ರಿಪ್ಪನ್‌ಪೇಟೆ : ಆರಸಾಳು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬಸವಾಪುರ ಗ್ರಾಮದಲ್ಲಿ ದಿಡೀರ್ ಪ್ರತ್ಯಕ್ಷವಾದ ಕಾಡುಕೋಣಗಳಿಂದಾಗಿ ರೈತರ ಭತ್ತದ ಗದ್ದೆ ಮತ್ತು ಅಡಿಕೆ ಬಾಳೆ ಕಾಡುಪ್ರಾಣಿಗಳ ಪಾಲಾಗುವಂತಾಗಿದ್ದು ರೈತರು ಅಂತಕಕ್ಕೆ ಕಾರಣವಾಗಿದೆ.
ಮಳೆಗಾಲದಲ್ಲಿ ನಾಟಿ ಮಾಡಲಾದ ಭತ್ತದ ಫಸಲು ಕಟಾವಿಗೆ ಬಂದಿದ್ದು ರಾತ್ರಿ ಹೊತ್ತಿನಲ್ಲಿ ಕಾಡುಕೋಣ ಜಮೀನಿಗೆ ನುಗ್ಗಿ ಕಟಾವು ಮಾಡಲಾದ ಭತ್ತ ಭೂಮಿ ತಾಯಿಯ ಪಾಲಾಗುವಂತಾಗಿದೆ.ಅಲ್ಲದೆ ಆಡಿಕೆ ಗಿಡಗಳನ್ನು ಮುರಿದು ಹಾಕಿ ಬಾಳೆ ಸಹ ಕೈಗೆ ಸೀಗದಂತಾಗಿ ರೈತರು ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವಂತಾಗಿದೆ.
ಇAದು ಕಡೆ ಭತ್ತಕ್ಕೆ ಕಂದುಜಿಗಿ ಹುಳದ ಬಾಧೆ ಕಾಣಿಸಿಕೊಂಡಿದ್ದರೆ ಇನ್ನೊಂದು ಕಡೆಯಲ್ಲಿ ಅಡಿಕೆಗೆ ಕಪ್ಪು ಚುಕ್ಕಿ ರೋಗ ಹೀಗೆ ಒಂದಲ್ಲಾ ಒಂದು ಸಮಸ್ಯೆಯಿಂದಾಗಿ ರೈತರು ದಿಕ್ಕು ತೋಚದವರಂತಾಗಿದ್ದಾರೆ ಬಸವಾಪುರ ಗ್ರಾಮದ ರೈತರು ದೇವೇಂದ್ರಪ್ಪಗೌಡ ನಾಗಭೂಷಣ ತಮ್ಮ ನೋವನ್ನು ಪತ್ರಿಕೆಯವರಲ್ಲಿ ತೂಡಿಕೊಂಡರು.
ಇನ್ನಾದರೂ ಅರಣ್ಯ ಇಲಾಖೆ ಇತ್ತ ಗಮನಹರಿಸಿ ತಕ್ಷಣ ಕಾಡುಕೋಣಗಳನ್ನು ಸ್ಥಳಾಂತರಗೊಳಿಸುವಂತೆ ರೈತರು ಆಗ್ರಹಿಸಿದ್ದಾರೆ.