ರಿಪ್ಪನ್ ಪೇಟೆಯಲ್ಲಿ ಗುಡ್ ಫ್ರೈಡೆ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ದೇವರ ಮೆರವಣಿಗೆ

ರಿಪ್ಪನ್ ಪೇಟೆಯಲ್ಲಿ ಗುಡ್ ಫ್ರೈಡೆ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ದೇವರ ಮೆರವಣಿಗೆ ರಿಪ್ಪನ್ ಪೇಟೆ :ಪಟ್ಟಣದ ಗುಡ್ ಶೆಪರ್ಡ್ ದೇವಾಲಯದಲ್ಲಿ ಗುಡ್ ಫ್ರೈಡೆ ಪ್ರಯುಕ್ತ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಮೆರವಣಿಗೆಯನ್ನು ಏರ್ಪಡಿಸಲಾಗಿತ್ತು. ಶುಕ್ರವಾರ ಬೆಳಗ್ಗೆಯಿಂದಲೇ ಪ್ರಾರಂಭವಾದ ಧಾರ್ಮಿಕ ಕಾರ್ಯಕ್ರಮಗಳು ಮಧ್ಯಾಹ್ನದ ತನಕ ವಿವಿಧ ಪೂಜೆ ಹಾಗೂ ದೇವರ ಮೆರವಣಿಗೆಯೊಂದಿಗೆ  ಸಂಪನ್ನಗೊಂಡಿತು. ಗುಡ್ ಫ್ರೈಡೆ (Good Friday) ಕ್ರೈಸ್ತ ಧರ್ಮದಲ್ಲಿ ಬಹುಮುಖ್ಯವಾದ ಪವಿತ್ರ ದಿನವಾಗಿದ್ದು, ಇದು ಯೇಸು ಕ್ರಿಸ್ತನು ಶಿಲುಬೆಗೇರಿಸಲ್ಪಟ್ಟ ದಿನವೆಂದು ನಂಬಲಾಗುತ್ತದೆ.ಯೇಸು ಕ್ರಿಸ್ತನ ಬಲಿದಾನ:…

Read More

ಪಿಯುಸಿ ಫಲಿತಾಂಶ | ರಿಪ್ಪನ್ ಪೇಟೆ ಕಾಲೇಜಿಗೆ ಶೇ73% ಫಲಿತಾಂಶ , 19 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್

ಪಿಯುಸಿ ಫಲಿತಾಂಶ | ರಿಪ್ಪನ್ ಪೇಟೆ ಕಾಲೇಜಿಗೆ ಶೇ73% ಫಲಿತಾಂಶ , 19 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ರಿಪ್ಪನ್ ಪೇಟೆ : ಕಳೆದ ಮಾರ್ಚ್ ತಿಂಗಳಲ್ಲಿ ನಡೆದ ದ್ವಿತೀಯ ಪಿ.ಯು.ಸಿ. ಪರೀಕ್ಷೆಯ ಫಲಿತಾಂಶ ಇಂದು ಪ್ರಕಟವಾಗಿದ್ದು ರಿಪ್ಪನ್‌ಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜ್‌ಗೆ ಶೇ 73 ರಷ್ಟು ಫಲಿತಾಂಶ  ಬಂದಿದೆ ಎಂದು ಪ್ರಭಾರಿ ಪ್ರಾಚಾರ್ಯ ವಾಸುದೇವ ತಿಳಿಸಿದ್ದಾರೆ. ಕಾಲೇಜ್‌ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಲೇಜ್‌ನಿಂದ ಕಲಾ ವಾಣಿಜ್ಯ ಮತ್ತು ವಿಜ್ಞಾನ ವಿಭಾಗದಿಂದ 249 ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ವಾರ್ಷಿಕ…

