w
Headlines
Home » ಕನ್ಯಾಕುವರಿಯರಿಗೆ ಬಾಗಿನ ಸಮರ್ಪಣೆ: ತ್ಯಾರಂದೂರಿನಲ್ಲಿ ಪೂರ್ವಿಕರ ವಿಶಿಷ್ಟ ಸಂಪ್ರದಾಯ

ಕನ್ಯಾಕುವರಿಯರಿಗೆ ಬಾಗಿನ ಸಮರ್ಪಣೆ: ತ್ಯಾರಂದೂರಿನಲ್ಲಿ ಪೂರ್ವಿಕರ ವಿಶಿಷ್ಟ ಸಂಪ್ರದಾಯ

Screenshot 2026 10 18 18 51 53 278 com.google.android.googlequicksearchbox edit

ಕನ್ಯಾಕುವರಿಯರಿಗೆ ಬಾಗಿನ ಸಮರ್ಪಣೆ: ತ್ಯಾರಂದೂರಿನಲ್ಲಿ ಪೂರ್ವಿಕರ ವಿಶಿಷ್ಟ ಸಂಪ್ರದಾಯ | Tyaranandur Sri Kalanatheshwari Temple near Ripponpete celebrates Sharannavaratri with traditional baagina offerings to Kanyakumari girls, special goddess worship and Navaratri parayana.

ರಿಪ್ಪನ್‌ಪೇಟೆ: ದೇವಿಯ ಆರಾಧನೆಯಿಂದ ವ್ಯಕ್ತಿಯಲ್ಲಿ ತಪೋಶಕ್ತಿ, ತ್ಯಾಗ ಮನೋಭಾವ, ನಿಷ್ಠೆ ಹಾಗೂ ಕಠಿಣ ಸನ್ನಿವೇಶಗಳನ್ನು ಎದುರಿಸುವ ಸಹನೆ ಹೆಚ್ಚಾಗುತ್ತದೆ. ಆಸೆ ಮತ್ತು ದುರಾಸೆಗಳನ್ನು ನಿಯಂತ್ರಿಸಿಕೊಂಡು ಸನ್ಮಾರ್ಗದಲ್ಲಿ ನಡೆಯಲು ದೇವಿಯ ಆರಾಧನೆ ಪ್ರೇರಣೆ ನೀಡುತ್ತದೆ ಎಂದು ತ್ಯಾರಂದೂರು ಮನೆತನದ ಹಿರಿಯಕ್ಕ ನಾಗವೇಣಮ್ಮ ಬಸಪ್ಪಗೌಡ ಹೇಳಿದರು.

ರಿಪ್ಪನ್‌ಪೇಟೆ ಸಮೀಪದ ತ್ಯಾರಂದೂರು ಶ್ರೀ ಕಲಾನಾಥೇಶ್ವರಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಅಂಗವಾಗಿ ಆಯೋಜಿಸಿದ್ದ ದೇವಿಯ ಆರಾಧನೆ ಹಾಗೂ ನವರಾತ್ರಿ ಪಾರಾಯಣದ ಧಾರ್ಮಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ತ್ಯಾರಂದೂರು ಮನೆತನದ ಪೂರ್ವಿಕರಾದ ತಾಯಮ್ಮ ಈಶ್ವರಪ್ಪಗೌಡ, ಶಂಕರಮ್ಮ ಗುರಪ್ಪಗೌಡ ಹಾಗೂ ನಾಗವೇಣಮ್ಮ ಬಸಪ್ಪಗೌಡ ಅವರು ರೂಪಿಸಿದ ಧಾರ್ಮಿಕ ಪರಂಪರೆಯನ್ನು ಇಂದಿನ ತಲೆಮಾರಿನವರೂ ಮುಂದುವರಿಸಿಕೊಂಡು ಬರುತ್ತಿದ್ದಾರೆ. ಜಯಮ್ಮ (ಸಣ್ಣಮ್ಮ) ರುದ್ರಪ್ಪಗೌಡ ಹಾಗೂ ನಾಗವೇಣಮ್ಮ ನಾಗಪ್ಪಗೌಡ ಅವರು ಈ ಪರಂಪರೆಯನ್ನು ಮುಂದುವರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಕನ್ಯಾಕುವರಿಯರಿಗೆ ಬಾಗಿನ ನೀಡುವ ವಿಶಿಷ್ಟ ಆಚರಣೆ

