ರಿಪ್ಪನ್ ಪೇಟೆ : ಇಲ್ಲಿನ ಸಮೀಪದ ಹಾರಂಬಳ್ಳಿಯಲ್ಲಿ ಮನೆಯ ಸಮೀಪದಲ್ಲಿದ್ದ ಕೃಷಿ ಹೊಂಡದಲ್ಲಿ ಬಿದ್ದು ವಿದ್ಯಾರ್ಥಿಯೋರ್ವ ಸಾವನ್ನಪ್ಪಿದ್ದಾನೆ.
ವಾಸು ಎಂಬುವರ ಪುತ್ರ ಭರತ್ ರಾಜ್ (15) ಸಾವನ್ನಪ್ಪಿದ ದುರ್ಧೈವಿ. ಈತ ರಿಪ್ಪನ್ ಪೇಟೆಯ ಮೇರಿ ಮಾತ ಪ್ರೌಢಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದು,ಈತನ ತಂದೆ ವಾಸು ಇದೇ ಶಾಲೆಯಲ್ಲಿ ಕಚೇರಿ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಭರತ್ ರಾಜ್ ಶಾಲೆ ಮುಗಿಸಿಕೊಂಡು ಮನೆಯ ಬಳಿ ಆಟವಾಡಲು ತೆರಳಿದ್ದ ಸಮಯದಲ್ಲಿ ಕಾಲುಜಾರಿ ಕೃಷಿ ಹೊಂಡದಲ್ಲಿ ಬಿದ್ದಿದ್ದಾನೆ ಎನ್ನಲಾಗಿದೆ.
ರಿಪ್ಪನ್ ಪೇಟೆ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.