ಹೊಸನಗರ ಸುದ್ದಿ:
ಆಕ್ರಮ ಮರಳು ಸಾಗಾಟಕ್ಕೆ ದಿಟ್ಟ,ನಿರ್ದಾಕ್ಷಿಣ್ಯ ಕ್ರಮ:ವಿ ಎಸ್ ರಾಜೀವ್
ಹೊಸನಗರ :: ತಾಲ್ಲೂಕಿನಲ್ಲಿ ದಿನಂಪ್ರತಿ ಅಕ್ರಮ ಮರಳು ಸಾಗಾಟ ಹಾಗೂ ಆಕ್ರಮವಾಗಿ ಕಲ್ಲು ಕ್ವಾರಿಗಳ ಆರ್ಭಟ ಎಗ್ಗಿಲ್ಲದೆ ನಡೆಯುತ್ತಿದೆ. ಈ ಬಗ್ಗೆ ಸಾರ್ವಜನಿಕರು ದೂರುಗಳನ್ನು ನಮ್ಮ ಗಮನಕ್ಕೆ ತಂದಿದ್ದು,ಆಕ್ರಮಕ್ಕೆ ಕಡಿವಾಣ ಹಾಕುವ ಸಲುವಾಗಿ ಹೊಸನಗರ ತಾಲ್ಲೂಕಿನ ಹಲವು ಅಧಿಕಾರಿಗಳಿಗೆ ಅಕ್ರಮವಾಗಿ ಕಲ್ಲು,ಮರಳು ತುಂಬಿದ ವಾಹನಗಳನ್ನು ಪತ್ತೆಹಚ್ಚಿ ಪ್ರಕರಣ ದಾಖಲಿಸಲು ಹೊಸನಗರದ ತಹಶೀಲ್ದಾರ್ ವಿ.ಎಸ್ ರಾಜೀವ್‌ರವರು ತಾಲ್ಲೂಕಿನ ಅಧಿಕಾರಿಗಳಿಗೆ ಸಂದೇಶ ರವಾನಿಸಿದ್ದಾರೆ. ಈ ಕುರಿತು ಹೊಸನಗರ ತಾಲೂಕು ಕಚೇರಿಯ ಸಭಾಂಗಣದಲ್ಲಿ ಮಾತನಾಡಿದ ತಹಶಿಲ್ದಾರವರು ಸಾರ್ವಜನಿಕರು ನಮ್ಮ ಅಧಿಕಾರಿಗಳ ಬಗ್ಗೆ…
ಹೊಸನಗರ ಪೊಲೀಸರ ಭರ್ಜರಿ ಭೇಟೆ : ಮೀನು ಗಾಡಿಯಲ್ಲಿ ಗಾಂಜಾ ಸಾಗಿಸುತ್ತಿದ್ದ ಆರೋಪಿಯ ಬಂಧನ :
ಹೊಸನಗರ: ಇಲ್ಲಿನ ಸಮೀಪದ ಮಾವಿನಕೊಪ್ಪ ಬಳಿ ಇಂದು ಬೆಳಗಿನ ಜಾವ ಮೀನು ತುಂಬಿದ್ದ ಗೂಡ್ಸ್ ಗಾಡಿಯಲ್ಲಿ ಸುಮಾರು ಒಂದು ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಸಬ್ ಇನ್ಸ್‌ಪೆಕ್ಟರ್ ರಾಜೇಂದ್ರ ನಾಯ್ಕ್ ರವರ ನೇತೃತ್ವದ ತಂಡ ಇಂದು ಬೆಳಗಿನಜಾವ ಮಿಂಚಿನ ದಾಳಿ ನಡೆಸಿ ಒಂದು ಕೆ.ಜಿ ಗಾಂಜಾ ಹಾಗೂ ಆರೋಪಿ ಸಹಿತ ಒಂದು ಗೂಡ್ಸ್ ಆಟೋವನ್ನು ವಶಪಡಿಸಿಕೊಂಡಿದ್ದಾರೆ. ಡಿ.ವೈ.ಎಸ್.ಪಿಯವರ ಆದೇಶದ ಮೇರೆಗೆ ಸರ್ಕಲ್ ಇನ್ಸ್‌ಪೆಕ್ಟರ್ ಮಧುಸೂಧನ್‌ರವರ ಮಾರ್ಗದರ್ಶನದಲ್ಲಿ ಈ ಕಾರ್ಯಚರಣೆ ನಡೆಸಲಾಗಿದ್ದು ಬಟ್ಟೆಮಲ್ಲಪ್ಪದಿಂದ ಬರುತ್ತಿದ್ದ ಮೀನು ತುಂಬಿದ್ದ ಗೂಡ್ಸ್ ಆಟೋದಲ್ಲಿ…
