ರಿಪ್ಪನ್‌ಪೇಟೆ: ಹೃದಯಾಘಾತದಿಂದ ವ್ಯಕ್ತಿ ನಿಧನ
Ripponpet tire merchant Naseeruddin (Maulana), 46, passed away due to a heart attack after being admitted to a Shivamogga hospital. Get the complete news details here.
ರಿಪ್ಪನ್‌ಪೇಟೆ: ಪಟ್ಟಣದ ಮದೀನಾ ಕಾಲೋನಿಯ ನಿವಾಸಿ ಹಾಗೂ ಚಿರಪರಿಚಿತ ಟಯರ್ ವ್ಯಾಪಾರಿ ನಾಸೀರುದ್ದೀನ್ (ಮೌಲಾನಾ) (46) ಅವರು ಹೃದಯಾಘಾತದಿಂದ ಬುಧವಾರ ಸಂಜೆ ನಿಧನರಾಗಿದ್ದಾರೆ.
ಎರಡು ದಿನಗಳ ಹಿಂದೆ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಸಂಜೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಪಟ್ಟಣದ ಹೊಸನಗರ ರಸ್ತೆಯಲ್ಲಿ ಟಯರ್ ಅಂಗಡಿ ನಡೆಸುತ್ತಿದ್ದ ನಾಸೀರುದ್ದೀನ್ ಅವರು, ತಮ್ಮ ಸರಳತೆ ಹಾಗೂ ಸ್ನೇಹಮಯಿ ಸ್ವಭಾವದಿಂದ ಪಟ್ಟಣದಾದ್ಯಂತ ಚಿರಪರಿಚಿತರಾಗಿದ್ದರು. ಮೃತರು ಪತ್ನಿ, ಇಬ್ಬರು ಪುತ್ರಿಯರು, ಓರ್ವ ಪುತ್ರ ಸೇರಿದಂತೆ ಅಪಾರ ಬಂಧು-ಬಳಗ ಹಾಗೂ ಸ್ನೇಹಿತರನ್ನು ಅಗಲಿದ್ದಾರೆ.
ಮೃತರ ಅಂತ್ಯಸಂಸ್ಕಾರವು ನಾಳೆ (ಗುರುವಾರ) ಬೆಳಿಗ್ಗೆ ಪಟ್ಟಣದ ಸಾಗರ ರಸ್ತೆಯಲ್ಲಿರುವ ಖಬರ್‌ಸ್ಥಾನ್‌ನಲ್ಲಿ ನೆರವೇರಲಿದೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.