಪ್ಪನ್ ಪೇಟೆ : ದಿನಾಂಕ 21ರ ಗುರುವಾರ,ಸಮಯ ಸಂಜೆ 5:00 ಗಂಟೆಗೆ ರಿಪ್ಪನ್ ಪೇಟೆ ಗ್ರಾಮ ಪಂಚಾಯತ್ ಸಭಾಭವನ ದಲ್ಲಿ ಕಾಂಗ್ರೆಸ್ ಪಕ್ಷದ  ಕಾರ್ಯಕರ್ತರ ಸಭೆಯನ್ನು ಕರೆಯಲಾಗಿದೆ ಎಂದು ಕಾಂಗ್ರೆಸ್ ರಿಪ್ಪನ್ ಪೇಟೆ ಘಟಕದ ಅಧ್ಯಕ್ಷರಾದ ಆಸೀಪ್ ಭಾಷಾಸಾಬ್ ಪತ್ರೀಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಸಭೆಯಲ್ಲಿ ಹೊಸನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ, ಬಿ,ಜಿ, ನಾಗರಾಜ್, ತಾಲ್ಲೂಕು ವೀಕ್ಷಕರಾದ  ಮಲ್ಲಿಕಾರ್ಜುನ್ ಹಕ್ರೆ,ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಕಲಗೋಡ್ ರತ್ನಕರ್,ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ, ಬಿ ಪಿ ರಾಮಚಂದ್ರ,ಜಿಲ್ಲಾ ಪಂಚಾಯತ್…

Read More

ಯುವ ಸಾಹಿತಿ ರಫ಼ಿ ರಿಪ್ಪನ್ ಪೇಟೆ ರವರಿಗೆ ಒಲಿದ ರಾಜ್ಯ ಮಟ್ಟದ “ಗುರುಕುಲ ಕಲಾ ಕೀರ್ತಿ” ಪ್ರಶಸ್ತಿ :

ರಿಪ್ಪನ್ ಪೇಟೆ : ತುಮಕೂರಿನ ಸಿದ್ದಗಂಗಾ ಮಠದ ಆವರಣದಲ್ಲಿ ಭಾನುವಾರ ನಡೆದ ರಾಜ್ಯಮಟ್ಟದ ಗುರುಕುಲ ಕಲಾ ಸಾಹಿತ್ಯ ಸಮ್ಮೇಳನದಲ್ಲಿ ರಿಪ್ಪನ್ ಪೇಟೆಯ ಯುವ ಸಾಹಿತಿ ಹಾಗೂ ಯುವ ಪತ್ರಕರ್ತ,ಸಮಾಜವಾದಿ ಚಿಂತಕ ರಫಿ ರಿಪ್ಪನ್ ಪೇಟೆ ಇವರಿಗೆ ರಾಜ್ಯಮಟ್ಟದ “ಗುರುಕುಲ ಕಲಾ ಕೀರ್ತಿ” ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ತುಮಕೂರಿನ ಸಿದ್ದಗಂಗಾ ಮಠದ ಪೂಜ್ಯ ಶ್ರೀ ಸಿದ್ದಗಂಗಾ ಮಹಾಸ್ವಾಮಿಗಳು ವಹಿಸಿದ್ದರು..  ಅಭೂತಪೂರ್ವ ಸಾಹಿತ್ಯ ಸಮ್ಮೇಳನದಲ್ಲಿ ಈಗಾಗಲೆ ರಾಜ್ಯ ಮಟ್ಟದ ಸಾಹಿತ್ಯ ಸಿರಿ ಹಾಗೂ ಗುರುಕುಲ ಶಿರೋಮಣಿ…

Read More

ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ನ ಕಾರ್ಯದರ್ಶಿಯಾಗಿ ರಿಪ್ಪನ್ ಪೇಟೆಯ ಉಲ್ಲಾಸ್ ಆರ್ ಆಯ್ಕೆ :