ಹೊಸನಗರ ತಾಲೂಕ್ ವೀರಶೈವ-ಲಿಂಗಾಯತ ಪರಿಷತ್ ನ ಅಧ್ಯಕ್ಷರಾಗಿ ಆನಂದ್ ಮೆಣಸೆ ಆಯ್ಕೆ :
ಹೊಸನಗರ : ತಾಲ್ಲೂಕು ವೀರಶೈವ-ಲಿಂಗಾಯತ ಪರಿಷತ್ ನ ಸರ್ವ ಸದಸ್ಯರ ಸಭೆಯಲ್ಲಿ ಪದಾಧಿಕಾರಿಗಳ ಆಯ್ಕೆ ನಡೆಯಿತು. ವೀರಶೈವ-ಲಿಂಗಾಯತ ಪರಿಷತ್ ನ ಅಧ್ಯಕ್ಷರಾಗಿ ಆನಂದ್ ಮೆಣಸೆ ರವರು ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಗಳಾಗಿ ಮಹೇಶ್ ದೇವರಸಲಕಿ,ದೇವು ಹುಳಿಗದ್ದೆ,ಲೋಕೇಶ್ ಶುಂಠಿಕೊಪ್ಪ,ಖಜಾಂಚಿಯಾಗಿ ಚಂದ್ರಶೇಖರ್ ಹಾಲುಗುಡ್ಡೆ,ಉಪಾದ್ಯಕ್ಷರುಗಳಾಗಿ ಜಗದೀಶ್ ಕುಕ್ಕಳಲೆ,ದಯಾಕರ್,ವಿಶ್ವನಾಥ್ ಹೊನ್ನೆಬೈಲು,ಪ್ರವೀಣ್ ಎಂ.ಗುಡ್ಡೆಕೊಪ್ಪ,ಕಮಲಾಕರ್ ಕಮದೂರು ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಗಳಾಗಿ ಸಚಿನ್ ಗೌಡ ಗರ್ತಿಕೆರೆ,ನಿರಂಜನ್ ರಿಪ್ಪನ್ ಪೇಟೆ,ಟಿ.ಎಲ್ ಷಣ್ಮುಖ,ಶಿವಮೂರ್ತಿ ಹರತಾಳು,ಸುದಾಕರ್ ಬೆನವಳ್ಳಿ.ಹಾಗೂ 26 ಜನ ನಿರ್ದೇಶಕರನ್ನು ಆಯ್ಕೆ ಮಾಡಲಾಯಿತು. ಹಾಗೂ ವೀರಶೈವ-ಲಿಂಗಾಯತ ಕಾವಲು ಪರಿಷತ್ತು,ಕಾನೂನು ಪರಿಷತ್ತು,ಪ್ರಚಾರ ಪರಿಷತ್ತು ಗಳನ್ನು…
ಹೊಸನಗರ : ಮಾರುತಿಪುರ ಗ್ರಾಪಂ ಮಾಜಿ ಅಧ್ಯಕ್ಷರಾದ ಓಂಕೇಶ್ ಗೌಡ್ರು ನಿಧನ :
ಹೊಸನಗರ : ಹೊಸನಗರ ತಾಲೂಕು ಮಾರುತಿಪುರ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು ಹಾಗೂ ಕಾಂಗ್ರೆಸ್ ಹಿರಿಯ ಮುಖಂಡರಾದ ಓಂಕೇಶ್ ಗೌಡ್ರು ಸಂಪಳ್ಳಿ ಇಂದು