POSTMAN NEWS

ನೈಜ ಸುದ್ದಿ ನೇರ ಬಿತ್ತರ..

ಬಟ್ಟೆಮಲ್ಲಪ್ಪ ಸರ್ಕಲ್ ಗೆ ಬಂಗಾರಪ್ಪ ಸರ್ಕಲ್ ಎಂದು ನಾಮಕರಣ – ರಿಪ್ಪನ್‌ಪೇಟೆಯಲ್ಲಿ ಆಮ್ ಆದ್ಮಿ ಪಕ್ಷದಿಂದ ಆಟೊಗಳಿಗೆ ಉಚಿತ ಟಾಪ್ ವಿತರಣೆ|AAP

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಬಟ್ಟೆಮಲ್ಲಪ್ಪ ಗ್ರಾಮದ ಸರ್ಕಲ್ ಗೆ ನೂತನವಾಗಿ ಬಂಗಾರಪ್ಪ ಸರ್ಕಲ್ ಎಂದು ಅಧಿಕೃತವಾಗಿ ನಾಮಕರಣ ಮಾಡಲಾಯಿತು.

ಹೊಸನಗರ ತಾಲೂಕ್ ಆಮ್ ಆದ್ಮಿ ಪಕ್ಷ ಘಟಕದ ವತಿಯಿಂದ ನೂತನ ಬಂಗಾರಪ್ಪ ಸರ್ಕಲ್ ಉದ್ಘಾಟಿಸಲಾಯಿತು.


ಈ ಸಂಧರ್ಭದಲ್ಲಿ ಮಾತನಾಡಿದ ಆಮ್ ಆದ್ಮಿ ಪಕ್ಷದ ತಾಲೂಕ್ ಅಧ್ಯಕ್ಷ ಗಣೇಶ್ ಸೂಗೋಡು ಈ ದೇಶ ಕಂಡ ಅತ್ಯುತ್ತಮ ಮುಖ್ಯಮಂತ್ರಿ ಹಾಗೂ ಬಡವರ ಪಾಲಿನ ಆಶಾಕಿರಣವಾಗಿದ್ದ ದಿ|| ಬಂಗಾರಪ್ಪ ರವರ ಹೆಸರನ್ನು ಬಟ್ಟೆಮಲ್ಲಪ್ಪ ಸರ್ಕಲ್ ಗೆ ನಾಮಕರಣ ಮಾಡುವ ಮೂಲಕ ಅವರಿಗೆ ಸಮರ್ಪಕವಾಗಿ ಗೌರವ ಸೂಚಿಸಲಾಗಿದೆ ಎಂದರು.

ಈ ಸಂಧರ್ಭದಲ್ಲಿ ತಾಲೂಕ್ ಆಮ್ ಅದ್ಮಿ ಪಕ್ಷದ ಉಪಾಧ್ಯಕ್ಷ ಹಸನಬ್ಬ ,ಮುಖಂಡರಾದ ಸಂತೋಷ್ ಆಶ್ರೀತಾ ,ರವಿ ,ಈಶ್ವರಪ್ಪ ಗೌಡ ,ಇದ್ದರು.


ರಿಪ್ಪನ್‌ಪೇಟೆಯಲ್ಲಿ ಆಮ್ ಆದ್ಮಿ ಪಕ್ಷದ ವತಿಯಿಂದ ಉಚಿತ ಆಟೋ ಟಾಪ್ ವಿತರಣೆ

ಆಮ್ ಆದ್ಮಿ ಪಕ್ಷದ ಸಂಸ್ಥಾಪನ ದಿನಾ‍ಚರಣೆಯ ಅಂಗವಾಗಿ ರಿಪ್ಪನ್‌ಪೇಟೆಯಲ್ಲಿ ಆಟೋ ಟಾಪ್ ನ್ನು ಉಚಿತವಾಗಿ ವಿತರಿಸಲಾಯಿತು.

ಆಮ್ ಆದ್ಮಿ ಪಕ್ಷ ಸ್ಥಾಪನೆಯಾಗಿ 10 ವರ್ಷಗಳಾಗಿದ್ದು ಆ ಸಂಭ್ರಮದ ಹಿನ್ನಲೆಯಲ್ಲಿ ಹೊಸನಗರ- ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 100 ಆಟೋಗಳಿಗೆ ಉಚಿತವಾಗಿ ಆಮ್ ಆದ್ಮಿ ಪಕ್ಷದ ಚಿಹ್ನೆಯಿರುವ ಟಾಪ್ ವಿತರಿಸಲಾಗುತಿದ್ದು ಈಗಾಗಲೇ ಕ್ಷೇತ್ರದಾದ್ಯಂತ 20 ಆಟೋಗಳಿಗೆ ಉಚಿತವಾಗಿ ವಿತರಿಸಲಾಗಿದೆ ಎಂದು ತಾಲೂಕ್ ಆಮ್ ಆದ್ಮಿ ಪಕ್ಷದ ಅಧ್ಯಕ್ಷ ಗಣೇಶ್ ಸೂಗೋಡು ಮಾಹಿತಿ ನೀಡಿದರು.

ಆಮ್‌ಆದ್ಮಿ ಪಕ್ಷದ ಚಿಹ್ನೆಯುಳ್ಳ ಉಚಿತ ಆಟೋ ಟಾಪ್ ಬೇಕಾದಲ್ಲಿ ಈ ಕೆಳಕಂಡ ನಂಬರ್ ಗೆ ಸಂಪರ್ಕಿಸಲು ತಿಳಿಸಿದ್ದಾರೆ.

ಹಸನಬ್ಬ(ಉಪಾಧ್ಯಕ್ಷರು) – 90710 97866

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.