w
Headlines
Home » 23 ವರ್ಷದ ಯುವತಿ ನಾಪತ್ತೆ – ಮಾಹಿತಿ ನೀಡಲು ಪೊಲೀಸ್ ಮನವಿ

23 ವರ್ಷದ ಯುವತಿ ನಾಪತ್ತೆ – ಮಾಹಿತಿ ನೀಡಲು ಪೊಲೀಸ್ ಮನವಿ

Screenshot 2026 11 20 18 22 17 380 com.openai.chatgpt edit

23 ವರ್ಷದ ಯುವತಿ ನಾಪತ್ತೆ – ಮಾಹಿತಿ ನೀಡಲು ಪೊಲೀಸ್ ಮನವಿ | 23-year-old Dikshitha goes missing from Hosa Mane 3rd Cross in Shivamogga on November 18. Doddapete Police seek public assistance to trace her.

ಶಿವಮೊಗ್ಗ: ನಗರದ ಹೊಸಮನೆ 3ನೇ ಕ್ರಾಸ್‌ನಲ್ಲಿರುವ ಅಜ್ಜಿಯ ಮನೆಯಲ್ಲಿ ವಾಸವಿದ್ದ 23 ವರ್ಷದ ದೀಕ್ಷಿತಾ ಎಂಬ ಯುವತಿ ನಾಪತ್ತೆಯಾಗಿದ್ದಾರೆ.

ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ದೀಕ್ಷಿತಾ ಅವರು ನವೆಂಬರ್ 18ರಂದು ಮನೆಯಿಂದ ತೆರಳಿದ್ದು, ಈವರೆಗೂ ವಾಪಸ್ಸಾಗಿಲ್ಲ. ಯುವತಿಗಾಗಿ ಸಂಬಂಧಿಕರು ಹಾಗೂ ಪರಿಚಯಸ್ಥರ ಬಳಿ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಲಭ್ಯವಾಗಿಲ್ಲ.

ನಾಪತ್ತೆಯಾಗಿರುವ ಯುವತಿಯು ಸುಮಾರು 4.10 ಅಡಿ ಎತ್ತರ, ಗೋಧಿ ಮೈಬಣ್ಣ, ತೆಳುವಾದ ಮೈಕಟ್ಟು ಹಾಗೂ ಕೋಲುಮುಖ ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾರೆ. ಮನೆಯಿಂದ ತೆರಳುವ ಸಂದರ್ಭದಲ್ಲಿ ಕಪ್ಪು ಬಣ್ಣದ ಚೂಡಿದಾರ ಹಾಗೂ ಬಿಳಿ ಬಣ್ಣದ ಜಾಕೆಟ್ ಧರಿಸಿದ್ದರು ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.

ಯುವತಿಯ ಬಗ್ಗೆ ಯಾರಿಗಾದರೂ ಮಾಹಿತಿ ಅಥವಾ ಸುಳಿವು ದೊರೆತಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.

ಸಂಪರ್ಕ ಸಂಖ್ಯೆಗಳು:
08182-261414
9480803345
6360185433

ಯುವತಿಯ ಪತ್ತೆಗೆ ಸಾರ್ವಜನಿಕರು ಸಹಕರಿಸುವಂತೆ ಪೊಲೀಸ್ ಇಲಾಖೆ ಕೋರಿದೆ.

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.