ತೀರ್ಥಹಳ್ಳಿ : ಗಡಿಪಾರು ಆದೇಶದ ಕಾರಣ ಕೇಳಿ ನೋಟೀಸ್ ನೀಡುತ್ತಿದ್ದಂತೆ ರೌಡಿ ಶೀಟರ್ ಕೋಬ್ರಾ ಸುಹೇಲ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.
ಒಂದು ವಾರದ ಹಿಂದೆ ತೀರ್ಥಹಳ್ಳಿ ಪೊಲೀಸರು ರೌಡಿಶೀಟರ್ ಕೋಬ್ರಾ ಸುಹೇಲ್ ನಿಗೆ ಗೆರಡು ವರ್ಷ ಗಳ ಕಾಲ ಗಡಿಫಾರು ಯಾಕೆ ಮಾಡಬಾರದು ಎಂದು ಕಾರಣಕೇಳಿ ನೋಟೀಸ್ ಜಾರಿ ಮಾಡಿದ್ದರು. ಪೊಲೀಸ್ ನೋಟೀಸ್ ತಲುಪಿ ಎರಡು ದಿನಕ್ಕೆ ಆತ ಆತ್ಮಹತ್ಯೆಗೆ ಯತ್ನಿಸಿ ಈಗ ಮಂಗಳೂರಿನ ಎನಪೋಯ ಆಸ್ಪತ್ರೆಗೆ ದಾಖಾಗಿದ್ದಾನೆ.
ಇಂದಿರಾ ನಗರ ನಿವಾಸಿ ಹಾಲಿ ಸಿಬಿನಕೆರೆ ಅಬ್ದುಲ್ ಖಾದರ್ ಸಾಬ್ ಪಾರ್ಕ್ ಹತ್ತಿರ ವಾಸವಾಗಿರುವ ಕೋಬ್ರಾ ಅಲಿಯಾಸ್ ಸುಹೇಲ್ ನ ಮೇಲೆ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಮತ್ತು ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿವಮೊಗ್ಗ ಉಪ ವಿಭಾಗ ಅಧಿಕಾರಿಗಳು ಪೊಲೀಸ್ ಇಲಾಖೆಯ ಶಿಫಾರಸ್ಸು ಮೇಲೆ ಎರಡು ವರ್ಷಗಳ ಗಡಿಪಾರನ್ನು ಆದೇಶ ಮಾಡಲು ಕಾರಣ ಕೇಳಿ ನೋಟೀಸ್ ಜಾರಿ ಮಾಡಲಾಗಿದೆ. ಈ ನೋಟೀಸ್ ಗೆ ಉತ್ತರಿಸದೆ ಸುಹೇಲ್ ಆತ್ಮಹತ್ಯೆ ಮಾಡಿಕೊಳ್ಳುವ ಯತ್ನ ನಡೆಸಿದ್ದಾನೆ