ಜೀವನದಲ್ಲಿ ಮದುವೆ ಎನ್ನುವುದು ಒಂದು ಅತ್ಯಮೂಲ್ಯ ಘಟ್ಟ,ಸಾಮಾನ್ಯವಾಗಿ ವಧು ಬೇಕಾದರೆ ಮದುವೆ ಬ್ರೋಕರ್ ಬಳಿಯೋ, ಶಾದಿ ಡಾಟ್ ಕಾಂ ಅಥವಾ ಮಾಧ್ಯಮಗಳಲ್ಲಿ ಜಾಹೀರಾತು ಕೊಡಬಹುದು,ಇನ್ನೂ ಮುಂದುವರೆದು ವಧೂವರರ ಸಮಾವೇಶಗಳಿಗೆ ಹೋಗಬಹುದು. ಆದರೆ ಇಲ್ಲೊಬ್ಬ ಭೂಪ ಶಿವಮೊಗ್ಗದ ಜಿಲ್ಲಾ ರಕ್ಷಣಾಧಿಕಾರಿ(SP)ಗೆ ಪತ್ರವನ್ನು ಬರೆದು ವಧು ಹುಡುಕಿ ಕೊಡಿ ಎಂದು ಮನವಿ ಮಾಡಿದ್ದಾರೆ. ಅದೂ ಗೊಲ್ಲ ಜಾತಿಯ ಹುಡುಗಿಯೇ ಬೇಕೆಂದು ಕೂಡ ಕಂಡಿಷನ್ ಕೂಡ ಹಾಕಿದ್ದಾನೆ.
ನ.10 ರಂದು ಭದ್ರಾವತಿ ನಿವಾಸಿ ಪ್ರವೀಣ್ ಎಂಬಾತ ಎಸ್ಪಿ ಕಚೇರಿಯ ಟಪಾಲ್ ಸೆಕ್ಷನ್ ಗೆ ಹೋಗಿ ಹಿಂಬರಹ ಪಡೆದುಕೊಂಡು ಹೋಗಿರುವುದು ವಾಟ್ಸಪ್ ಗ್ರೂಪ್ ನಲ್ಲಿ ವೈರಲ್ ಆಗಿದೆ. ಈ ಬಗ್ಗೆ ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದೆ.
ಈ ಪತ್ರ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಬಗ್ಗೆ ಪರಿಶೀಲನೆ ನೀಡಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾರಕ್ಷಣಾಧಿಕಾರಿ ಮಿಥುನ್ ಕುಮಾರ್ ಮಾದ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಪತ್ರದ ಸಾರಾಂಶ
ನನಗೆ ಹೆಣ್ಣು ಸಿಗುತ್ತಿಲ್ಲ. ನಿಮ್ಮ ಅಧೀನದಲ್ಲಿ ಯಾವುದಾದರೂ ಹೆಣ್ಣು ಕಂಡುಬಂದಲ್ಲಿ ನಾನು ಮದುವೆ ಮಾಡಿಕೊಳ್ಳಲು ಸಹಾಯವಾಗುತ್ತಿದೆ. ನನಗೆ ಗ್ರಾಮಪಂಚಾಯಿ ಸದಸ್ಯ ವಿ ಕದಿರೇಶ್ ಮತ್ತು ಚಂದ್ರ ನಾಯ್ಕ್ ಪರಿಚಯವಿರುವುದಾಗಿ ತಿಳಿಸಿ ಪತ್ರದಲ್ಲಿ ಉಲ್ಲೇಖವಿದೆ.
ನನ್ನ ತಂದೆ ತೋಟಗಾರಿಕೆ ಇಲಾಖೆಯಲ್ಲಿ ಡೆಪ್ಯೂಟಿ ಡೈರೆಕ್ಟಾರಾಗಿ ಹುದ್ದೆ ನಿರ್ವಹಿಸುತ್ತಿದ್ದುನಿವೃತ್ತರಾಗಿ ಮರಣಹೊಂದಿದ್ದಾರೆ. ತಾನು ಗೊಲ್ಲ ಜಾತಿಯವನಾಗಿದ್ದು ಮೂಲತಃ ಆಂಧ್ರದವರಾಗಿದ್ದೇವೆ. ನಾನು ಸಾಫ್ಟ್ ವೇರ್ ಕಂಪನಿಯಲ್ಲಿ ಅಧ್ಯಾಪಕನಾಗಿ ಎಂಸಿಐ ಕಂಪೆನಿಯಲ್ಲಿ ಕೆಲಸ ಮಾಡಿಕೊಂಡಿರುತ್ತೇನೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಪತ್ತದಲ್ಲಿರುವ ಮೊಬೈಲ್ ನಂಬರ್ ಗೆ ಕರೆ ಮಾಡಿದರೆ ಸ್ವಿಚ್ ಆಫ್ ಬರುತ್ತಿದ್ದು, ಜಿಲ್ಲಾರಕ್ಷಣಾಧಿಕಾರಿಗಳು ಈ ಬಗ್ಗೆ ಪರಿಶೀಲನೆ ನಡೆಸಿ ಆತನ ವಿರುದ್ಧ ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದಾರೆ.