WhatsApp Channel Join Now
Telegram Channel Join Now
ರಿಪ್ಪನ್ ಪೇಟೆ : ತುಮಕೂರಿನ ಸಿದ್ದಗಂಗಾ ಮಠದ ಆವರಣದಲ್ಲಿ ಭಾನುವಾರ ನಡೆದ ರಾಜ್ಯಮಟ್ಟದ ಗುರುಕುಲ ಕಲಾ ಸಾಹಿತ್ಯ ಸಮ್ಮೇಳನದಲ್ಲಿ ರಿಪ್ಪನ್ ಪೇಟೆಯ ಯುವ ಸಾಹಿತಿ ಹಾಗೂ ಯುವ ಪತ್ರಕರ್ತ,ಸಮಾಜವಾದಿ ಚಿಂತಕ ರಫಿ ರಿಪ್ಪನ್ ಪೇಟೆ ಇವರಿಗೆ ರಾಜ್ಯಮಟ್ಟದ “ಗುರುಕುಲ ಕಲಾ ಕೀರ್ತಿ” ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ತುಮಕೂರಿನ ಸಿದ್ದಗಂಗಾ ಮಠದ ಪೂಜ್ಯ ಶ್ರೀ ಸಿದ್ದಗಂಗಾ ಮಹಾಸ್ವಾಮಿಗಳು ವಹಿಸಿದ್ದರು.. 
ಅಭೂತಪೂರ್ವ ಸಾಹಿತ್ಯ ಸಮ್ಮೇಳನದಲ್ಲಿ ಈಗಾಗಲೆ ರಾಜ್ಯ ಮಟ್ಟದ ಸಾಹಿತ್ಯ ಸಿರಿ ಹಾಗೂ ಗುರುಕುಲ ಶಿರೋಮಣಿ ಎಂಬ ಎರಡು ಪ್ರಶಸ್ತಿಯನ್ನು ಪಡೆದಂತಹ ಅತ್ಯುತ್ತಮ ಬರಹಗಾರ ರಿಪ್ಪನ್ ಪೇಟೆಯ ರಫ಼ಿ ರಿಪ್ಪನ್ ಪೇಟೆ ರವರಿಗೆ ಗುರುಕುಲ ಕಲಾ ಪ್ರತಿಷ್ಠಾನದಿಂದ ಇವರ ಅನುಪಮ ಸೇವೆಯನ್ನು ಗುರುತಿಸಿ “ಗುರುಕುಲಾ ಕಲಾ ಕೀರ್ತಿ” ಎಂಬ ಬಿರುದಿನೊಂದಿಗೆ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಸಾಹಿತ್ಯ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸುವ ಯುವಪ್ರತಿಭೆಗಳನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗುತ್ತಿದೆ.

ಖ್ಯಾತ ಚಲನಚಿತ್ರ ನಿರ್ದೇಶಕ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ ಎಸ್ ನಾಗಾಭರಣ, ಹಿರಿಯ ಸಾಹಿತಿ ಪದ್ಮಶ್ರೀ ಪುರಸ್ಕೃತ ದೊಡ್ಡರಂಗೇಗೌಡ ಹಾಗೂ ಜನಪದ ಗಾಯಕರಾದ ಗುರುರಾಜ್ ಹೊಸಕೋಟೆ ಗುರುಕುಲ ಕಲಾ ಪ್ರತಿಷ್ಠಾನದ ರಾಜ್ಯಾಧ್ಯಕ್ಷರಾದ ಹುಲಿಯೂರು ದುರ್ಗಾ ಲಕ್ಷ್ಮಿನಾರಾಯಣ್ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.

ಈ ಅತ್ಯುನ್ನತ ಪ್ರಶಸ್ತಿಯನ್ನು ಪಡೆದಂತಹ ರಿಪ್ಪನ್ ಪೇಟೆಯ ಯುವ ಸಾಹಿತಿ ಹಾಗೂ ಯುವ ಪತ್ರಕರ್ತ ನಿಗೆ ಜಿಲ್ಲೆಯಾದ್ಯಂತ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ….

Leave a Reply

Your email address will not be published. Required fields are marked *