ಬೆಳಿಗ್ಗೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ದೀರ್ಘಕಾಲದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಓಂಕೇಶ್ ಇಂದು ಬೆಳಿಗ್ಗೆ ಹೃದಯಘಾತದಿಂದ ನಿಧನರಾಗಿದ್ದು. ಶ್ರೀಯುತರು 20 ವರ್ಷಕ್ಕೂ ಹೆಚ್ಚು ಕಾಲ ಸಕ್ರಿಯ ಕಾಂಗ್ರೆಸ್ ಕಾರ್ಯಕರ್ತರಾಗಿ,ಸತತ 2 ಬಾರಿ ಮಾರುತಿಪುರ ಪಂಚಾಯತ್ ಸಂಪಳ್ಳಿ ಕ್ಷೇತ್ರದಿಂದ ಸದಸ್ಯರಾಗಿ, ಪಂಚಾಯತ್ ಅಧ್ಯಕ್ಷರು ಆಯ್ಕೆಯಾಗಿದ್ದರು. ಓಂಕೇಶ ಗೌಡ್ರು ಸಂಪಳ್ಳಿ ಅವರ ಅಕಾಲಿಕ ನಿಧನಕ್ಕೆ ಸಂಬಂಧಿಕರು,ಸ್ನೇಹಿತರೂ…
ಕಾರ್ಯಾಗಾರಗಳಲ್ಲಿ ಪಾಲ್ಗೊಳ್ಳುವುದರಿಂದ ಜನಪ್ರತಿನಿಧಿಗಳಿಗೆ ಅರಿವು ಮೂಡುತ್ತದೆ : ಶಾಸಕ ಹರತಾಳು ಹಾಲಪ್ಪ.
ಹೊಸನಗರ : ಜನಪ್ರತಿನಿಧಿಗಳಾಗಿ ಕಾರ್ಯಗಾರಗಳಲ್ಲಿ ಭಾಗವಹಿಸಿದ್ದಾಗ ಸರ್ಕಾರದ ಸವಲತ್ತುಗಳು ಹಾಗೂ ಜನಪರ ಯೋಜನೆಗಳನ್ನು ಸಾಮಾನ್ಯ ಜನರಿಗೆ ತಲುಪಿಸುವ ವ್ಯವಸ್ಥೆ ಆಗುತ್ತದೆ. ಇದು ಬಿಜೆಪಿ ಪಕ್ಷದಿಂದ ಮಾತ್ರ ಸಾಧ್ಯ ಎಂದು ಹೊಸನಗರ ಸಾಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಹರತಾಳು ಹಾಲಪ್ಪ ಹೇಳಿದರು. ಅವರು ಇಂದು ಹೊಸನಗರದ ಗಾಯತ್ರಿ ಮಂದಿರದಲ್ಲಿ ತಾಲೂಕ್ ಬಿಜೆಪಿ ಹಾಗೂ ಗ್ರಾಮೀಣ ಪಂಚಾಯತ್ ರಾಜ್ ಪ್ರಕೋಷ್ಠ ವತಿಯಿಂದ ಆಯೋಜಿಸಿದ್ದ ಚುನಾಯಿತ ಗ್ರಾ.ಪಂ ಸದಸ್ಯರ ತಾಲ್ಲೂಕು ಸಮಾವೇಶ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಜಿಲ್ಲಾ ಬಿಜೆಪಿಯ…
ಸರಳವಾಗಿ ನಡೆದ ಅಮ್ಮನಘಟ್ಟ ಜೇನುಕಲ್ಲಮ್ಮ ದೇವಿಯ ಜಾತ್ರಾ ಮಹೋತ್ಸವ :
