ಶಿವಮೊಗ್ಗ: ಸುಮಾರು 150ಕ್ಕೂ ಹೆಚ್ಚು ಬೀದಿ ನಾಯಿಗಳನ್ನು
ಜೀವಂತವಾಗಿ ಹೂತಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಗ್ರಾಮ ಪಂಚಾಯಿತಿಯ ಕಂಬದಾಳು-ಹೊಸೂರು ವ್ಯಾಪ್ತಿಯ ರಂಗನಾಥಪುರದಲ್ಲಿ ನಡೆದಿದೆ.
ತಮ್ಮಡಿಹಳ್ಳಿ ಎಂಪಿಎಂ ಅರಣ್ಯದ ಎಸ್‌ಎಲ್ ನಂಬರ್ 863, 864, 865, 858ರ ಪ್ರದೇಶದಲ್ಲಿ ನಾಯಿಗಳು ಪತ್ತೆಯಾಗಿದ್ದು, ಐದು ದಿನಗಳ ಹಿಂದೆ ನಾಯಿಗಳನ್ನು ಹೂತಿಡಲಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಬೀದಿ ನಾಯಿಗಳನ್ನು ಹಿಡಿದು ಜೀವಂತವಾಗಿ ಹೂತಿಡುವ ವೇಳೆ ನಾಯಿಗಳ ಚೀರಾಟ ಕೇಳಿದೆ. ಈ ಸಂದರ್ಭದಲ್ಲಿ ಶಿವಮೊಗ್ಗ ಎನಿಮಲ್ ರೆಸ್ಕ್ಯೂ ಕ್ಲಬ್ಗೆ ಗ್ರಾಮದ ಯುವಕರು ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಎನಿಮಲ್ ರೆಸ್ಕ್ಯೂ ಕ್ಲಬ್ ಪ್ರತಿನಿಧಿಗಳು ಆಗಮಿಸಿದ್ದು ಜೀವಂತವಾಗಿ ಹೂತಿಟ್ಟಿದ್ದ ನಾಯಿಗಳನ್ನು ಪತ್ತೆ ಮಾಡಿದ್ದಾರೆ.
ನಾಯಿಗಳ ಸಂತಾನ ಹರಣ ಶಸ್ತ್ರ ಚಿಕಿತ್ಸೆ ವೆಚ್ಚ ಉಳಿಸಲು ಈ ಕೃತ್ಯ ಮಾಡಿರುವ ಸಾಧ್ಯತೆ ಇದೆ. ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ಸದ್ಯ ಈ ಸಂಬಂಧ ದೂರು ದಾಖಲಾಗಿದೆ.