ಕನ್ಯಾಕುವರಿ ಮುತ್ತೈದೆಯರಿಗೆ ಬಾಗಿನ ನೀಡುವುದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದೆ. ಮಾತೃಸ್ವರೂಪದ ಮುತ್ತೈದೆಯರು ಕನ್ಯಾಕುವರಿಯರಿಗೆ ಅರಿಶಿಣ-ಕುಂಕುಮದ ತಿಲಕವಿಟ್ಟು, ಮಡಿಲಿಗೆ ಬಾಗಿನವನ್ನಿಟ್ಟು ಆರತಿ ಬೆಳಗಿ, ಅವರ ಉಜ್ವಲ ಭವಿಷ್ಯ ಹಾಗೂ ಸುಖಮಯ ಜೀವನಕ್ಕಾಗಿ ದೇವಿಯ ಸನ್ನಿಧಿಯಲ್ಲಿ ಹರಸುತ್ತಾರೆ.

ಈ ಸಂದರ್ಭದಲ್ಲಿ ಕನ್ಯಾಕುವರಿಯರ ಕಾಲಿಗೆ ನಮಸ್ಕರಿಸುವ ಬದಲು ಭೂಮಿಗೆ ನಮಸ್ಕರಿಸಿ ಶುಭ ಹಾರೈಸುವುದು ಇಲ್ಲಿನ ವಿಶೇಷ ಆಚರಣೆಯಾಗಿದೆ. ಪೂರ್ವಿಕರ ಕಾಲದಿಂದಲೂ ಈ ಸಂಪ್ರದಾಯವನ್ನು ಶ್ರದ್ಧಾಭಕ್ತಿಯಿಂದ ಪಾಲಿಸಿಕೊಂಡು ಬರಲಾಗುತ್ತಿದೆ.

ಶರನ್ನವರಾತ್ರಿ ಅಂಗವಾಗಿ ಶ್ರೀ ಕಲಾನಾಥೇಶ್ವರಿ ದೇವಿಗೆ ಸೀರೆ ಹಾಗೂ ಹೂವುಗಳಿಂದ ವಿಶೇಷ ಅಲಂಕಾರ ಮಾಡಲಾಗಿತ್ತು. ಶೀಲಾ ಷಣ್ಮುಖ, ಸುಧಾ ಮಲ್ಲಿಕಾರ್ಜುನ, ಅನ್ನಪೂರ್ಣ ನಾಗಲಿಂಗೇಶ್, ಜಯಮಾಲ ಗುರುಮೂರ್ತಿ, ಶ್ಯಾಮಲ ನಂಜುಂಡ, ರಂಜಿತ ವಿಕಾಶ್, ಜ್ಯೋತಿ ಮುರುಗೇಂದ್ರಪ್ಪ, ಅರ್ಪಿತ ವಿಶ್ವಾಸ್, ಅನ್ನಪೂರ್ಣ ಅಯ್ಯಪ್ಪ ಸೇರಿದಂತೆ ತ್ಯಾರಂದೂರು ಮನೆತನದ ಸದಸ್ಯರು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ದೇವಿಯ ಆರಾಧನೆಯಿಂದ ಮಕ್ಕಳ ಆರೋಗ್ಯ ಮತ್ತು ಜ್ಞಾನ ವೃದ್ಧಿಯಾಗಲಿ ಎಂದು ಪ್ರಾರ್ಥಿಸಲಾಯಿತು. ನವರಾತ್ರಿ ಪ್ರಯುಕ್ತ ದೇವಿಯ ಪಾರಾಯಣದೊಂದಿಗೆ ಪ್ರತಿದಿನ ವಿವಿಧ ಧಾರ್ಮಿಕ ಸೇವೆಗಳನ್ನು ಶ್ರದ್ಧಾಭಕ್ತಿಯಿಂದ ಸಲ್ಲಿಸಿ ಸಂಭ್ರಮದಿಂದ ಆಚರಿಸಲಾಗುತ್ತಿದೆ.

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.