Headlines

ಪ್ರಧಾನಿಗೆ ಪೋಸ್ಟ್ ಕಾರ್ಡ್ ನಲ್ಲಿ ಪತ್ರ ಬರೆದು ಯುವಕಾಂಗ್ರೆಸ್ ವತಿಯಿಂದ ಅಂಚೆಕಚೇರಿ ಎದುರು ಬೃಹತ್ ಪ್ರತಿಭಟನೆ:

ಶಿವಮೊಗ್ಗ: ಜಿಲ್ಲೆಯಲ್ಲಿ ಸಾವಿರಾರು ಜನರಿಗೆ ಅನ್ನಕ್ಕೆ ದಾರಿದೀಪವಾಗಿದ್ದ ವಿ.ಐ.ಎಸ್.ಎಲ್‌ ಹಾಗೂ ಎಂ.ಪಿ.ಎಂ ಕಾರ್ಖಾನೆಗಳನ್ನ ಸರ್ಕಾರಿ ಖಾಸಗಿಯವರಿಗೆ ನೀಡಲು ಮುಂದಾಗಿದೆ ಈಗಾಗಲೆ ಇದನ್ನ ನಂಬಿಕೊಂಡಿದ್ದ ಸಾವಿರಾರು ಬಡಕಾರ್ಮಿಕರ ಕುಟುಂಭ ಬೀದಿಗೆ ಬಿದ್ದಿದೆ. ಈ ಕಾರಣ ಇದನ್ನ ಸರ್ಕಾರ ಪುನಸ್ಚೇತನ ಗೊಳಿಸುವುದರ ಬದಲೂ ಖಾಸರಿಗಯವರಿಗೆ ನೀಡುವು ಹುನ್ನಾರ ನಡೆಸಿದೆ. ಈ ಕೆಲಸವನ್ನ ಕೂಡಲೇ ಕೈ ಬಿಡಬೇಕು ಹಾಗೂ ವಿ.ಐ.ಎಸ್.ಎಲ್‌ ಹಾಗೂ ಎಂ.ಪಿ.ಎಂ ಕಾರ್ಖಾನೆಯನ್ನ ಉಳಿಸಬೇಕಿದೆ ಎಂದು ಒತ್ತಾಯಿಸಿ ಇಂದು ಯುವ ಕಾಂಗ್ರೆಸ್‌ ಮುಖಂಡ ಗಣೇಶ್‌ ನೇತೃತ್ವದಲ್ಲಿ ಪತ್ರಚಳುವಳಿಯನ್ನ ನಡೆಸಲಾಯಿತ್ತು.

