Category: ಸೊರಬ ಸುದ್ದಿ:

ಮಾಜಿ ಸಿಎಂ ಬಂಗಾರಪ್ಪ 88ನೇ ಹುಟ್ಟು ಹಬ್ಬ: ಪುತ್ರ ಕುಮಾರ್ ಬಂಗಾರಪ್ಪರಿಂದ ಪೂಜೆ

ಶಿವಮೊಗ್ಗ: ಅಕ್ಷರ, ಅಕ್ಷಯ ಸೇರಿದಂತೆ ಹಲವು ಜನಪ್ರಿಯ ಯೋಜನೆಗಳನ್ನು ರಾಜ್ಯಕ್ಕೆ ನೀಡಿದ ಹಿಂದುಳಿದ ನಾಯಕ, ಮಾಜಿ ಸಿಎಂ, ದಿವಂಗತ ಎಸ್.ಬಂಗಾರಪ್ಪರ 88ನೇ ವರ್ಷದ ಹುಟ್ಟುಹಬ್ಬವನ್ನು ಅವರ ಅಭಿಮಾನಿಗಳು ಅತ್ಯಂತ ಅಭಿಮಾನದಿಂದ ಆಚರಿಸುತ್ತಿದ್ದಾರೆ. ಬಂಗಾರಪ್ಪ ಪುತ್ರ ಸೊರಬ ಶಾಸಕ ಕುಮಾರ ಬಂಗಾರಪ್ಪ ಇಂದು…

ಬಂಗಾರಪ್ಪ ಮನೆಯಲ್ಲಿ ಸಿದ್ದರಾಮಯ್ಯ ವಾಸ್ತವ್ಯ: ಮಧು ಬಂಗಾರಪ್ಪ ಜೊತೆ ವಾಕಿಂಗ್​..ಟಾಕಿಂಗ್

ಸೊರಬ : ತಾಲೂಕಿನ ಕುಬಟೂರಿನ ಮಾಜಿ ಸಿಎಂ ಎಸ್.ಬಂಗಾರಪ್ಪ ಅವರ ಮನೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ವಾಸ್ತವ್ಯ ಹೂಡಿದ್ದಾರೆ. ಹಾನಗಲ್ ಚುನಾವಣಾ ಪ್ರಚಾರಕ್ಕೆ ಆಗಮಿಸಿದ್ದ ಸಿದ್ದರಾಮಯ್ಯ ನಿನ್ನೆ ರಾತ್ರಿ ಬಂಗಾರಪ್ಪ ಮನೆಯಲ್ಲಿ ತಂಗಿದ್ದರು. ಇಂದು ಬೆಳಗ್ಗೆ ಕುಬಟೂರಿನ ಮನೆಯ ಆವರಣದಲ್ಲಿ ಮಧು…

ಸೊರಬ : ಚಂದ್ರಗುತ್ತಿಯ ಶ್ರೀ ರೇಣುಕಾಂಬ ದೇವಸ್ಥಾನದಲ್ಲಿ ಪಂಚಕಜ್ಜಾಯ,ಉಡಿ ಸೇವೆಗೆ ಚಾಲನೆ

ಸೊರಬ : ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕು ಚಂದ್ರಗುತ್ತಿ ಗ್ರಾಮದ ಪ್ರಸಿದ್ಧ ದೇವತೆ ಶ್ರೀ ರೇಣುಕಾಂಬ ದೇವಸ್ಥಾನದಲ್ಲಿ ಭಕ್ತರ ಬಹುದಿನದ ಬೇಡಿಕೆಯಾಗಿದ್ದ ಪಂಚಕಜ್ಜಾಯ ಪ್ರಸಾದ್ ಹಾಗೂ ಉಡಿ ಸೇವೆಗೆ ಇಂದು ಚಾಲನೆ ನೀಡಲಾಯಿತು. ಇಂದು ದೇವಸ್ಥಾನದ ನಿರ್ವಹಣಾಧಿಕಾರಿಯಾದ ರಂಗಪ್ಪನವರು ದೇವಿಗೆ ನೈವೇದ್ಯ…

