ಸೊರಬ: ಕಾಂಗ್ರೆಸ್ ಮುಖಂಡ ತೀನಾ ಶ್ರೀನಿವಾಸ್ ರವರು ನೀಡಿರುವ ಸೊರಬದಲ್ಲಿ ರೈತರನ್ನು ಒಕ್ಕಲೆಬ್ಬಿಸಲಾಗುತ್ತಿದೆ ಎಂಬ ಹೇಳಿಕೆಯನ್ನು ಖಂಡಿಸಿ ಸೊರಬ ಬಿಜೆಪಿ ಮುಖಂಡರು ಇಂದು ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿದರು.
ಈ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಗರ್ ಹುಕುಂ ಸಮಿತಿಯ ಸದಸ್ಯರಾದ ದೇವೇಂದ್ರಪ್ಪ ಚನ್ನಾಪುರ ಅವರು ಸಾಗರದ ಕಾಂಗ್ರೆಸ್ ಮುಖಂಡರಾದ ತೀ ನಾ ಶ್ರೀನಿವಾಸ್ ರವರು ಸೊರಬ ತಾಲ್ಲೂಕಿನ ಬಗರ್ ಹುಕುಂ ಸಮಸ್ಯೆಯನ್ನು ಸಂಪೂರ್ಣವಾಗಿ ಪರಿಹರಿಸಿ ಬಿಡುತ್ತೇನೆ ಎಂಬ ವಿಚಾರವಾಗಿ ಸೊರಬ ತಾಲ್ಲೂಕಿನ ಎಣ್ಣೆಕೊಪ್ಪ ಗುಡ್ಡೇಕೊಪ್ಪ ಹಾಯಾ ಬೆಟ್ಟದಕೂರ್ಲಿ ಸಿದ್ದಿಹಳ್ಳಿ ಮತ್ತು ತಾಳಗುಪ್ಪ ಭಾಗದ ರೈತರನ್ನು ಸೇರಿಸಿಕೊಂಡು ಬೊಗಳೆ ರಾಜಕಾರಣ ಮಾಡುತ್ತಾ ಮೊಸಳೆ ಕಣ್ಣೀರು ಸುರಿಸಿ ನಾಟಕದ ಮಾತುಗಳನ್ನು ಆಡುತ್ತಾ ಇರುವುದನ್ನು ಖಂಡಿಸುತ್ತೇವೆ ಎಂದರು.
ಸೊರಬ ತಾಲ್ಲೂಕಿನಲ್ಲಿ ರೈತರಿಗೆ ಅನ್ಯಾಯವಾಗಿದೆ ಎಲ್ಲಾ ರೈತರನ್ನು ಒಕ್ಕಲೆಬ್ಬಿಸುವಂತೆ ಅರಣ್ಯ ಅಧಿಕಾರಿಗಳು ಕಾರ್ಯಚರಣೆ ನಡೆಸುತ್ತಿದ್ದಾರೆ ಎಂದು ಮಾತನಾಡಿದ್ದಾರೆ ಯಾವುದೇ ಒಬ್ಬ ರೈತನನ್ನು ಒಕ್ಕಲೆಬ್ಬಿಸುವ ಕೆಲಸ ಆಗಿಲ್ಲ ಎಲ್ಲ ರೈತರನ್ನ ನಾವು ಕಾಪಾಡುವಂತ ಕಾರ್ಯ ನಮ್ಮ ಬಗರ್ ಹುಕುಂ ಸಮಿತಿ ನಡೆಸುತ್ತಾ ಬಂದಿದೆ ಎಂದರು.
ಕುಮಾರ್ ಬಂಗಾರಪ್ಪನವರು ಮೂವತ್ತು ವರ್ಷದಿಂದ ರೈತರನ್ನು ರಕ್ಷಣೆ ಮಾಡುತ್ತಾ ಬಂದಿದ್ದಾರೆ ಮುಂದೆಯೂ ಮಾಡುತ್ತಾರೆ, ಅದನ್ನು ತೀ ನಾ ಶ್ರೀನಿವಾಸ್ ರವರ ಹತ್ತಿರ ಹೇಳಿಸಿಕೊಂಡು ಸೊರಬ ತಾಲ್ಲೂಕಿನ ರೈತರನ್ನು ರಕ್ಷಣೆ ಮಾಡುವಂತ ಅವಶ್ಯಕತೆ ನಮಗಿಲ್ಲ ಎಂದರು.
ಅವರು ಸಾಗರ ತಾಲ್ಲೂಕಿನಲ್ಲಿ ಹಿಂದೆ ಕಾಗೋಡು ತಿಮ್ಮಪ್ಪನವರು ಕಂದಾಯ ಸಚಿವರಾದಂತ ಸಂದರ್ಭದಲ್ಲಿ ಈ ಹಿಂದೆ ಕಾಂಗ್ರೆಸ್ ಮುಖಂಡರಾಗಿರುವವರು ಗಮನ ಹರಿಸದೆ ಹಾದಿಬೀದಿಯಲ್ಲಿ ಬಗರ್ ಹುಕುಂ ಹಕ್ಕುಪತ್ರವನ್ನು ಮಾರುವಂತಹ ಕೆಲಸವನ್ನು ಮಾಡಿದ್ದಾರೆ ಇದರ ಬಗ್ಗೆ ಅವರು ಗಮನ ಹರಿಸಲಿ ಎಂದರು.
ಈ ಸಂಧರ್ಭದಲ್ಲಿ ಪುರಸಭೆ ಅಧ್ಯಕ್ಷರಾದ ಎಂ ಡಿ ಉಮೇಶ್,ಆರಾಧನ ಸಮಿತಿಯ ಸದಸ್ಯ ಕೊಟ್ರೇಶ್ ಗೌಡ ಹಾಗೂ ಮಲ್ಲಿಕಾರ್ಜುನ ಕಡಸೂರು ಶಿವಕುಮಾರ್ ಭೋಗೆಶ್ ಬಿಜೆಪಿ ಮುಖಂಡರುಗಳಾದ ಸುರೇಶ್ ಉದ್ರಿ,ಕೃಷಮೂರ್ತಿ,ಮಲ್ಲೆಶಪ್ಪ,ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ವರದಿ::ವೆಂಕಟೇಶ್ ಚಂದ್ರಗುತ್ತಿ ಸೊರಬ