ಇಂದು ಶಿವಮೊಗ್ಗದ ಮುಖ್ಯ ಅಂಚೇ ಕಛೇರಿಯ ಎದುರು ನೂರಾರು ಸಂಖ್ಯೆಯಲ್ಲಿ ಸೇರಿದ ಕಾಂಗ್ರೆಸ್‌ ಕಾರ್ಯಕತ್ರರು ಪತ್ರ ಚಳುವಳಿಯ ಮೂಲಕ ಜಿಲ್ಲೆಯ ಎರಡು ಪ್ರಮುಖ ಕಾರ್ಖಾನೆಯಾಗಿರೋ ಎಂ.ಪಿ.ಎಂ ಹಾಗೂ ವಿ.ಐ.ಎಸ್‌.ಎಲ್‌. ಕಾರ್ಖಾನೆ ಮುಚ್ಚುವ ಸ್ಥೀತಿಗೆ ತಲುಪಿದ್ದು. ಇದಕ್ಕೆ ಕಾರಣ ಕೆಂದ್ರ ಹಾಗೂ ರಾಜ್ಯ ಸರ್ಕಾರದ ನಿರ್ಲಕ್ಷವಾಗಿದೆ ಎಂದು ಕಾಂಗ್ರೆಸ್‌ ಯುವ ಮುಖಂಡ ಗಣೇಶ್‌ ಆರೋಪಿಸಿದ್ದಾರೆ. ಖಾಸಗಿಯವರೊಂದಿಗೆ ಪರೋಕ್ಷವಾಗಿ ಕೈ ಜೋಡಿಸಿರೋ ಅವರ ಲಾಭಿಗೆ ಮಣಿದಿದೆ ಹಿಂದೆ ಇದ್ದ ಸಿದ್ಧರಾಮಯ್ಯನವರ ಸರ್ಕಾರ ಈ ಕಾರ್ಖಾನೆಗಳ ಉಳಿವಿಗಾಗಿ ಮೈನಿಂಗ್‌ ನಡೆಸಲು ಭೂಮಿಯನ್ನ ನೀಡಿತ್ತು.
ಆದರೆ ಸಧ್ಯ ಶಿವಮೊಗ್ಗ ಸಂಸದರಾಗಿರೋ ಬಿ.ವೈ ರಾಘವೇಂದ್ರ ಕೇಂದ್ರದ ಸಚಿವರನ್ನ ಈ ಕಾರ್ಖಾನೆಗಳಿಗೆ ಕರೆತರುತ್ತಿರೋದು ಕೇವಲ ಪ್ರದರ್ಶನಕ್ಕಾಗಿ ಮಾತ್ರ ಎನ್ನುವಂತಾಗಿದ್ದು ವಿ.ಐ.ಎಸ್‌.ಎಲ್‌ ಉಳಿವಿಗೆ ಒಂದಿಚ್ಚು ಮೈನಿಂಗ್‌ ಭೂಮಿಯನ್ನ ನೀಡಿಲ್ಲಾ. ಹಾಗೂ ಲೋಕಸಭೆಯಲ್ಲಿ ಚರ್ಚೆ ನಡೆಯುವ ಸಮಯಲ್ಲಿ ಈ ವಿಷಯವಾಗಿ ಒಂದು ಮಾತನ್ನು ಆಡಿಲ್ಲಾ ಇದರೊಂದಿಗೆ ಸ್ವಥಹಾ ಇವ ತಂದೇ ಬಿ.ಎಸ್.ಯಡಿಯೂರಪ್ಪನವರು 4 ಬಾರಿ ಮುಖ್ಯಮಂತ್ರಿಯಾಗಿದ್ದರು ಈ ಕಾರ್ಖಾನೆಯ ಉಳಿವಿಗೆ ಯಾವುದೇ ಕ್ರಮಗಳನ್ನ ತೆಗೆದುಕೊಂಡಿಲ್ಲಾ ಎಂದು ಆರೋಪ ಮಾಡಿದರು.

 ಕರ್ನಾಟಕ ಸರ್ಕಾರದ ಸುರ್ಪದಿಯಲ್ಲಿದ್ದ ಕಾರ್ಖಾನೆಯಲ್ಲಿ ಇನ್ನಷ್ಟು ಉತ್ತುಂಗ ಸ್ಥಿತಿಗೆ ಕೊಂಡೊಯ್ಯಬಹುದೆಂಬ ದೃಷ್ಟಿಯಿಂದ ಕೇಂದ್ರ ಸರ್ಕಾರದ ವಿಐಎಸ್ಎಲ್ ನಲ್ಲಿ ವಿಲೀನಗೊಳಿಸಲಾಗಿತ್ತು. ಆದರೆ ನಂತರದ ದಿನಗಳಲ್ಲಿ ಕಾರ್ಖಾನೆಯನ್ನು ಉತ್ತುಂಗದ ಸ್ಥಿತಿಗೆ ಕೊಂಡೊಯ್ಯುವ ಬದಲಾಗಿ ನಷ್ಟದಲ್ಲಿ ದೂಡಲಾಗಿದೆ .ಸರ್ಕಾರ ನಷ್ಟದ ನೆಪವೊಡ್ಡಿ ಕಾರ್ಖಾನೆ ಮುಚ್ಚಲು ಹುನ್ನಾರ ನಡೆಸುತ್ತಿರುವುದನ್ನು ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತದೆ.

