ಹೊಸನಗರ : ಹೊಸನಗರ ತಾಲೂಕು ಮಾರುತಿಪುರ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು ಹಾಗೂ ಕಾಂಗ್ರೆಸ್ ಹಿರಿಯ ಮುಖಂಡರಾದ ಓಂಕೇಶ್ ಗೌಡ್ರು ಸಂಪಳ್ಳಿ ಇಂದು ಬೆಳಿಗ್ಗೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.
ದೀರ್ಘಕಾಲದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಓಂಕೇಶ್ ಇಂದು ಬೆಳಿಗ್ಗೆ ಹೃದಯಘಾತದಿಂದ ನಿಧನರಾಗಿದ್ದು. ಶ್ರೀಯುತರು 20 ವರ್ಷಕ್ಕೂ ಹೆಚ್ಚು ಕಾಲ ಸಕ್ರಿಯ ಕಾಂಗ್ರೆಸ್ ಕಾರ್ಯಕರ್ತರಾಗಿ,ಸತತ 2 ಬಾರಿ ಮಾರುತಿಪುರ ಪಂಚಾಯತ್ ಸಂಪಳ್ಳಿ ಕ್ಷೇತ್ರದಿಂದ ಸದಸ್ಯರಾಗಿ, ಪಂಚಾಯತ್ ಅಧ್ಯಕ್ಷರು ಆಯ್ಕೆಯಾಗಿದ್ದರು.
ಓಂಕೇಶ ಗೌಡ್ರು ಸಂಪಳ್ಳಿ ಅವರ ಅಕಾಲಿಕ ನಿಧನಕ್ಕೆ ಸಂಬಂಧಿಕರು,ಸ್ನೇಹಿತರೂ ಅಕಾಲಿಕ ಮರಣಕ್ಕೆ ತೀವ್ರ ದುಃಖತಪ್ತರಾಗಿದ್ದಾರೆ.
ಈ ಸಂದರ್ಭದಲ್ಲಿ ಮೃತರ ಸಂಬಂಧಿಕರಿಗೆ,ಕುಟುಂಬಸ್ತರಿಗೆ ದೇವರು ದುಃಖ ಭರಿಸುವ ಶಕ್ತಿ ನೀಡಿ, ಆತ್ಮಕ್ಕೆ ಶಾಂತಿ ನೀಡಲಿ ಎಂದು ಗ್ರಾಮಸ್ಥರು ಪ್ರಾರ್ಥಿಸಿದ್ದಾರೆ.
ಹಾಗೂ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರು, ಕಾಂಗ್ರೆಸ್ ಮುಖಂಡರು ಆದ ಕಲಗೋಡ ರತ್ನಾಕರ್, ಬಿ ಜಿ ಚಂದ್ರಮೌಳಿ, ಮಾರುತಿಪುರ ಪಂಚಾಯತ್ ಅಧ್ಯಕ್ಷರು,ರಿಪ್ಪನ್ ಪೇಟೆ ಹೋಬಳಿ ಘಟಕದ ಕಾಂಗ್ರೆಸ್ ಅಧ್ಯಕ್ಷರಾದ ಆಸೀಫ಼್ ಭಾಷಾಸಾಬ್, ಕೆಂಚನಾಲ ಗ್ರಾಪಂ ಅಧ್ಯಕ್ಷರಾದ ಉಬೇದುಲ್ಲಾ ಷರೀಫ್, ಎಚ್. ಬಿ ಚಿದಂಬರ ಹಾಗೂ ಪಂಚಾಯತ್ ಸರ್ವ ಸದಸ್ಯರು ಶ್ರೀಯುತರ ಅಕಾಲಿಕ ನಿಧನಕ್ಕೆ ತೀವ್ರ ಸಂತಾಪವನ್ನು ಸೂಚಿಸಿದ್ದಾರೆ.
ವರದಿ : ಅಜಿತ್ ಬಡೆನಕೊಪ್ಪ ಹೊಸನಗರ