ಸೊರಬ: ಬಿಜೆಪಿ ಕೈ ತಪ್ಪಿದ ಪುರಸಭೆ ಅಧ್ಯಕ್ಷ ಸ್ಥಾನ : ಶಾಸಕ ಕುಮಾರ್ ಬಂಗಾರಪ್ಪಗೆ ತೀವ್ರ ಮುಖಭಂಗ

ಶಿವಮೊಗ್ಗ: ಸೊರಬ ಪುರಸಭೆ ಅಧ್ಯಕ್ಷ ಅಧ್ಯಕ್ಷ ಎಂ.ಡಿ.ಉಮೇಶ್ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಗೆಲುವು ಲಭಿಸಿದೆ. ಪರಿಣಾಮ ಸೊರಬ ಪುರಸಭೆ ಅಧ್ಯಕ್ಷ ಸ್ಥಾನ ಬಿಜೆಪಿ ಕೈ ತಪ್ಪಿದೆ. ಇಂದು ಸೊರಬ ಪುರಸಭೆ ಉಪಾಧ್ಯಕ್ಷೆ ಮಧುರಾ ಜಿ.ಶೇಟ್ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ…

ಸೊರಬ : ಕೆರೆಯಲ್ಲಿ ಈಜಲು ಹೋಗಿ ವ್ಯಕ್ತಿ ಸಾವು :

ಸೊರಬ : ಕೆರೆಗೆ ಈಜಲು ಹೋಗಿ ವ್ಯಕ್ತಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಸೊರಬ ತಾಲೂಕಿನಲ್ಲಿ ಬುಧವಾರ ಸಂಜೆ ಐದು ಗಂಟೆ ಸುಮಾರಿಗೆ ನಡೆದಿದೆ. ತಾಲೂಕಿನ ಗೊಲ್ಲರಹಳ್ಳಿ ಕೆರೆಯಲ್ಲಿ ಈಜಲು ಹೋದ ಎಣ್ಣೆಕೊಪ್ಪ ನಿವಾಸಿ ರವಿನಾಯ್ಕ (35) ನೀರಿನಲ್ಲಿ ಮುಳುಗಿ ಮೃತಪಟ್ಟ…

ಸೊರಬ: ತೀ ನಾ ಶ್ರೀನಿವಾಸ್ ಹೇಳಿಕೆಗೆ ಬಿಜೆಪಿ ಖಂಡನೆ

ಸೊರಬ: ಕಾಂಗ್ರೆಸ್ ಮುಖಂಡ ತೀನಾ ಶ್ರೀನಿವಾಸ್ ರವರು ನೀಡಿರುವ ಸೊರಬದಲ್ಲಿ ರೈತರನ್ನು ಒಕ್ಕಲೆಬ್ಬಿಸಲಾಗುತ್ತಿದೆ ಎಂಬ ಹೇಳಿಕೆಯನ್ನು ಖಂಡಿಸಿ ಸೊರಬ ಬಿಜೆಪಿ ಮುಖಂಡರು ಇಂದು ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿದರು. ಈ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಗರ್ ಹುಕುಂ ಸಮಿತಿಯ ಸದಸ್ಯರಾದ ದೇವೇಂದ್ರಪ್ಪ ಚನ್ನಾಪುರ…

ಚಂದ್ರಗುತ್ತಿ: ಅಂಗನವಾಡಿ ಕೇಂದ್ರದಲ್ಲಿ ಮಾತೃ ವಂದನಾ ಮತ್ತು ಪೌಷ್ಟಿಕ ಆಹಾರ ಸಪ್ತಾಹ

ಚಂದ್ರಗುತ್ತಿ: ಅಂಗನವಾಡಿ ಕೇಂದ್ರದಲ್ಲಿ ಮಾತೃ ವಂದನಾ ಮತ್ತು ಪೌಷ್ಟಿಕ ಆಹಾರ ಸಪ್ತಾಹವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಎಂ ಪಿ ರತ್ನಾಕರ್ ಉದ್ಘಾಟನೆ ಮಾಡಿದರು. ಪೌಷ್ಟಿಕ ಆಹಾರದ ಬಳಕೆ ಹಾಗೂ ಉಪಯೋಗದ ಬಗ್ಗೆ ಮಾತನಾಡಿದ ಚಂದ್ರಗುತ್ತಿ ಸರ್ಕಾರಿ ಆಸ್ಪತ್ರೆಯ ನರ್ಸ್ ಮಲ್ಲಮ್ಮ ನುಗ್ಗೆ…

