POSTMAN NEWS

ನೈಜ ಸುದ್ದಿ ನೇರ ಬಿತ್ತರ..

ಜಿಲ್ಲಾ ರೈತ ಸಂಘದ ಉಪಾಧ್ಯಕ್ಷ ರಿಪ್ಪನ್ ಪೇಟೆಯ ಆರ್.ಎನ್.ಮಂಜಪ್ಪ ಹೃದಯಾಘಾತದಿಂದ ನಿಧನ|Ripponpet

ಜಿಲ್ಲಾ ರೈತ ಸಂಘದ ಉಪಾಧ್ಯಕ್ಷ  ರಿಪ್ಪನ್ ಪೇಟೆಯ ಆರ್.ಎನ್.ಮಂಜಪ್ಪ ಹೃದಯಾಘಾತದಿಂದ ನಿಧನ 

ರಿಪ್ಪನ್‌ಪೇಟೆ;- ಪಟ್ಟಣದ ಸಾಗರ ರಸ್ತೆಯ ನಿವಾಸಿಯಾಗಿರುವ  ಶಿವಮೊಗ್ಗ ಜಿಲ್ಲಾ ರೈತ ಮುಖಂಡ ಹಾಗೂ ಜಿಲ್ಲಾ ರೈತ ಸಂಘದ ಉಪಾಧ್ಯಕ್ಷ ಆರ್.ಎನ್.ಮಂಜಪ್ಪ (೮೯) ತಮ್ಮ ಸ್ವಗೃಹದಲ್ಲಿ ಇಂದು ಬೆಳಗ್ಗೆ ಹೃದಯಾಘಾತದಿಂದ ನಿಧನಹೊಂದಿದ್ದಾರೆ.

ಮೃತ ಮಂಜಪ್ಪನವರು  ಜಿಲ್ಲಾ ರೈತ ಸಂಘಟನೆಯಲ್ಲಿ  ಮತ್ತು ರೈತ ಹೋರಾಟ  ಹಾಗೂ ಚಳುವಳಿಯಲ್ಲಿ   ಪ್ರಮುಖ ರೂವಾರಿಯಾಗಿ ಇದ್ದರು. ರೈತರ ಪರವಾಗಿ ನೂರಾರು ಭಾರಿ ಹೋರಾಟ ನಡೆಸಿದ ಇವರು ರೈತರ ಹಿತಕ್ಕಾಗಿ ಅನೇಕ ಬಾರಿ ಜೈಲಿಗೂ ಸಹ ಹೋಗಿದ್ದರು. ಮೂಲತಃ ಕೃಷಿಕರಾಗಿದ್ದ ಇವರು ಟೈಲರ್ ವೃತ್ತಿಯೊಂದಿಗೆ  ರಿಪ್ಪನ್ ಪೇಟೆ ಪಟ್ಟಣದ ಕರ್ನಾಟಕ ಪ್ರಾಂತೀಯ ಹಿಂದು ರಾಷ್ಟçಸೇನಾ ಸೇವಾ ಸಮಿತಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಜಿಲ್ಲಾ ರೈತಸಂಘದ ಮುಖಂಡರಾಗಿದ್ದ ಇವರು  ಇಂದು ಬೆಳಗ್ಗೆ ಹೃದಯಾಘಾತದಿಂದ ನಿಧನಹೊಂದಿದ್ದಾರೆ.ಮೃತರಿಗೆ ನಾಲ್ವರು ಪುತ್ರರಿದ್ದಾರೆ.

ಸಂತಾಪ;-

 ಶಿವಮೊಗ್ಗ ಜಿಲ್ಲಾ ರೈತ ಸಂಘದ ಉಪಾಧ್ಯಕ್ಷರಾದ ಆರ್ ಎನ್ ಮಂಜಪ್ಪ ರವರ ನಿಧನಕ್ಕೆ ಸಾಗರ ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕ ಗೋಪಾಲಕೃಷ್ಣ, ಮಾಜಿ ಸಚಿವ ಹರತಾಳು ಹಾಲಪ್ಪ,ರೈತಸಂಘದ ಅಧ್ಯಕ್ಷ ಹೆಚ್.ಆರ್.ಬಸವರಾಜಪ್ಪ,. ಹಿಂದೂ  ಮಹಾಸಭಾ ಸೇವಾ ಸಮಿತಿಯ ಗೌರವಾಧ್ಯಕ್ಷ ವೈ.ಜೆ.ಕೃಷ್ಣ. ಪಟ್ಟಣದ ಸಿದ್ಧಿ ವಿನಾಯಕ ದೇವಸ್ಥಾನ ಸಮಿತಿಯ  ಅಧ್ಯಕ್ಷ ಈಶ್ವರ ಶೆಟ್ಟಿ, ಹೊಸನಗರ ತಾಲೂಕು ಒಕ್ಕಲಿಗರ ಸಂಘದ  ಅಧ್ಯಕ್ಷ ಎಂ.ಬಿ ಲಕ್ಷ್ಮಣಗೌಡ, ಜೆಡಿಎಸ್ ಮುಖಂಡ  ಆರ್. ಎ. ಚಾಬುಸಾಬ್. ರಿಪ್ಪನ್ ಪೇಟೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಎಲ್. ವೆಂಕಟೇಶ್, ಪಿ.ರಮೇಶ್,  ರಿಪ್ಪನ್ ಪೇಟೆ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಂ.ಎಂ. ಪರಮೇಶ್. ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಎಂ ಬಿ ಮಂಜುನಾಥ್ ಗೌಡ,ಗ್ರಾಪಂ ಸದಸ್ಯರಾದ ಆಸೀಫ಼್ ಭಾಷಾ,ಸುಧೀಂದ್ರ ಪೂಜಾರಿ ತೀವ್ರ ಸಂತಾಪ ವ್ಯಕ್ತ ಪಡಿಸಿದ್ದಾರೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.