Headlines

ರಿಪ್ಪನ್‌ಪೇಟೆ ಕೃಷಿ ಪತ್ತಿನ ಸಹಕಾರ ಸಂಘ ಆಡಳಿತ ಮಂಡಳಿ ಚುನಾವಣೆ – ಎಂ ಎಂ ಪರಮೇಶ್ ತಂಡಕ್ಕೆ ಭರ್ಜರಿ ಜಯ|Rpet news

ರಿಪ್ಪನ್‌ಪೇಟೆ  ಕೃಷಿ ಪತ್ತಿನ ಸಹಕಾರ ಸಂಘ ಆಡಳಿತ ಮಂಡಳಿ ಚುನಾವಣೆ – ಎಂ ಎಂ ಪರಮೇಶ್ ತಂಡಕ್ಕೆ ಭರ್ಜರಿ ಜಯ.
 ರಿಪ್ಪನ್ ಪೇಟೆ: ಪಟ್ಟಣದ ಕೃಷಿ ಪತ್ತಿನ ಸಹಕಾರ ಸಂಘ ಆಡಳಿತ   ಮಂಡಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಹಾಗೂ ಶಿವಮೊಗ್ಗ ಜಿಲ್ಲಾ ಸಹಕಾರ ಬ್ಯಾಂಕಿನ ನಿರ್ದೇಶಕ ಎಂಎಂ ಪರಮೇಶ್ ತಂಡಕ್ಕೆ ಭರ್ಜರಿ ಜಯ ಲಭಿಸಿದೆ.

ಪಟ್ಟಣದ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 12 ಜನ ಸದಸ್ಯರ ಆಡಳಿತ ಮಂಡಳಿ ಇದ್ದು, ಇದರಲ್ಲಿ ಏಳು ಜನ ಸದಸ್ಯರುಗಳು ಅವಿರೋಧವಾಗಿ ಆಯ್ಕೆಯಾಗಿದ್ದರು. ಇನ್ನುಳಿದ ಐದು ಸದಸ್ಯರುಗಳ ಆಯ್ಕೆಗಾಗಿ ಭಾನುವಾರ  ಚುನಾವಣೆ ನಡೆಸಲಾಗಿತ್ತು. 




ಈ ಚುನಾವಣೆಯಲ್ಲಿ ಎಂ ಎಂ ಪರಮೇಶ್ ತಂಡದ ಐದು ಜನ ಹಾಗೂ ಇನ್ನಿತರ ಇಬ್ಬರು ಒಟ್ಟು ಏಳು ಜನ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಈ ಚುನಾವಣೆಯಲ್ಲಿ ಪರಮೇಶ್  ತಂಡದಿಂದ ಸ್ಪರ್ಧಿಸಿದ್ದ ಎಲ್ಲಾ ಐದು ಅಭ್ಯರ್ಥಿಗಳು ಭರ್ಜರಿ ಜಯಸಾಧಿಸಿದ್ದಾರೆ. ಕಳೆದ 25 ವರ್ಷಗಳಿಂದ ರಿಪ್ಪನ್ ಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತವು ಎಂಎಂ ಪರಮೇಶ್ವರ್ ನೇತೃತ್ವದಲ್ಲಿ ನಡೆಯುತ್ತಿದೆ.

About The Author

Leave a Reply

Your email address will not be published. Required fields are marked *