Read More

ಹಾಲಿನ ಗುಣಮಟ್ಟದ ಉತ್ಪನ್ನಗಳ ಮಾರಾಟದಿಂದ ರೈತರಿಗೆ, ಗ್ರಾಹಕರಿಗೆ ಹೆಚ್ಚು ಲಾಭ – ವಿದ್ಯಾದರ್

ಹಾಲಿನ ಗುಣಮಟ್ಟದ ಉತ್ಪನ್ನಗಳ ಮಾರಾಟದಿಂದ ರೈತರಿಗೆ, ಗ್ರಾಹಕರಿಗೆ ಹೆಚ್ಚು ಲಾಭ – ವಿದ್ಯಾದರ್ ರಿಪ್ಪನ್ ಪೇಟೆಯಲ್ಲಿ ಎರಡು ನಂದಿನಿ ಮಿಲ್ಕ್ ಪಾರ್ಲರ್ ಶುಭಾರಂಭ ಶಿವಮೊಗ್ಗ ಕೆ.ಎಂ.ಎಫ್ ವ್ಯಾಪ್ತಿಗೆ ಮೂರು ಜಿಲ್ಲೆಗಳು ಒಳಪಡುತ್ತಿದ್ದು ಪ್ರತಿ ಜಿಲ್ಲೆಯ ವ್ಯಾಪ್ತಿಯಲ್ಲಿ ತಲಾ 25 ಮಿಲ್ಕ್ ಪಾರ್ಲರ್‌ಗಳನ್ನು ತೆರೆಯುವ ಮೂಲಕ ವಿದ್ಯಾವಂತ ಯುವಕ, ಯುವತಿಯರಿಗೆ ಸ್ವಾವಲಂಬಿ ಉದ್ಯೋಗ ನೀಡುವ ಗುರಿ ಹೊಂದಲಾಗಿದೆ ಎಂದು ಶಿಮೂಲ್ ಅಧ್ಯಕ್ಷ ವಿದ್ಯಾಧರ್ ಹೇಳಿದರು. ಪಟ್ಟಣದ ಗ್ರಾಮ ಪಂಚಾಯ್ತಿ ಮುಂಭಾಗ ಮತ್ತು ಸಾಗರ ರಸ್ತೆಯ ಸರ್ಕಾರಿ ಪ್ರೌಢಶಾಲೆಯ ಮುಂಭಾಗದಲ್ಲಿ…

Read More

RIPPONPETE | ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ

RIPPONPETE | ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ RIPPONPETE | ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಹೊಸನಗರ ತಾಲ್ಲೂಕು ಬಿಜೆಪಿ ರಿಪ್ಪನ್‌ಪೇಟೆ ಮಹಾಶಕ್ತಿ ಕೇಂದ್ರದ ವತಿಯಿಂದ ನಡೆಸಿದರು. ಪ್ರತಿಭಟನೆಯಲ್ಲಿ ಬಿಜೆಪಿ ತಾಲ್ಲೂಕು ಅಧ್ಯಕ್ಷ ಮತ್ತಿಮನೆ ಸುಬ್ರಹ್ಮಣ್ಯ ಮಾತನಾಡಿ, ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುತ್ತಿರುವ ಕ್ರಮ ಖಂಡನೀಯವಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಮೂಲಕ ಬೆಲೆ ಏರಿಕೆ ಆರಂಭಮಾಡಿದೆ. ರಾಜ್ಯ…

Read More

ರಿಪ್ಪನ್ ಪೇಟೆಯಲ್ಲಿ ಇಂದು ಲೋಕಾರ್ಪಣೆಗೊಳ್ಳಲಿದೆ ಸುಸಜ್ಜಿತ “ಎಸ್ ಆರ್ ಕನ್ವೆನ್ಷನ್‌” ಹಾಲ್

ರಿಪ್ಪನ್ ಪೇಟೆಯಲ್ಲಿ ಇಂದು ಲೋಕಾರ್ಪಣೆಗೊಳ್ಳಲಿದೆ ಸುಸಜ್ಜಿತ “ಎಸ್ ಆರ್ ಕನ್ವೆನ್ಷನ್‌” ಹಾಲ್ ಮದುವೆ ಎಂದರೆ ಒಂದೆರಡು ದಿನಗಳಿಗೆ ಸೀಮಿತವಾದ ಘಟನೆಯಲ್ಲ, ಅದು ಎಷ್ಟೇ ವರ್ಷಗಳು ಕಳೆದರೂ ನೆನಪಿನಲ್ಲಿ ಉಳಿಯುವ ಒಂದು ನೆನಪು. ಹೌದು ರಿಪ್ಪನ್ ಪೇಟೆಯ ತೀರ್ಥಹಳ್ಳಿ ರಸ್ತೆಯಲ್ಲಿ ನೂತನವಾಗಿ ಸುಸಜ್ಜಿತವಾಗಿ ಸಿದ್ದವಾಗಿರುವ ಆರ್ ರವಿಚಂದ್ರ ಮಾಲೀಕತ್ವದ  “ಎಸ್ ಆರ್ ಕನ್ವೆನ್ಷನ್‌ ಸೆಂಟರ್” ಇಂದು ಲೋಕಾರ್ಪಣೆಗೊಳ್ಳಲಿದೆ. ಶಾಸಕ ಬೇಳೂರು ಗೋಪಾಲಕೃಷ್ಣ ಸೇರಿದಂತೆ ಅನೇಕ ಗಣ್ಯರು ಈ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಅರಮನೆಯಂತೆ ಕಂಗೊಳಿಸುವ ಈ ಎಸ್ ಆರ್…

Read More

ರೈಲಿಗೆ ಸಿಲುಕಿ ರಿಪ್ಪನ್ ಪೇಟೆಯ ಯುವಕ ಸಾವು ಪ್ರಕರಣ – ಸಾವಿನ ಸುತ್ತ ಅನುಮಾನದ ಹುತ್ತ…….!?.