ರಿಪ್ಪನ್ ಪೇಟೆ : ಶಿವಮೊಗ್ಗ ಜಿಲ್ಲೆಯ ಯುವ ಕಾಂಗ್ರೆಸ್ ಕಾರ್ಯದರ್ಶಿಯಾಗಿ ರಿಪ್ಪನ್ ಪೇಟೆಯ ಯುವ ಮುಖಂಡ ಉಲ್ಲಾಸ್ ಆರ್ ರವರು ಆಯ್ಕೆಯಾಗಿದ್ದಾರೆ.  ಹೊಸನಗರ ಕಾಂಗ್ರೆಸ್ ಪಕ್ಷ ಸಂಘಟನೆಯಲ್ಲಿ ಹೆಚ್ಚು ಗುರುತಿಸಿಕೊಂಡು ಪಕ್ಷದ ಬಲವರ್ಧನೆಗೆ ಶ್ರಮಿಸುತ್ತಿರುವ ಯುವ ನಾಯಕರಿಗೆ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯಲ್ಲಿ ಉತ್ತಮ ಹುದ್ದೆ ನೀಡುವಂತೆ ಹೊಸನಗರ ಯುವ ಕಾಂಗ್ರೆಸ್ ಸಮಿತಿಯಿಂದ ಶಿಪಾರಸು ಮಾಡಲಾಗಿತು. ಪಕ್ಷ ಸಂಘಟನೆಯ ಆದಾರದ ಮೇಲೆ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾದ ರಕ್ಷಾ ರಾಮಯ್ಯ ರವರ ನಿರ್ದೇಶನದಂತೆ ಜಿಲ್ಲಾ ಯುವ ಕಾಂಗ್ರೆಸ್…

Read More

ಹೊಂಬುಜ ಜೈನ ಮಠದಲ್ಲಿ ಅದ್ದೂರಿಯ ವಿಜಯದಶಮಿ :

ರಿಪ್ಪನ್ ಪೇಟೆ : ಜೈನರ ದಕ್ಷಿಣದ ಕಾಶಿಯಾಗಿರುವ ಹೊಂಬುಜ ಕ್ಷೇತ್ರದಲ್ಲಿ ನವರಾತ್ರಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಪದ್ಮಾವತಿ ದೇವಿಗೆ ನವರಾತ್ರಿಯ ಒಂಬತ್ತು ದಿನಗಳು ಬೇರೆ ಬೇರೆ ರೀತಿಯಲ್ಲಿ ಅಲಂಕರಿಸಿ ಪ್ರತಿ ದಿನ ವೈಭವದಿಂದ ಆಚರಿಸಲಾಯಿತು. ಕೆಟ್ಟದ್ದರಿಂದ ನಮ್ಮನ್ನು ರಕ್ಷಿಸುವ ಮಾತೆಯಾಗಿ ದೇವಿಯನ್ನು ಈ ದಿನಗಳಲ್ಲಿ ಕಾಣಲಾಗುತ್ತದೆ.ನವರಾತ್ರಿಯ ಕೊನೆಯ ದಿನವಾದ ಶುಕ್ರವಾರದಂದು ಹೊಂಬುಜ ಕ್ಷೇತ್ರದಿಂದ ಆನೆ ಮತ್ತು ಅಶ್ವ ದೊಂದಿಗೆ ಪಲ್ಲಕ್ಕಿಯ ರಾಜಬೀದಿ ಉತ್ಸವವು ಬನ್ನಿ ಮಂಟಪಕ್ಕೆ ತೆರಳಿ   ಪೂಜಾ ಕೈಂಕರ್ಯಗಳನ್ನು ನೆರವೇರಿಸಿ, ಬನ್ನಿ ಮುರಿದು ಭಕ್ತರಿಗೆ ಪ್ರಸಾದ…

