ಚೌಡೇಶ್ವರಿ ರಸ್ತೆ ಕಾಮಗಾರಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಚಾಲನೆ
ರಿಪ್ಪನ್‌ಪೇಟೆ;-ಇಲ್ಲಿನ ಚೌಡೇಶ್ವರಿ ದೇವಸ್ಥಾನ ಸಂಪರ್ಕ ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕರ ವಿಶೇಷ ಅನುದಾನದಡಿಯಲ್ಲಿ 32 ಲಕ್ಷ ರೂ ಬಿಡುಗಡೆ ಮಾಡುವುದರೊಂದಿಗೆ ಸಿಸಿ ರಸ್ತೆ ಕಾಮಗಾರಿಗೆ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಗುದ್ದಲಿ ಪೂಜೆ ನೇರವೇರಿಸುವ ಮೂಲಕ ಚಾಲನೆ ನೀಡಿದರು.
ನಂತರ ಚೌಡೇಶ್ವರಿ ದೇವಸ್ಥಾನದಲ್ಲಿ ಸುಬ್ರಹ್ಮಣ್ಯ ಷಷ್ಠಿಯ ವಿಶೇಷ ಪೂಜಾ ಕಾರ್ಯದಲ್ಲಿ ಭಾಗವಹಿಸಿ ಮಾತನಾಡಿ ಗುತ್ತಿಗೆದಾರರು ಕಳಪೆ ಕಾಮಗಾರಿ ಮಾಡದೆ ಉತ್ತಮ ಗುಣಮಟ್ಟದ ಕಾಮಗಾರಿ ಮಾಡಿ ಕ್ಷೇತ್ರದ ಹೊಸನಗರ ತಾಲ್ಲೂಕಿನ ಎರಡು ಹೋಬಳಿ ವ್ಯಾಪ್ತಿಯಲ್ಲಿ ನನಗೆ ಹೆಚ್ಚು ಮತದಾನ ಮಾಡುವುದರೊಂದಿಗೆ ಆಶೀರ್ವಾದ ಮಾಡಿದ್ದಾರೆ. ಅವರ ಬಹುವರ್ಷದ ಬೇಡಿಕೆಯನ್ನು ಈಡೇರಿಸುವ ಸಂಕಲ್ಪ ನನ್ನದಾಗಿದೆ ಎಂದ ಅವರು ಆಭಿವೃದ್ದಿ ಕಾರ್ಯದಲ್ಲಿ ಎಲ್ಲರೂ ಕೈಜೊಡಿಸಿ ಕೆರೆಹಳ್ಳಿ ಹೋಬಳಿಯ ವ್ಯಾಪ್ತಿಯ ರಿಪ್ಪನ್‌ಪೇಟೆ ಗ್ರಾಮ ಪಂಚಾಯಿತ್ ವಿವಿಧ ಬಡಾವಣೆಗಳಲ್ಲಿರುವ ಎಲ್ಲಾ ಸಂಪರ್ಕ ರಸ್ತೆಗಳು ಸಂಪೂರ್ಣವಾಗಿ ಆಭಿವೃದ್ದಿ ಪಡಿಸಿದಂತಾಗಿದೆ ಎಂದು ಹೇಳಿದರು.
ಈ ಸಂಧರ್ಭದಲ್ಲಿ ಜಿಲ್ಲಾ ಪಂಚಾಯಿತ್ ಮಾಜಿ ಅಧ್ಯಕ್ಷ ಬಂಡಿ ರಾಮಚಂದ್ರ,ಗ್ರಾಮ ಪಂಚಾಯಿತ್ ಆಧ್ಯಕ್ಷೆ ಧನಲಕ್ಷಿ, ಹೊಸನಗರ ತಾಲ್ಲೂಕ್ ಬ್ಲಾಕ್ ಕಾಂಗ್ರೆಸ್ ಆಧ್ಯಕ್ಷ ಚಂದ್ರುಮೌಳಿಗೌಡರು, ಹೋಬಳಿ ಘಟಕದ ಅಧ್ಯಕ್ಷ ಗಣಪತಿ ಗವಟೂರು, ರವೀಂದ್ರಕೆರೆಹಳ್ಳಿ, ಗ್ರಾಮ ಪಂಚಾಯಿತ್ ಸದಸ್ಯರಾದ ಎನ್.ಚಂದ್ರೇಶ್, ಡಿ.ಈ ಮಧುಸೂದನ್,ದಾನಮ್ಮ, ನಿರೂಫ್‌ಕುಮಾರ್,ಆಶೀಫ್ ಭಾಷಾ, ಅನುಪಮ ರಾಕೇಶ್,ಮಹಾಲಕ್ಷಿö್ಮ, ಉಮಾಕರ್ ಅರಸಾಳು,ಸಣ್ಣಕ್ಕಿ ಮಂಜು,ಚೌಡೇಶ್ವರಿ ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಸುರೇಶ್ ಆರ್.ಇ.ಇನ್ನಿತರರು ಪಾಲ್ಗೊಂಡಿದ್ದರು.