Headlines

ಮರಕ್ಕೆ ಬೈಕ್ ಡಿಕ್ಕಿ: ಕೋಣಂದೂರಿನ ಆಸ್ಪತ್ರೆ ಸಿಬ್ಬಂದಿ ಸ್ಥಳದಲ್ಲೇ ಸಾವು

A 58-year-old hospital staff from Konandur died on the spot after his bike lost control and hit a tree near Thirale Bailu on Thirthahalli–Koppa main road.

ಮರಕ್ಕೆ ಬೈಕ್ ಡಿಕ್ಕಿ: ಕೋಣಂದೂರಿನ ವ್ಯಕ್ತಿ ಸ್ಥಳದಲ್ಲೇ ಸಾವು

ತೀರ್ಥಹಳ್ಳಿ: ತಾಲೂಕಿನ ಕೊಪ್ಪ ಮುಖ್ಯರಸ್ತೆಯ ತಿರಳೆಬೈಲು ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರನೊಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ವರದಿಯಾಗಿದೆ.

ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಅಪಘಾತದಲ್ಲಿ ಮೃತಪಟ್ಟವರನ್ನು ಕೋಣಂದೂರಿನ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಗಂಗಾಧರ್ (58) ಎಂದು ಗುರುತಿಸಲಾಗಿದೆ.

ಗಂಗಾಧರ್ ಅವರು ತೀರ್ಥಹಳ್ಳಿಯಿಂದ ಕೊಪ್ಪ ಕಡೆಗೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಘಟನೆ ಕುರಿತು ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.