ಶಿವಮೊಗ್ಗ ಜಿಲ್ಲೆಯ ಇತಿಹಾಸ ಪ್ರಸಿದ್ಧ ಜೇನುಕಲ್ಲಮ್ಮ ದೇವಿಯ ಜಾತ್ರೆಯು ಅತ್ಯಂತ ಸರಳ ಹಾಗೂ ಸಾಂಕೇತಿಕವಾಗಿ ನೆರವೇರಿತು. ಮಹಾಲಯ ಸಮಯದಲ್ಲಿ ಜರುಗುವ ಹದಿನೈದು ದಿನಗಳ ಜಾತ್ರಾ ಮಹೋತ್ಸವ ಇದಾಗಿದ್ದು, ಕೊರೋನಾ ಕಾರಣದಿಂದ ಜಾತ್ರಾ ಮಹೋತ್ಸವವು ಕಳೆಗುಂದಿತ್ತು. ಶ್ರೀ ಜೇನುಕಲ್ಲಮ್ಮ ಇರುವುದು ಚಿತ್ತಾಕರ್ಷಕ ಮಲೆನಾಡಿನ ಪ್ರಕೃತಿ ಐಸಿರಿ ನಡುವೆ. ಇಂತಹ ಅಪರೂಪದ ಪ್ರಕೃತಿದತ್ತ ದೇವಸ್ಥಾನವೇ ಶ್ರೀ ಜೇನುಕಲ್ಲಮ್ಮ ಕ್ಷೇತ್ರ.ಹೊಸನಗರ ತಾಲೂಕು ಕೋಡೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಅಮ್ಮನಘಟ್ಟ ಬೆಟ್ಟವೇ ಜೇನುಕಲ್ಲಮ್ಮ ದೇವಸ್ಥಾನ. ಮಲೆನಾಡಿನ ತಪ್ಪಲಿನಲ್ಲಿರುವ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ…
ಮಾರುತಿಪುರ : ಭೀಕರ ರಸ್ತೆ ಅಪಘಾತ,ಬೈಕ್ ಸವಾರ ಸ್ಥಳದಲ್ಲೆ ಸಾವು!!
ಹೊಸನಗರ : ಇಲ್ಲಿನ ಮಾರುತಿಪುರ ಸಮೀಪ ಬೈಕ್ ಹಾಗೂ ಲಾರಿ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೆ ಸಾವನ್ನಪ್ಪಿರುವ ಘಟನೆ ನಡೆದಿದೆ. ಸೊರಬ ಮೂಲದ ಯುವಕ ಬೈಕ್ ನಲ್ಲಿ ಸೊರಬದಿಂದ ಹೊಸನಗರ ಮಾರ್ಗವಾಗಿ ತೆರಳುತ್ತಿರುವಾಗ ಮಾರುತಿಪುರ ಸಮೀಪ ಬೈಕ್ ಸವಾರನ ನಿಯಂತ್ರಣ ತಪ್ಪಿ ಲಾರಿ ಚಕ್ರಕ್ಕೆ ಸಿಲುಕಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೆ ಮೃತಪಟ್ಟಿದ್ದಾನೆ. ಲಾರಿ ಚಾಲಕ ಅಪಘಾತ ಸ್ಥಳದಲ್ಲಿ ವಾಹನ ನಿಲ್ಲಿಸದೆ ಪರಾರಿಯಾಗಿದ್ದು ನಂತರ ಊರಿನ ಗ್ರಾಮಸ್ಥರು ವಾಹನ ಬೆನ್ನಟ್ಟಿ ಬಟ್ಟೆಮಲ್ಲಪ್ಪ ಸಮೀಪ ತಡೆದು…
ಹೊಸನಗರ : ಪಂಡಿತ್ ದೀನದಯಾಳ್ ಉಪಾಧ್ಯಾಯರ 105ನೇ ಜನ್ಮ ದಿನಾಚರಣೆ
