ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹೊಳೆಬಾಗಿಲು ಸಮೀಪ ಶರಾವತಿ ಹಿನ್ನೀರಿನಲ್ಲಿ ಹಿಂದಕ್ಕೆ ತೆಗೆದುಕೊಳ್ಳುವ ವೇಳೆ ನಿಯಂತ್ರಣ ತಪ್ಪಿದ ಬಸ್ ನೀರಿಗೆ ಜಾರಿದ್ದು, ಸ್ವಲ್ಪದಲ್ಲಿ ಭಾರೀ ಅನಾಹುತವೊಂದು ತಪ್ಪಿದೆ.
ಹೊಳಬಾಗಿಲಿನಲ್ಲಿ ಇಂದು ಘಟನೆ ನಡೆದಿದ್ದು, ಗಜಾನನ ಬಸ್ ರಿವರ್ಸ್ ಸಾಗರದಿಂದ ಕಟ್ಟಿನಕಾರುಗೆ ತೆರಳುತ್ತಿತ್ತು. ಲಾಂಚ್ ನಿಲ್ಲಿಸುವ ಸ್ಥಳದಲ್ಲಿ ರಿವರ್ಸ್ ತೆಗೆದುಕೊಳ್ಳುವ ವೇಳೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬಸ್ ನೀರಿಗೆ ಇಳಿದಿದೆ. ಇದರಿಂದ ಬಸ್’ನಲ್ಲಿದ್ದ ಜನರು ಕೂಗಿಕೊಂಡಿದ್ದರಿಂದ ಎಚ್ಚೆತ್ತ ಚಾಲಕ ಮೇಲಕ್ಕೆ ಚಲಿಸಲು ಯತ್ನಿಸಿದ್ದಾನೆ.
ತತಕ್ಷಣವೇ ಎಚ್ಚೆತ್ತ ಸ್ಥಳೀಯರೂ ಸೇತುವೆ ಕಾಮಗಾರಿಗಾಗಿ ನಿಲ್ಲಿಸಲಾಗಿದ್ದ ಜೆಸಿಬಿಯನ್ನು ಬಳಸಿ, ಮುಳುಗುತ್ತಿದ್ದ ಬಸ್ಸನ್ನು ಮೇಲಕ್ಕೆ ಎತ್ತಿದ್ದಾರೆ. ಹೀಗಾಗಿ, ಸಂಭವಿಸಬಹುದಾಗಿದ್ದ ಭಾರೀ ಅನಾಹುತವೊಂದು ಸ್ವಲ್ಪದರಲ್ಲೇ ತಪ್ಪಿದೆ.