w
Headlines
Home » ರಿಪ್ಪನ್‌ಪೇಟೆ ರೋಟರಿ ಕ್ಲಬ್‌ನಿಂದ ವಿಶ್ವ ಪೋಲಿಯೊ ದಿನ ಆಚರಣೆ

ರಿಪ್ಪನ್‌ಪೇಟೆ ರೋಟರಿ ಕ್ಲಬ್‌ನಿಂದ ವಿಶ್ವ ಪೋಲಿಯೊ ದಿನ ಆಚರಣೆ

IMG 20261024 WA0004

ರಿಪ್ಪನ್‌ಪೇಟೆ ರೋಟರಿ ಕ್ಲಬ್‌ನಿಂದ ವಿಶ್ವ ಪೋಲಿಯೊ ದಿನ ಆಚರಣೆ | World Polio Day was observed at Ripponpete Government Primary Health Centre under the leadership of Rotary Club President Ravindra Ballal to raise awareness about polio prevention and vaccination.

ರಿಪ್ಪನ್‌ಪೇಟೆ: ಮಕ್ಕಳ ಆರೋಗ್ಯದ ರಕ್ಷಣೆ ಹಾಗೂ ಪೋಲಿಯೊ ನಿರ್ಮೂಲನೆಯ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ರಿಪ್ಪನ್‌ಪೇಟೆ ರೋಟರಿ ಕ್ಲಬ್ ವತಿಯಿಂದ ವಿಶ್ವ ಪೋಲಿಯೊ ದಿನವನ್ನು ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಗಣೇಶ್ ಆರ್ ಪೋಲಿಯೊ ನಿರ್ಮೂಲನೆಗಾಗಿ ರೋಟರಿ ಕ್ಲಬ್ ಕಳೆದ ಹಲವು ವರ್ಷಗಳಿಂದ ನಿರಂತರವಾಗಿ ಶ್ರಮಿಸುತ್ತಿದೆ. ಮಕ್ಕಳನ್ನು ಪೋಲಿಯೊದಿಂದ ರಕ್ಷಿಸುವುದು ಹಾಗೂ ಸಾರ್ವಜನಿಕರಲ್ಲಿ ಲಸಿಕೆಯ ಮಹತ್ವದ ಬಗ್ಗೆ ಅರಿವು ಮೂಡಿಸುವುದು ಸಂಸ್ಥೆಯ ಪ್ರಮುಖ ಉದ್ದೇಶಗಳಲ್ಲಿ ಒಂದಾಗಿದೆ ಎಂದು ತಿಳಿಸಿದರು.

1985 ರಲ್ಲಿ ರೋಟರಿ ಸಂಸ್ಥೆಯು ಜಗತ್ತಿನ ಪ್ರತಿಯೊಂದು ಮಗುವಿಗೂ ಪೋಲಿಯೋ ಲಸಿಕೆ ತಲುಪಿಸುವ ಗುರಿಯೊಂದಿಗೆ ‘ಪೋಲಿಯೋ ಪ್ಲಸ್’ ಕಾರ್ಯಕ್ರಮವನ್ನು ಆರಂಭಿಸಿತು. ಇದು ಜಾಗತಿಕ ಮಟ್ಟದಲ್ಲಿ ಖಾಸಗಿ ವಲಯದಿಂದ ಆರಂಭವಾದ ಅತಿ ದೊಡ್ಡ ಆರೋಗ್ಯ ಅಭಿಯಾನವಾಗಿದೆ.ಪೋಲಿಯೋ ಲಸಿಕೆಯನ್ನು ಕಂಡುಹಿಡಿದ ಪ್ರಸಿದ್ಧ ವಿಜ್ಞಾನಿ ಡಾ. ಜೋನಸ್ ಸಾಲ್ಕ್ ಅವರ ಜನ್ಮದಿನದ ಗೌರವಾರ್ಥವಾಗಿ ರೋಟರಿ ಅಂತರರಾಷ್ಟ್ರೀಯ ಸಂಸ್ಥೆಯು ಈ ದಿನಾಚರಣೆಯನ್ನು ಜಾರಿಗೆ ತಂದಿತು ಎಂದು ಹೇಳಿದರು.

ನಂತರ ಮಾತನಾಡಿದ ರಿಪ್ಪನ್ ಪೇಟೆ ವಲಯದ  ರೋಟರಿ ಕ್ಲಬ್ ಅಧ್ಯಕ್ಷ ರವೀಂದ್ರ ಬಲ್ಲಾಳ್ ಅವರು, ಪೋಲಿಯೊ ಮುಕ್ತ ಸಮಾಜ ನಿರ್ಮಾಣದಲ್ಲಿ ಪ್ರತಿಯೊಬ್ಬರ ಪಾತ್ರವೂ ಮಹತ್ವದ್ದಾಗಿದೆ. ಪೋಷಕರು ತಮ್ಮ ಮಕ್ಕಳಿಗೆ ನಿಗದಿತ ಸಮಯದಲ್ಲಿ ಪೋಲಿಯೊ ಲಸಿಕೆ ಹಾಕಿಸುವ ಮೂಲಕ ಮಕ್ಕಳ ಆರೋಗ್ಯದ ರಕ್ಷಣೆಗೆ ಮುಂದಾಗಬೇಕು. ಆರೋಗ್ಯ ಇಲಾಖೆ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಪೋಲಿಯೊ ನಿರ್ಮೂಲನೆಗೆ ನಿರಂತರವಾಗಿ ಶ್ರಮಿಸುವುದು ಅಗತ್ಯ ಎಂದು ಹೇಳಿದರು.

ಈ ಸಂದರ್ಭದಲ್ಲಿ ರೋಟರಿ ಕ್ಲಬ್‌ನ ಪ್ರಧಾನ ಕಾರ್ಯದರ್ಶಿ ರಮೇಶ್ ಹೆಬ್ಬಾರ್ ಸೇರಿದಂತೆ ಜೆ. ರಾಧಾಕೃಷ್ಣ, ಕೃಷ್ಣರಾಜು ಎ.ಎಂ.,ರಾಮಚಂದ್ರ ಎಂ. ಗಣೇಶ್ ಕಾಮತ್., ಶಿವಕುಮಾರ್ ಶೆಟ್ಟಿ, ವರ್ಗೀಸ್ , ಮುಖೇಶ್, ಡಾಕಪ್ಪ ಮುಡುಬಾ ಹಾಗೂ ಹುಗುಡಿ ವರ್ತೇಶ್ ಹಾಗೂ ಆಸ್ಪತ್ರೆಯ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಇದ್ದರು.

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.