w
Headlines
Home » ಮಾರುತಿಪುರ : ಭೀಕರ ರಸ್ತೆ ಅಪಘಾತ,ಬೈಕ್ ಸವಾರ ಸ್ಥಳದಲ್ಲೆ ಸಾವು!!

ಮಾರುತಿಪುರ : ಭೀಕರ ರಸ್ತೆ ಅಪಘಾತ,ಬೈಕ್ ಸವಾರ ಸ್ಥಳದಲ್ಲೆ ಸಾವು!!

ಹೊಸನಗರ : ಇಲ್ಲಿನ ಮಾರುತಿಪುರ ಸಮೀಪ ಬೈಕ್ ಹಾಗೂ ಲಾರಿ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೆ ಸಾವನ್ನಪ್ಪಿರುವ ಘಟನೆ ನಡೆದಿದೆ.

ಸೊರಬ ಮೂಲದ ಯುವಕ ಬೈಕ್ ನಲ್ಲಿ ಸೊರಬದಿಂದ ಹೊಸನಗರ ಮಾರ್ಗವಾಗಿ ತೆರಳುತ್ತಿರುವಾಗ ಮಾರುತಿಪುರ ಸಮೀಪ ಬೈಕ್ ಸವಾರನ ನಿಯಂತ್ರಣ ತಪ್ಪಿ ಲಾರಿ ಚಕ್ರಕ್ಕೆ ಸಿಲುಕಿದ ಪರಿಣಾಮ ಬೈಕ್‌ ಸವಾರ ಸ್ಥಳದಲ್ಲೆ ಮೃತಪಟ್ಟಿದ್ದಾನೆ.
ಲಾರಿ ಚಾಲಕ ಅಪಘಾತ ಸ್ಥಳದಲ್ಲಿ ವಾಹನ ನಿಲ್ಲಿಸದೆ ಪರಾರಿಯಾಗಿದ್ದು ನಂತರ ಊರಿನ ಗ್ರಾಮಸ್ಥರು ವಾಹನ ಬೆನ್ನಟ್ಟಿ ಬಟ್ಟೆಮಲ್ಲಪ್ಪ ಸಮೀಪ ತಡೆದು ನಿಲ್ಲಿಸಿದ್ದಾರೆ.

ಮೃತ ಯುವಕನ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಾಗಿದೆ

ಸ್ಥಳಕ್ಕೆ ಹೊಸನಗರ ಠಾಣಾ ಪೋಲಿಸರು ಧಾವಿಸಿದ್ದು,ತನಿಖೆ ಮುಂದುವರೆದಿದೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.