w
Headlines
Home » ಸಹಸ್ರಾರು ಜನರ ಸಮ್ಮಿಲನಕ್ಕೆ ಸಾಕ್ಷಿಯಾದ ರಿಪ್ಪನ್‌ಪೇಟೆಯ ಹಿಂದೂ ಸಂಗಮ ಶೋಭಾಯಾತ್ರೆ

ಸಹಸ್ರಾರು ಜನರ ಸಮ್ಮಿಲನಕ್ಕೆ ಸಾಕ್ಷಿಯಾದ ರಿಪ್ಪನ್‌ಪೇಟೆಯ ಹಿಂದೂ ಸಂಗಮ ಶೋಭಾಯಾತ್ರೆ

GridArt 20260202

A grand Hindu Sangama Shobha Yatre was held in Rippanpete with the participation of thousands of devotees from surrounding villages, showcasing unity, culture, and tradition.

ರಿಪ್ಪನ್‌ಪೇಟೆಯಲ್ಲಿ ಭವ್ಯ ‘ಹಿಂದೂ ಸಂಗಮ’ ಶೋಭಾ ಯಾತ್ರೆ; ಸಹಸ್ರಾರು ಜನರ ಭಾಗಿ

ರಿಪ್ಪನ್‌ಪೇಟೆ: ಪಟ್ಟಣದ ಹಿಂದೂಪರ ಸಂಘಟನೆಗಳ ಆಶ್ರಯದಲ್ಲಿ ಸೋಮವಾರ ಆಯೋಜಿಸಲಾಗಿದ್ದ ‘ಹಿಂದೂ ಸಂಗಮ’ ಶೋಭಾ ಯಾತ್ರೆ ಅತ್ಯಂತ ಅದ್ದೂರಿಯಾಗಿ ಜರುಗಿತು. ರಿಪ್ಪನ್‌ಪೇಟೆ ಸೇರಿದಂತೆ ಸುತ್ತಮುತ್ತಲಿನ ಬಾಳೂರು ಹಾಗೂ ಜೇನಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಿಂದ ಆಗಮಿಸಿದ ಸಹಸ್ರಾರು ಹಿಂದೂ ಬಾಂಧವರು ಈ ಐತಿಹಾಸಿಕ ಸಂಗಮಕ್ಕೆ ಸಾಕ್ಷಿಯಾದರು.

ಪಟ್ಟಣದ ಹೊಸನಗರ ರಸ್ತೆಯಲ್ಲಿರುವ ಗೌಡ ಸಾರಸ್ವತ ಮಂದಿರದಿಂದ ಶೋಭಾ ಯಾತ್ರೆಗೆ ಅಧಿಕೃತ ಚಾಲನೆ ನೀಡಲಾಯಿತು. ಕೇಸರಿ ಧ್ವಜಗಳನ್ನು ಕೈಯಲ್ಲಿ ಹಿಡಿದ ಸಾವಿರಾರು ಕಾರ್ಯಕರ್ತರು ಹಾಗೂ ಸಾರ್ವಜನಿಕರು ಉತ್ಸಾಹದಿಂದ ಮೆರವಣಿಗೆಯಲ್ಲಿ ಭಾಗವಹಿಸಿದರು. ಶೋಭಾ ಯಾತ್ರೆ ತೀರ್ಥಹಳ್ಳಿ ರಸ್ತೆ, ಸಾಗರ ರಸ್ತೆ ಹಾಗೂ ಶಿವಮೊಗ್ಗ ರಸ್ತೆ ಸೇರಿದಂತೆ ಪಟ್ಟಣದ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿ ಜನಮನ ಸೆಳೆಯಿತು. ಮೆರವಣಿಗೆಯುದ್ದಕ್ಕೂ ಜೈಕಾರಗಳು ಮೊಳಗಿದರೆ, ಇಡೀ ಪಟ್ಟಣ ಕೇಸರಿಮಯವಾಗಿ ಕಂಗೊಳಿಸಿತು.

ಈ ಸಂದರ್ಭದಲ್ಲಿ ಮಕ್ಕಳಿಗಾಗಿ ವಿಶೇಷ ಛದ್ಮವೇಷ ಸ್ಪರ್ಧೆ ಆಯೋಜಿಸಲಾಗಿದ್ದು, ವಿಭಿನ್ನ ವೇಷಭೂಷಣಗಳಲ್ಲಿ ಮಕ್ಕಳು ಮೆರವಣಿಗೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮಕ್ಕೆ ವಿಶೇಷ ರಂಗು ತುಂಬಿದರು.

ಶೋಭಾ ಯಾತ್ರೆಯ ಬಳಿಕ ಪಟ್ಟಣದ ಭೂಪಾಳಂ ಚಂದ್ರಶೇಖರ್ ಸಭಾಭವನದಲ್ಲಿ ಸಭಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಧಿಕ್ಸೂಚಿ ಭಾಷಣಕಾರರಾಗಿ ಹಾರಿಕಾ ಮಂಜುನಾಥ್ ಆಗಮಿಸಿ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.