Headlines

ಡಾ. ರಾಜ್ ಸ್ವರ ಸಂಭ್ರಮ ಸಂಗೀತ ಸ್ಪರ್ಧೆಯಲ್ಲಿ ಸ್ಪರ್ದಿಸಿರುವ ರಿಪ್ಪನ್ ಪೇಟೆಯ ಯುವ ಪ್ರತಿಭೆ ಪ್ರಣತಿ ಪ್ರವೀಣ್ ಗೆ ಬೆಂಬಲಿಸಿ:

ರಿಪ್ಪನ್ ಪೇಟೆ : ಸಾಗರದ ಯೂತ್ ಐಕಾನ್ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿಮಾನಿ ಬಳಗ ಇವರ ಆಶ್ರಯದಲ್ಲಿ ನಡೆಯುತ್ತಿರುವ “ಡಾ ರಾಜ್ ಸ್ವರ ಸಂಭ್ರಮ” ಕಾರ್ಯಕ್ರಮದ ಅಂತರ್ಜಾಲ ಸಂಗೀತ ಸ್ಪರ್ಧೆಯಲ್ಲಿ ರಿಪ್ಪನ್ ಪೇಟೆಯ ಪ್ರಣತಿ ಪ್ರವೀಣ್ ಸ್ಪರ್ಧಿಸಿದ್ದು  ಈ ಯುವ ಪ್ರತಿಭೆಯು ಸ್ಪರ್ಧೆಯಲ್ಲಿ ಮುಂದಿನ ಹಂತಕ್ಕೆ ತೆರಳಲು ವೀಕ್ಷಕರ ಸಹಕಾರದ ಅಗತ್ಯವಿದೆ.

ರಿಪ್ಪನ್ ಪೇಟೆಯ ಮಹಾಲಕ್ಷ್ಮಿ ಹಾಗೂ ಪ್ರವೀಣ್ ದಂಪತಿಗಳ ಪುತ್ರಿಯಾದ ಪ್ರಣತಿ ಪ್ರವೀಣ್ ಸಂಗೀತ ಲೋಕದಲ್ಲಿ ಅಧ್ಬುತ ಸಾಧನೆಗೈದಿದ್ದು ಪ್ರಸ್ತುತ ಸಾಗರದ ಯೂತ್ ಐಕಾನ್ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿಮಾನಿ ಬಳಗ ಇವರ ಆಶ್ರಯದಲ್ಲಿ ನಡೆಯುತ್ತಿರುವ “ಡಾ ರಾಜ್ ಸ್ವರ ಸಂಭ್ರಮ” ಕಾರ್ಯಕ್ರಮದಲ್ಲಿ ಸ್ಪರ್ಧಿಸಿದ್ದು ವೀಕ್ಷಕರು ಈ ಯುವ ಪ್ರತಿಭೆ ಹಾಡಿರುವ ಹಾಡನ್ನು ಯೂಟ್ಯೂಬ್ ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸಿ ಶೇರ್ ಮಾಡುವುದರ ಮೂಲಕ ಈ ಯುವ ಪ್ರತಿಭೆಗೆ ಪ್ರೋತ್ಸಾಹ ನೀಡಬೇಕಾಗಿದೆ.

ಪ್ರಣತಿ ಪ್ರವೀಣ್ ಹಾಡಿರುವ ಹಾಡಿನ ಯೂಟ್ಯೂಬ್ ಲಿಂಕ್ ಕೆಳಗೆ ಹಾಕಲಾಗಿದೆ.ಲಿಂಕ್ ಕ್ಲಿಕ್ ಮಾಡಿ ,ಲೈಕ್ ಮಾಡಿ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಶೇರ್ ಮಾಡಿ.

Leave a Reply

Your email address will not be published. Required fields are marked *