Read More

ರಿಪ್ಪನ್ ಪೇಟೆ : ಡೆಸ್ಟಿನಿ ಸ್ಕೂಲ್ ಆಫ್ ಡ್ಯಾನ್ಸ್ ತರಬೇತಿ ಕೇಂದ್ರ ಅಸ್ತಿತ್ವಕ್ಕೆ

ರಿಪ್ಪನ್ ಪೇಟೆ : ರೋಟರಿ ಕ್ಲಬ್ ರಿಪ್ಪನ್ ಪೇಟೆ ಮತ್ತು ಡೆಸ್ಟಿನಿ ಸ್ಕೂಲ್ ಆಫ್ ಡ್ಯಾನ್ಸ್ ಇವರ ಸಹಯೋಗದಲ್ಲಿ ಪಟ್ಟಣದ ರಾಷ್ಟೋತ್ಥಾನ  ಶಿಶು ಮಂದಿರದಲ್ಲಿ  ಇಂದು ಡೆಸ್ಟಿನಿ ಡ್ಯಾನ್ಸ್  ತರಬೇತಿ ಶಾಲೆಯನ್ನು ಉದ್ಘಾಟಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರಿಪ್ಪನ್ ಪೇಟೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮಂಜುಳಾ ಕೇತಾರ್ಜಿ ರಾವ್  ಮುಂದಿನ ದಿನಗಳಲ್ಲಿ ನೃತ್ಯ ತಂಡಗಳು ಉಳಿಯಬೇಕಾದರೆ ಕೊರಿಯೋಗ್ರಾಫರ್ ಗಳ ಸಹಕಾರ ಅತ್ಯಗತ್ಯ. ಫಿಟ್ನೆಸ್ ಗೆ ನೃತ್ಯ ಅತಿ ಅವಶ್ಯಕ ಆದ್ದರಿಂದ ಡೆಸ್ಟಿನಿ ಸ್ಕೂಲ್ ಆಫ್ ಡ್ಯಾನ್ಸ್ ಇದರ…

Read More

ರಿಪ್ಪನ್ ಪೇಟೆ : ಕೇಂದ್ರ ಗೃಹ ಸಚಿವ ಅಮಿತ್ ಷಾ ರನ್ನು ಸಂಪುಟದಿಂದ ವಜಾಗೊಳಿಸುವಂತೆ ಒತ್ತಾಯಿಸಿ ಜೆಡಿಎಸ್ ವತಿಯಿಂದ ರಾಷ್ಟ್ರಪತಿಗಳಿಗೆ ಮನವಿ:

ರಿಪ್ಪನ್ ಪೇಟೆ: ಶಿಕ್ಷಣ ಪಡೆಯದ ಜನರು ದೇಶಕ್ಕೆ ಹೊರೆಯಾಗುತ್ತಾರೆ ಎಂಬ ಬಾಲಿಷ ಹೇಳಿಕೆ ನೀಡಿರುವ ದೇಶದ ಗೃಹ ಮಂತ್ರಿ ಅಮಿತ್ ಷಾ ರವರನ್ನು ಸಂಪುಟದಿಂದ ವಜಾ ಮಾಡುವಂತೆ ಒತ್ತಾಯಿಸಿ ಜೆಡಿಎಸ್ ಪಕ್ಷದ ವತಿಯಿಂದ ರಾಷ್ಟ್ರಪತಿಗಳಿಗೆ ಉಪತಹಶೀಲ್ದಾರ್ ಮೂಲಕ ಮನವಿ ಸಲ್ಲಿಸಿದರು. ಇತ್ತೀಚೆಗೆ ಕೇಂದ್ರ ಗೃಹ ಸಚಿವರಾದ ಅಮಿತ್‌ ಷಾ ಟಿವಿ ಸಂದರ್ಶನವೊಂದರ ವೇಳೆ ಅನಕ್ಷರಸ್ಥ ವ್ಯಕ್ತಿ ದೇಶಕ್ಕೆ ಹೊರೆ. ಆತನಿಗೆ ಸಂವಿಧಾನ ನೀಡಿದ ಹಕ್ಕುಗಳು ತಿಳಿಯುವುದಿಲ್ಲ. ಅಥವಾ ಆತನಿಗೆ ಮಾಡಬೇಕಾದ ಕರ್ತವ್ಯಗಳು ಗೊತ್ತಿರುವುದಿಲ್ಲ. ಅಂತಹ ವ್ಯಕ್ತಿಯು ಉತ್ತಮ…

Read More