ರೈಲಿಗೆ ಸಿಲುಕಿ ರಿಪ್ಪನ್ ಪೇಟೆಯ ಯುವಕ ಸಾವು ಪ್ರಕರಣ – ಸಾವಿನ ಸುತ್ತ ಅನುಮಾನದ ಹುತ್ತ…….!?. ರಿಪ್ಪನ್ ಪೇಟೆ : ಸಮಾಜದೊಂದಿಗೆ ಬೆರೆತು ಬಾಳಿ ಬದುಕಬೇಕಾದ ಉತ್ಸಾಹಿ ಯುವಕ ರಾಮನಾಥ್ ಮಾರ್ಚ್ 25ರಂದು  ಚನ್ನರಾಯಪಟ್ಟಣದ ಸಮೀಪ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಟ್ಟಿದ್ದಾನೆ ಎಂಬ ಪ್ರಕರಣ ತಿರುವು ಪಡೆದುಕೊಂಡಿದ್ದು ಕುಟುಂಬಸ್ಥರು ಇದು ಆತ್ಮಹತ್ಯೆಯಲ್ಲ ಕೊಲೆಯೆಂಬ ಶಂಕೆ ವ್ಯಕ್ತಪಡಿಸಿದ್ದಾರೆ. ಹೌದು ಮಾರ್ಚ್ 25 ಸೋಮವಾರ ರಾತ್ರಿ ಚೆನ್ನಪಟ್ಟಣ ಮದ್ದೂರು ಮಾರ್ಗ ಮಧ್ಯೆಯ ನಿಡಗುಂಟಿ ಗ್ರಾಮದ ರೈಲ್ವೆ ನಿಲ್ದಾಣದಲ್ಲಿ ರೈಲಿಗೆ…

Read More

ವಿಶ್ವವಿದ್ಯಾಲಯ ಮಟ್ಟದ ಜಾನಪದ ಸಮೂಹ ನೃತ್ಯ ಸ್ಪರ್ಧೆಯಲ್ಲಿ ರಿಪ್ಪನ್ ಪೇಟೆ ವಿದ್ಯಾರ್ಥಿಗಳಿಗೆ ಪ್ರಥಮ ಸ್ಥಾನ

ವಿಶ್ವವಿದ್ಯಾಲಯ ಮಟ್ಟದ ಜಾನಪದ ಸಮೂಹ ನೃತ್ಯ ಸ್ಪರ್ಧೆಯಲ್ಲಿ ರಿಪ್ಪನ್ ಪೇಟೆ ವಿದ್ಯಾರ್ಥಿಗಳಿಗೆ ಪ್ರಥಮ ಸ್ಥಾನ ರಿಪ್ಪನ್ ಪೇಟೆ : ಕುವೆಂಪು ವಿಶ್ವವಿದ್ಯಾಲಯ ಮಟ್ಟದ ಜಾನಪದ ಸಮೂಹ ನೃತ್ಯ ಸ್ಪರ್ಧೆಯಲ್ಲಿ ಪಟ್ಟಣದ ಪದವಿ ಕಾಲೇಜಿನ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದಿದ್ದಾರೆ. ಶಿವಮೊಗ್ಗ, ಬಾಪೂಜಿನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಹಾಗೂ ಸಂಜೆ ಕಾಲೇಜು ಇಲ್ಲಿ ದಿನಾಂಕ 20.03.2025ರಂದು ಕುವೆಂಪು ವಿಶ್ವವಿದ್ಯಾಲಯ ಮಟ್ಟದ ಅಂತರ್ ಕಾಲೇಜು ಜಾನಪದ ಸಮೂಹ ನೃತ್ಯ, ಜಾನಪದ ಸಮೂಹ ಗಾಯನ,…