ಸರ್ಕಾರಿ ಸ್ವಾಮ್ಯದಲ್ಲಿರುವ ಕಾರ್ಖಾನೆಗೆ ಸರ್ಕಾರ ಸ್ವಂತ ಗಣಿ ಒದಗಿಸಲು ಮೀನಮೇಷ ಎಣಿಸುತ್ತಿರುವ ವಲ್ಲದೆ ಹಂತಹಂತವಾಗಿ ಕಾರ್ಖಾನೆಯಲ್ಲಿ ಸ್ಥಗಿತಗೊಳಿಸುವುದಲ್ಲದೆ ಉದ್ಯೋಗಗಳನ್ನು ಕಡಿತಗೊಳಿಸುತ್ತಿವೆ.ಇದು ಕಾರ್ಖಾನೆಯನ್ನು ಸಂಪೂರ್ಣ ಮುಚ್ಚುವ ಹುನ್ನಾರವಾಗಿದೆ.ವಿಐಎಸ್ಎಲ್ ಹಾಗೂ ಎಂಪಿಎಂ ಕಾರ್ಖಾನೆಯಿಂದಾಗಿ ಶಿವಮೊಗ್ಗ ಜಿಲ್ಲೆಯಲ್ಲಿ ಉದ್ಯೋಗವಕಾಶಗಳ ಸೇವಾ ಕೇಂದ್ರ ಸ್ಥಾಪನೆಗೆ ಪೂರಕವಾದ ಬೇರೆ ಬೇರೆ ಉದ್ಯಮಗಳು ಬೆಳೆದು ಬಂದಿದ್ದವು.
ಆದರೆ ಇದೀಗ ಅವಲಂಬಿತ ಎಲ್ಲ ಉದ್ಯಮಗಳು ನೆಲಕಚ್ಚಿವೆ ಆರ್ಥಿಕ ಚಟುವಟಿಕೆ ಕುಂಠಿತವಾಗುತ್ತಿದೆ.

 ಕೇಂದ್ರ ಸರಕಾರ ಕೂಡಲೇ ವಿಐಎಸ್ಎಲ್ ಹಾಗೂ ಎಂಪಿಎಂ ಕಾರ್ಖಾನೆಯ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಬೇಕು ಕಾರ್ಖಾನೆಗೆ ಸ್ವಂತ ಗಣಿ ಒದಗಿಸುವುದರ ಜತೆಗೆ ಕಾರ್ಖಾನೆಯನ್ನು ಸರ್ಕಾರಿ ಸ್ವಾಮ್ಯದಲ್ಲಿ ಉಳಿಸಿಕೊಂಡು ಹೆಚ್ಚಿನ ಉದ್ಯೋಗಾವಕಾಶ ಸೃಷ್ಟಿಸುವ ಮೂಲಕ ಜಿಲ್ಲೆಯ ಆರ್ಥಿಕ ಪ್ರಗತಿಗೆ ಸಹಕರಿಸಬೇಕೆಂದು ಪ್ರದೇಶ ಯುವ ಕಾಂಗ್ರೆಸ್ ನೇತೃತ್ವದಲ್ಲಿ ಸಾರ್ವಜನಿಕರೊಂದಿಗೆ ಹಾಗೂ ಎಂಪಿಎಂ ಉಳಿವಿಗಾಗಿ ನಡೆಸುತ್ತಿದ್ದೇವೆ ಎಂದರು.

ವಿಐಎಸ್ಎಲ್ ಹಾಗೂ ಎಂಪಿಎಂ ಉಳಿವಿಗೆ ಕ್ರಮ ಕೈಗೊಳ್ಳದಿದ್ದಲ್ಲಿ ಕಾರ್ಖಾನೆಯ ಉಳಿವಿಗಾಗಿ ನಡೆಯುತ್ತಿರುವ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುತ್ತೇವೆ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *