ಹೊಸನಗರ : ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ

ಹೊಸನಗರ: ಕಳೆದೆರಡು ದಿನದಿಂದ ನಾಪತ್ತೆಯಾಗಿದ್ದ ಪಟ್ಟಣದ ಚರ್ಚ್ ರಸ್ತೆಯ ನಿವಾಸಿ ಮಕ್ಬೂಲ್ ಅಹಮದ್ (31) ಎಂಬ ವ್ಯಕ್ತಿಯ ಶವ ಪಟ್ಟಣದ ಕಾಳಿಕಾಪುರ ಕನ್ನರ್ ಗುಂಡಿಯ ಹೊಳೆಯಲ್ಲಿ ಬುಧವಾರ ಬೆಳಿಗ್ಗೆ ಪತ್ತೆಯಾಗಿದೆ. ಮಕ್ಬೂಲ್ ಅಹಮದ್ ಕಳೆದ ಎರಡು ದಿನಗಳಿಂದ ಮನೆಯಿಂದ ನಾಪತ್ತೆಯಾಗಿದ್ದನು.  ಕಳೆದ ಕೆಲವು ವರ್ಷಗಳಿಂದ ಮಾನಸಿಕ ಅಸ್ವಸ್ಥನಾಗಿದ್ದು ಈತನು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದೆ ಎಂದು ಹೇಳಲಾಗುತ್ತಿದೆ.  ಸ್ಥಳೀಯರ ಸಹಕಾರದಿಂದ ಶವವನ್ನು ದಡಕ್ಕೆ ತಲುಪಿಸಲಾಯಿತು.ಪೊಲೀಸ್ ತನಿಖೆಯಿಂದ ಹೆಚ್ಚಿನ ಮಾಹಿತಿ ತಿಳಿದುಬರಬೇಕಾಗಿದೆ. ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ….

Read More

ಹೊಸನಗರ: ಯುವಕನ ಕಿಡ್ನಿ ವೈಫಲ್ಯ,ಚಿಕಿತ್ಸೆಗೆ ನೆರವು ಯಾಚನೆ :

ಹೊಸನಗರ: ಇಲ್ಲಿನ ಮಾರಿಗುಡ್ಡ ವಾಸಿಯಾದ ಯುವಕನೊಬ್ಬ 3 ವರ್ಷಗಳಿಂದ ಕಿಡ್ನಿ ವೈಫಲ್ಯಕ್ಕೊಳಗಾಗಿದ್ದು, ಚಿಕಿತ್ಸೆ ವೆಚ್ಚ ಭರಿಸಲಾಗದೆ ಅವರ ಕುಟುಂಬ ದಾನಿಗಳಿಂದ ನೆರವು ಯಾಚಿಸಿದೆ. ಹೊಸನಗರದ ಮಾರಿಗುಡ್ಡ ವಾಸಿಯಾದ ಮಂಜುನಾಥ ಮತ್ತು ಪದ್ಮಾವತಿ ದಂಪತಿಗಳ  ಮಗನಾದ 23  ವರ್ಷ ವಯ್ಯಸ್ಸಿನ ಶರತ್ ಎಂಬುವವರು ಸುಮಾರು 3 ವರ್ಷದಿಂದ ಕಿಡ್ನಿ ವೈಫಲ್ಯಗೊಂಡಿದ್ದು, ಆರ್ಥಿಕ ಸಮಸ್ಯೆಯಿಂದಾಗಿ ಡಯಾಲಿಸಿಸ್ ಮಾಡಲು ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.  ಈಗಾಗಲೇ ಶಿವಮೊಗ್ಗದ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಆರಂಭವಾಗಿದೆ, ಇನ್ನೂ ಹೆಚ್ಚಿನ  ಚಿಕಿತ್ಸೆಗಾಗಿ ಬೆಂಗಳೂರಿನ ಹೊಸೂರು ರಸ್ತೆಯ ನಾರಾಯಣ…

Read More

ದಲಿತ ಮಹಿಳೆಯ ಶವಸಂಸ್ಕಾರಕ್ಕೆ ಅಡ್ಡಿ: ಪೊಲೀಸರ ಮಧ್ಯಸ್ಥಿಕೆಯಿಂದ ಸಮಸ್ಯೆ ಇತ್ಯರ್ಥ:

ಹೊಸನಗರ: ಆದಿವಾಸಿ ಬುಡಕಟ್ಟು ಜನಾಂಗದವರಿಗೆ ಮೀಸಲಿಟ್ಟಿದ್ದ ರುದ್ರಭೂಮಿಯನ್ನು ಖಾಸಗಿ ವ್ಯಕ್ತಿಗಳು ಅತಿಕ್ರಮಿಸಿ ಶವಸಂಸ್ಕಾರಕ್ಕೆ ಅಡ್ಡಿ ಪಡಿಸಿದ ಘಟನೆ ಮುಂಬಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿರಿಯೋಗಿ ಎಂಬಲ್ಲಿ ನಡೆದಿದೆ. ಆದಿವಾಸಿ ಬುಡಕಟ್ಟು ಜನಾಂಗಕ್ಕೆ ಮೀಸಲಿಟ್ಟಿದ್ದ ಜಾಗವನ್ನು ಖಾಸಗಿ ವ್ಯಕ್ತಿಗಳು ಆಕ್ರಮಿಸಿದ್ದರಿಂದ ಬುಡಕಟ್ಟು ಜನಾಂಗದ ಮೃತಪಟ್ಟ ಮಹಿಳೆಯೊಬ್ಬರ ಶವ ಸಂಸ್ಕಾರಕ್ಕೆ ಮುಂಜಾನೆಯಿಂದ ಮಧ್ಯಾಹ್ನದವರೆಗೂ ಕಾಯಿಸಿದ ಘಟನೆ ಮುಂಬಾರು ಗ್ರಾಮದ ಹಿರಿಯೋಗಿಯಲ್ಲಿ ನಡೆದಿದೆ. ಮುಂಬಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿರಿಯೋಗಿ ಗ್ರಾಮದ ಸರ್ವೆ ನಂ16 ರಲ್ಲಿ 2 ಎಕರೆ ಪ್ರದೇಶವನ್ನು ಆದಿವಾಸಿ…

Read More

ಎಂ ಗುಡ್ಡೆಕೊಪ್ಪ ಗ್ರಾಮ ಪಂಚಾಯತಿಯಲ್ಲಿ ಸಕಾಲದ ಮಾಹಿತಿಯ ಫಲಕ ಕಾಣೆ :

ಹೊಸನಗರ: ಇಲ್ಲಿನ ಸಮೀಪದ ಎಂ ಗುಡ್ಡೆಕೊಪ್ಪ ಗ್ರಾಮ ಪಂಚಾಯತಿಯಲ್ಲಿ ಸಾಮಾನ್ಯ ಜನರಿಗೆ ಮಾಹಿತಿ ನೀಡುವ ಸಕಾಲ ದ ಫಲಕ ಕಾಣೆಯಾಗಿದೆ. ಸಾಮಾನ್ಯ ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಸಕಾಲ ದ ಫಲಕ ಹಾಕುವುದು ಕಡ್ಡಾಯವಾಗಿದೆ ಆದರೆ ಎಂ ಗುಡ್ಡೆಕೊಪ್ಪ ಗ್ರಾಮ ಪಂಚಾಯತಿಯಲ್ಲಿ ಹೊಸ ಕಟ್ಟಡಕ್ಕೆ ಕಛೇರಿ ವರ್ಗಗೊಂಡಿದ್ದು ಹಳೆ ಪಂಚಾಯಿತಿಯನ್ನು ಸ್ವಚ್ಚ ಸಂಕೀರ್ಣ ಅಡಿಯಲ್ಲಿ ಸಿದ್ದಪಡಿಸಿದ್ದಾರೆ. ಆದರೆ ಸಾಮಾನ್ಯ ಜನರಿಗೆ ಅರಿವು ಮೂಡಿಸುವ ಸಲುವಾಗಿ ಹಾಕುವ ಸಕಾಲ ಫಲಕ ಇನ್ನೂ ಸ್ವಚ್ಚ ಸಂಕೀರ್ಣ…

Read More

ಹೊಸನಗರ :ಸಾರ್ವಜನಿಕ ಆಸ್ಪತ್ರೆಯಲ್ಲೆ ನೇಣಿಗೆ ಶರಣಾದ ರೋಗಿ:

ಹೊಸನಗರ: ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಅನಾರೋಗ್ಯ ನಿಮಿತ್ತ ದಾಖಲಾಗಿದ್ದ  ಸೊನಲೆಯ ರೋಗಿಯೊಬ್ಬ ಆಸ್ಪತ್ರೆಯಲ್ಲೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಸೊನಲೆಯ ವಾಸಿ ಕೃಷಿಕ ವೃತ್ತಿ ಮಾಡಿಕೊಂಡಿದ್ದ ಜಗದೀಶ್ (50) ಎಂಬುವವರು ಅನಾರೋಗ್ಯ ನಿಮಿತ್ತ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದರು,ಶನಿವಾರ ಮಧ್ಯರಾತ್ರಿ ತಾನು ಮಲಗಿದ್ದ ಕೊಠಡಿಯಿಂದ ಹೊರಬಂದ ಜಗದೀಶ್ ಸಾರ್ವಜನಿಕ ಆಸ್ಪತ್ರೆ ಎರಡನೆ ಅಂತಸ್ತಿಗೆ ತೆರಳುವ ಮೆಟ್ಟಿಲುಗಳಿಗೆ ಅಳವಡಿಸಿದ ಸರಳುಗಳಿಗೆ ತಾನು ಧರಿಸಿದ ಲುಂಗಿಯಿಂದಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ….

Read More

ಮೂಲಭೂತ ಸೌಕರ್ಯಗಳಿಂದ ವಂಚಿತರಾದ ಕುಗ್ರಾಮದ ಗ್ರಾಮಸ್ಥರಿಂದ ಉಗ್ರ ಹೋರಾಟದ ಎಚ್ಚರಿಕೆ:

ಹೊಸನಗರ: ಮೂಲಭೂತ ಸೌಕರ್ಯಗಳಿಂದ ವಂಚಿತವಾದ ಕುಗ್ರಾಮದಲ್ಲಿ ಗ್ರಾಮಸ್ಥರು ಜನಪ್ರತಿನಿಧಿ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ದ ಗದ್ದೆಯಂತಾದ ರಸ್ತೆಯಲ್ಲಿ ನಾಟಿ ಮಾಡುವ ಮೂಲಕ ವಿಭಿನ್ನ ಪ್ರತಿಭಟನೆಯನ್ನು ನಡೆಸಿದ ಘಟನೆ ಹೊಸನಗರ ತಾಲೂಕಿನ ಮಾರುತಿಪುರ ಗ್ರಾಮಪಂಚಾಯತ್ ವ್ಯಾಪ್ತಿಯ ಒಂದಗದ್ದೆ, ನೀರೇರಿ  ಎಂಬ ಅವಳಿ ಗ್ರಾಮದಲ್ಲಿ ನಡೆದಿದೆ. ಒಂದಗದ್ದೆ ಹಾಗೂ ನೀರೇರಿ ಗ್ರಾಮಗಳು ಅವಳಿ ಗ್ರಾಮಗಳಾಗಿವೆ. ಈ ಗ್ರಾಮಗಳಲ್ಲಿ ಮೂಲಭೂತ ಸೌಕರ್ಯಗಳಾದ ರಸ್ತೆ, ಚರಂಡಿ, ಬೀದಿದೀಪ ಹಾಗೂ ಕುಡಿಯುವ ನೀರಿನ ಸಮಸ್ಯೆಯಿಂದಾಗಿ ಗ್ರಾಮಸ್ಥರು ಪ್ರತಿಭಟನೆಯ ಹಾದಿ ಹಿಡಿದಿದ್ದಾರೆ.  ಈ ಮೂಲಭೂತ ಸೌಕರ್ಯಗಳ…

Read More

ಬೇಳೂರು ಗೋಪಾಲಕೃಷ್ಣ ಒಬ್ಬ ಶೋಕಿಲಾಲ ರಾಜಕಾರಣಿ:: ವೀರೇಶ್ ಆಲುವಳ್ಳಿ

ಹೊಸನಗರ: ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಒಬ್ಬ ಶೋಕಿಲಾಲ ರಾಜಕಾರಣಿ ಅವರಿಗೆ ಕಿಂಚಿತ್ತು ಸಾಮಾಜಿಕ ಬದ್ದತೆ ಇಲ್ಲ ಎಂದು ತಾಪಂ ಮಾಜಿ ಅಧ್ಯಕ್ಷರಾದ ವೀರೇಶ್ ಆಲುವಳ್ಳಿ ರವರು ವಾಗ್ದಾಳಿ ನಡೆಸಿದರು. ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸುದ್ದಿ ಗೋಷ್ಟಿ ನಡೆಸಿ ಮಾತನಾಡಿ, ಮಾಜಿ ಶಾಸಕರು ಸುತ್ತಾ ಗ್ರಾಮದಲ್ಲಿ  ಮರಳು ಮಾಫ಼ಿಯ ನಡೆಯುತ್ತಿದೆ ಎಂದು ತಮ್ಮ ಹಾಗೂ ಸುರೇಶ್ ಸ್ವಾಮಿರಾವ್ ವಿರುದ್ದ ಗಂಭೀರ ಆರೋಪ ಹೊರಿಸಿದಲ್ಲದೇ ಇದರ ಹಿಂದೆ ಶಾಸಕರ ಕೈವಾಡ ಇದೆ ಎಂದು ಆರೋಪಿಸಿದ್ದಾರೆ ಇದು ಸತ್ಯಕ್ಕೆ ದೂರವಾಗಿದ್ದು…

Read More