Headlines

ಕಾರ್ಯಾಗಾರಗಳಲ್ಲಿ ಪಾಲ್ಗೊಳ್ಳುವುದರಿಂದ ಜನಪ್ರತಿನಿಧಿಗಳಿಗೆ ಅರಿವು ಮೂಡುತ್ತದೆ : ಶಾಸಕ ಹರತಾಳು ಹಾಲಪ್ಪ.

ಹೊಸನಗರ : ಜನಪ್ರತಿನಿಧಿಗಳಾಗಿ ಕಾರ್ಯಗಾರಗಳಲ್ಲಿ ಭಾಗವಹಿಸಿದ್ದಾಗ ಸರ್ಕಾರದ ಸವಲತ್ತುಗಳು ಹಾಗೂ ಜನಪರ  ಯೋಜನೆಗಳನ್ನು ಸಾಮಾನ್ಯ ಜನರಿಗೆ ತಲುಪಿಸುವ ವ್ಯವಸ್ಥೆ ಆಗುತ್ತದೆ. ಇದು ಬಿಜೆಪಿ ಪಕ್ಷದಿಂದ ಮಾತ್ರ ಸಾಧ್ಯ ಎಂದು ಹೊಸನಗರ ಸಾಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಹರತಾಳು ಹಾಲಪ್ಪ ಹೇಳಿದರು.

ಅವರು ಇಂದು ಹೊಸನಗರದ ಗಾಯತ್ರಿ ಮಂದಿರದಲ್ಲಿ ತಾಲೂಕ್ ಬಿಜೆಪಿ ಹಾಗೂ ಗ್ರಾಮೀಣ ಪಂಚಾಯತ್ ರಾಜ್ ಪ್ರಕೋಷ್ಠ ವತಿಯಿಂದ ಆಯೋಜಿಸಿದ್ದ ಚುನಾಯಿತ ಗ್ರಾ.ಪಂ ಸದಸ್ಯರ ತಾಲ್ಲೂಕು ಸಮಾವೇಶ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ಜಿಲ್ಲಾ ಬಿಜೆಪಿಯ ಪ್ರಮುಖರಾದ ಸಿದ್ದರಾಮಣ್ಣ.,ಗಿರೀಶ್ ಪಾಟೀಲ್, ಉಮೇಶ್ ಕಂಚುಗಾರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ  ಸುರೇಶ್ ಸ್ವಾಮಿರಾವ್, ಏ.ವಿ.ಮಲ್ಲಿಕಾರ್ಜುನ್, ಆರ್.ಟಿ.ಗೋಪಾಲ  ತ. ಮ. ನರಸಿಂಹ. ಯುವರಾಜ್ ಗೌಡ, ಬೆಳ್ಳೂರು ತಿಮ್ಮಪ್ಪ ನಾಗಾರ್ಜುನ ಸ್ವಾಮಿ, ಪರಮೇಶ್ವರಪ್ಪ, ಸುರೇಂದ್ರ ಪೂಜಾರಿ, ಎ.ಟಿ.ನಾಗರತ್ನಮ್ಮ, ಸುರೇಶ್ ಸಿಂಗ್ ಎಂ. ಬಿ. ಮಂಜುನಾಥ್. ಎನ್. ಸತೀಶ್. ದೇವೇಂದ್ರಪ್ಪ ಗೌಡ , ಮುಂತಾದ ಬಿಜೆಪಿ ತಾಲೂಕು ಮತ್ತು ಜಿಲ್ಲಾ ಪ್ರಮುಖರು ಹಾಜರಿದ್ದರು. ಪ್ರಾರಂಭದಲ್ಲಿ ರಾಘವೇಂದ್ರ ಎಸ್.ಎಂ.ಪ್ರಾರ್ಥಿಸಿ , ಎನ್. ಸತೀಶ್ ಸ್ವಾಗತಿಸಿ, ಸುರೇಶ್ ಸಿಂಗ್ ಕೊನೆಯಲ್ಲಿ ವಂದಿಸಿದರು.

Leave a Reply

Your email address will not be published. Required fields are marked *