Read More

ರಿಪ್ಪನ್‌ಪೇಟೆ ಶಿವಮಂದಿರ ನೂತನ ಕಟ್ಟಡದ ಉದ್ಘಾಟನಾ ಧರ್ಮ ಸಮಾರಂಭ

ರಿಪ್ಪನ್‌ಪೇಟೆ ಶಿವಮಂದಿರ ನೂತನ ಕಟ್ಟಡದ ಉದ್ಘಾಟನಾ ಧರ್ಮ ಸಮಾರಂಭ | ರಚನಾತ್ಮಕ ಸತ್ಕಾರ್ಯಗಳಿಂದ ಅಭಿವೃದ್ಧಿ ಸಾಧ್ಯ ; ರಂಭಾಪುರಿ ಜಗದ್ಗುರುಗಳು     ರಿಪ್ಪನ್‌ಪೇಟೆ ; ಮಾನವನ ಬಾಳು ಉಜ್ವಲಗೊಳ್ಳಲು ನಿರಂತರ ಶ್ರಮ ಮತ್ತು ಪ್ರಯತ್ನ ಬೇಕು. ಕ್ರಿಯಾಶೀಲ ಜೀವನ ಶ್ರೇಯಸ್ಸಿಗೆ ಅಡಿಪಾಯ. ರಚನಾತ್ಮಕ ಸತ್ಕಾರ್ಯಗಳಿಂದ ಮಾತ್ರ ಸಮಾಜ ಮತ್ತು ಧರ್ಮ ಬಲಗೊಳ್ಳಲು ಸಾಧ್ಯವೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು. ಅವರು ಬುಧವಾರ ಶಿವಮಂದಿರ ನೂತನ ಕಟ್ಟಡದ ಉದ್ಘಾಟನಾ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ,…

Read More

ಗ್ರಾಮೀಣ ಪ್ರದೇಶದ ಕಾಲೇಜುಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ – ಶಾಸಕ ಬೇಳೂರು ಗೋಪಾಲಕೃಷ್ಣ

ಗ್ರಾಮೀಣ ಪ್ರದೇಶದ ಕಾಲೇಜುಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ – ಶಾಸಕ ಬೇಳೂರು ಗೋಪಾಲಕೃಷ್ಣ ರಿಪ್ಪನ್‌ಪೇಟೆ : ಗ್ರಾಮೀಣ ಪ್ರದೇಶ ವಿದ್ಯಾರ್ಥಿಗಳು ಹೆಚ್ಚು ವಿದ್ಯಾರ್ಹತೆ ಹೊಂದಿ ವಿದೇಶದಲ್ಲಿ ಉದ್ಯೋಗ ಪಡೆಯುವವರಿಗೆ ವಿದೇಶದಲ್ಲಿ ಕಾರ್ಪೆಟ್ ಹಾಕಿ ಆಹ್ವಾನಿಸುತ್ತಿದ್ದಾರೆಂದು ಶಾಸಕ ಹಾಗೂ ರಾಜ್ಯ ಅರಣ್ಯ ಕೈಗಾರಿಕಾಭಿವೃದ್ದಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಹೇಳಿದರು. ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜ್‌ನ 2024 -25ನೇ ಸಾಲಿನ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ನಾನು ಸಾಗರ ಸರ್ಕಾರಿ ಕಾಲೇಜ್‌ನಲ್ಲಿ…

Read More

RIPPONPETE | ಕಲಾ ಕೌಸ್ತುಭ ಕನ್ನಡ ಸಂಘದ ಲಕ್ಕಿ ಡ್ರಾ – ಬಹುಮಾನ ವಿಜೇತಳಿಗೆ ಸ್ಕೂಟಿ ಹಸ್ತಾಂತರಿಸಿದ ಶಾಸಕ ಬೇಳೂರು

RIPPONPETE | ಕಲಾ ಕೌಸ್ತುಭ ಕನ್ನಡ ಸಂಘದ ಲಕ್ಕಿ ಡ್ರಾ – ಬಹುಮಾನ ವಿಜೇತಳಿಗೆ ಸ್ಕೂಟಿ ಹಸ್ತಾಂತರಿಸಿದ ಶಾಸಕ ಬೇಳೂರು ರಿಪ್ಪನ್‌ಪೇಟೆ : ಇಲ್ಲಿನ ಕಲಾ ಕೌಸ್ತುಭ ಕನ್ನಡ ಸಂಘದ 31ನೇ ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ‘ಲಕ್ಕಿ ಡ್ರಾ’ ಸ್ಪರ್ಧೆಯಲ್ಲಿ ವಿಜೇತರಾಗಿದ್ದ ಬಡ ಮಹಿಳೆಗೆ ಕರ್ನಾಟಕ ಕೈಗಾರಿಕಾ ನಿಗಮದ ಅಧ್ಯಕ್ಷ ಹಾಗೂ ಶಾಸಕ ಬೇಳೂರು ಗೋಪಾಲಕೃಷ್ಣ ಬಹುಮಾನ ಹಸ್ತಾಂತರಿಸಿದರು. ಪಟ್ಟಣದ ಶ್ರೀ ಸಿದ್ದಿವಿನಾಯಕ ದೇವಸ್ಥಾನದ ಆವರಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಕಲಾ ಕೌಸ್ತುಭ ಕನ್ನಡ ಸಂಘ ರಾಜ್ಯೋತ್ಸವ…

Read More