ಸೊರಬ:ವಿದ್ಯುತ್ ತಗುಲಿ ಮಹಿಳೆ ಸಾವು ಪ್ರಕರಣ,ಕುಟುಂಬಕ್ಕೆ ಸಾಂತ್ವಾನ

ಸೊರಬ: ಆಕಸ್ಮಿಕವಾಗಿ ವಿದ್ಯುತ್ ತಗುಲಿ ಮಹಿಳೆ ಮೃತಪಟ್ಟ ಘಟನೆ ಮಂಗಳವಾರ ಸಂಜೆ ಸಮೀಪದ ಕತ್ವಾಯಿ ಗ್ರಾಮದಲ್ಲಿ ನಡೆದಿತ್ತು.ಇಂದು ಅವರ ಮನೆಗೆ ಬಿಜೆಪಿ ಮುಖಂಡ ಕಡಸೂರು ಶಿವಕುಮಾರ್ ಭೇಟಿ ನೀಡಿ ಸಾಂತ್ವಾನ ಹೇಳಿದರು. ಕುಟುಂಬದವರಿಗೆ ಸಾಂತ್ವಾನ ಹೇಳಿ ಅವರ ಸಮಸ್ಯೆಗಳಿಗೆ ಸ್ಪಂದಿಸಿದ ಅವರು…

ಸೊರಬ: ಚಲಿಸುತ್ತಿದ್ದಾಗ ಧಗ ಧಗನೇ ಹೊತ್ತಿ ಉರಿದ ಕಾರು

ಸೊರಬ : ತಾಲೂಕಿನ ಚಿಕ್ಕಚೌಟಿಯಿಂದ ಆನವಟ್ಟಿಗೆ ಹೊರಟಿದ್ದ ಮಾರುತಿ ಸ್ವಿಫ್ಟ್ ಡಿಸೈರ್ ಕಾರಿನಲ್ಲಿ ದಟ್ಟನೆ ಹೊಗೆ ಕಾಣಿಸಿಕೊಂಡಿದೆ. ರಾಜು ಎಂಬುವರು ವಾಹನ ಚಲಾಯಿಸಿಕೊಂಡು ಹೋಗುತ್ತಿದ್ದು ರಸ್ತೆಯ ಪಕ್ಕಕ್ಕೆ ವಾಹನ ನಿಲ್ಲಿಸಿದ್ದಾರೆ. ನಿಲ್ಲಿಸಿದ ಕ್ಷಣ ಮಾತ್ರದಲ್ಲಿ ಇಡೀ ವಾಹನಕ್ಕೆ ಧಗ್ಗನೇ ಬೆಂಕಿ ಹೊತ್ತಿಕೊಂಡಿದೆ.…

ಸೊರಬ ಪುರಸಭೆ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆಗೆ ಸಜ್ಜು:

ಸೊರಬ: ಅಚ್ಚರಿಯ ಬೆಳವಣಿಗೆಯಲ್ಲಿ ಜಿಲ್ಲೆಯ ಸೊರಬ ಪುರಸಭೆ ಸದಸ್ಯರು ಪುರಸಭೆಯ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿಗೆ ಅವಕಾಶ ನೀಡುವಂತೆ ಒತ್ತಾಯಿಸಿ ಇಂದು ಜಿಲ್ಲಾಧಿಕಾರಿಗಳ ಕಚೇರಿಯ ಮೆಟ್ಟಿಲೇರಿದ್ದಾರೆ. ಸೊರಬ ಪುರಸಭ ಅಧ್ಯಕ್ಷ ಎಂ.ಡಿ.ಉಮೇಶ್ ಅವರ ನಡುವಳಿಕೆಯಿಂದ ಬೇಸತ್ತು ಇಂದು ಪುರಸಭೆಯ 11 ಜನ…