ಹೊಸನಗರ : ಇಂದು ಪಂಡಿತ್ ದಿನದಯಳ್ ಉಪಾಧ್ಯಾಯರ ಜಯಂತಿ ಯನ್ನು ತಾಲೂಕು ಬಿಜೆಪಿ ಘಟಕ ವತಿಯಿಂದ ಹೊಸನಗರ ರಿಪ್ಪನಪೇಟೆ ಹುಂಚ ಮತ್ತು ನಗರ ದಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು ಈ ಕಾರ್ಯಕ್ರಮವು ಹೊಸನಗರ ತಾಲ್ಲೂಕಿನ ಎಲ್ಲಾ ಶಕ್ತಿ ಕೇಂದ್ರದಲ್ಲಿ ನಡೆಯಿತು ಮತ್ತು ಈ ಕಾರ್ಯಕ್ರಮವು ಪ್ರತಿ ಬೂತಿನಲ್ಲೂ ನಡೆಯಿತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಎನ್ ಆರ್ ದೇವಾನಂದ್ ಪಂಡಿತ್ ದೀನದಯಾಳ ಉಪಾಧ್ಯಾಯರು ಒಬ್ಬ ಉದಾತ್ತ ಆದರ್ಶವ್ಯಕ್ತಿ ಮತ್ತು ಪ್ರಚಂಡ ಸಂಘಟನಾ ಸಾಮಾರ್ಥ್ಯವನ್ನು ಹೊಂದಿದ್ದವರಾಗಿದ್ದರು. ಅವರು ಕೇವಲ ವ್ಯಕ್ತಿಯಾಗಿರದೇ ಪ್ರತಿಯೊಂದು ರಂಗದಲ್ಲೂ…
ರಿಪ್ಪನ್ ಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಗ್ರಾಪಂ ಸದಸ್ಯ ಆಸೀಫ಼್ ಭಾಷಾಸಾಬ್ ಅವಿರೋಧ ಆಯ್ಕೆ :
ಹೊಸನಗರ: ರಿಪ್ಪನ್ ಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಅವಿರೋಧವಾಗಿ ರಿಪ್ಪನ್ ಪೇಟೆ ಗ್ರಾಮ ಪಂಚಾಯತ್ ಸದಸ್ಯ ಹಾಗೂ ಕಾಂಗ್ರೆಸ್ ಯುವ ಮುಖಂಡ ಆಸೀಫ಼್ ಭಾಷಾಸಾಬ್ ಆಯ್ಕೆಯಾಗಿದ್ದಾರೆ. ಇಂದು ಹೊಸನಗರದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಪದಗ್ರಹಣ ಹಾಗೂ ಜವಬ್ದಾರಿ ಹಂಚಿಕೆ ಸಭೆಯಲ್ಲಿ ತಾಲೂಕ್ ಕಾಂಗ್ರೆಸ್ ಅಧ್ಯಕ್ಷರಾದ ಬಿ ಜಿ ನಾಗರಾಜ್ ಅವರು ಈ ನೇಮಕಾತಿ ಆದೇಶ ಹೊರಡಿಸಿದ್ದು,ಮಾಜಿ ಸಚಿವರಾದ ಕಿಮ್ಮನೆ ರತ್ನಾಕರ್ ಉಪಸ್ಥಿತಿಯಲ್ಲಿ ಮಾಜಿ ಸಚಿವರಾದ ಕಾಗೋಡು ತಿಮ್ಮಪ್ಪರವರು ಆದೇಶದ ಪ್ರತಿಯನ್ನು ಆಸೀಫ಼್ ಭಾಷಾಸಾಬ್ ಅವರಿಗೆ ಹಸ್ತಾಂತರಿಸಿದರು. ಆಸೀಫ಼್…
- 1
- 2