ವಿದ್ಯಾರ್ಥಿಗಳ ನೋವಿನ ಕೂಗಿಗೆ ಸ್ಪಂದಿಸದೇ ಮಾನವೀಯತೆ ಮರೆತ ಸಾರ್ವಜನಿಕರು – ಪೋಟೋ, ವೀಡಿಯೋ ಮಾಡುತ್ತಾ ನಿಂತ ಸತ್ಪ್ರಜೆಗಳು | ಸಕಾಲಕ್ಕೆ ಬಾರದ ಆಂಬುಲೆನ್ಸ್ – ಯುವಕನೊಬ್ಬನ ದಾರುಣ ಅಂತ್ಯ
ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡು ಮೂವರು ವಿದ್ಯಾರ್ಥಿಗಳು ಸುಮಾರು 50 ನಿಮಿಷ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದರೂ ಸಾರ್ವಜನಿಕರು ಹತ್ತಿರಕ್ಕೂ ಬಾರದೆ , ಆಂಬುಲೆನ್ಸ್ ಗೂ ಕರೆ ಮಾಡದೇ ಮಾನವೀಯತೆ ಮರೆತ ವಿಚ್ಚಿದ್ರಾವಕಾರಿ ಘಟನೆ ಮಲೆನಾಡ ಹೆಬ್ಬಾಗಿಲು ಹೊಸನಗರ ತಾಲೂಕಿನ ಸೂಡೂರು ರೈಲ್ವೆ ಗೇಟ್ ಬಳಿ ನಡೆದಿರುವು ಬೇಸರದ ಸಂಗತಿಯಾಗಿದೆ.
ಬುಧವಾರ ಮಧ್ಯಾಹ್ನ ಬೈಕ್ ಹಾಗೂ ಕಾರಿನ ನಡುವೆ ಭೀಕರ ಅಪಘಾತ ನಡೆದಿದ್ದು ಬೈಕ್ ನಲ್ಲಿದ್ದ ಮೂವರಲ್ಲಿ ಇಬ್ಬರು ಗಂಭೀರ ಗಾಯಗೊಂಡಿದ್ದು ಅದರಲ್ಲಿ ಕಾಲು ಮುರಿತಕ್ಕೊಳಗಾಗಿದ್ದ ಯುವಕ ಅರ್ಧ ಎದ್ದು ನಿಂತು ತನ್ನ ಸ್ನೇಹಿತರನ್ನು ಉಳಿಸಿ ಎಂದೂ ಕಣ್ಣೀರಿರುಡುತ್ತಾ ಅಂಗಲಾಚುತಿದ್ದರೂ ಅಲ್ಲಿದ್ದವರ ಯಾರ ಮನಸ್ಸು ಕರಗಲೇ ಇಲ್ಲಾ ಎಂತಹ ಕಟುಕನ ಮನಸ್ಸಿನವರಾದರೂ ಅಂಗಾತವಾಗಿ ಬಿದ್ದು ಉಸಿರಾಡಲು ಕಷ್ಟ ಪಡುತಿದ್ದ ಯುವಕನ್ನು ಕೊನೆಪಕ್ಷ ಎತ್ತಿ ಕೂರಿಸಿದ್ದರೂ ಅವನ ಪ್ರಾಣಪಕ್ಷಿ ಸ್ವಲ್ಪ ಹೊತ್ತು ಇರುತಿತ್ತೇನೋ ಛೇ ಎಂತಹಾ ಮನುಷ್ಯರೂ ನೀವೆಲ್ಲಾ ಎಂದು ಯಮಧೂತನೇ ಒಂದು ಕಾಲ ದಂಗಾಗಿರಬೇಕು…
ಗಂಭೀರವಾಗಿ ಗಾಯಗೊಂಡಿದ್ದ ತನ್ನ ಸ್ನೇಹಿತರನ್ನು ಆಸ್ಪತ್ರೆಗೆ ಕೊಂಡೊಯ್ಯವಂತೆ ಯುವಕ ಗೋಗರೆದರೂ, ಜನರು ಮಾತ್ರ ದೂರವೇ ನಿಂತು ಎಲ್ಲವನ್ನು ಮೌನವಾಗಿ ನೋಡುತ್ತಾ ರೀಲ್ಸ್ ಹಾಗೂ ವಾಟ್ಸಾಪ್ ಸ್ಟೇಟಸ್ ಗೆ ವೀಡಿಯೋ ತೆಗೆದುಕೊಳ್ಳುತ್ತಾ ನಿಂತಿದ್ದರು.ಸ್ಥಳದಲ್ಲಿ ಪೋಟೋ ಕ್ಲಿಕ್ಕಿಸಲು ನೆರೆದಿದ್ದವರದೇ 15 ರಿಂದ 20 ಖಾಸಗಿ ಕಾರು ಇದ್ದರೂ ನಮಗ್ಯಾಕೇ ,ಕಾರು ಗಲೀಜಾದರೇ , ಕೇಸ್ ಗೆ ಓಡಾಡಬೇಕೇನೋ ಎಂದು ಒಬ್ಬೊಬ್ಬರೇ ಜಾರಿಕೊಳ್ಳುತಿದ್ದರು…
ವಿದ್ಯಾರ್ಥಿಗಳಾದ ಕಳಸೆ ಗ್ರಾಮಸ ಮನೋಜ್ ,ಕೆಂಚನಾಲ ಗ್ರಾಮದ ಅಕ್ಷಯ್ ಹಾಗೂ ರಿಪ್ಪನ್‌ಪೇಟೆ ನಿವಾಸಿ ಮಾನ್ವಿತ್ ಮೂವರು ಸ್ನೇಹಿತರು ರಜೆ ಹಿನ್ನಲೆಯಲ್ಲಿ ಶಿವಮೊಗ್ಗದ ಸಿಂಹಧಾಮಕ್ಕೆ ಭೇಟಿ ನೀಡಿ ಹಿಂದಿರುಗುತಿದ್ದ ಸಮಯದಲ್ಲಿ ಈ ಹೃದಯ ವಿದ್ರಾವಕಾರಿ ಘಟನೆ ನಡೆದಿದ್ದು ಘಟನೆಯಾಗಿ ಅರ್ಧ ಘಂಟೆಯ ನಂತರ ಆಂಬುಲೆನ್ಸ್ ಕರೆ ಮಾಡಿದ್ದು ರಿಪ್ಪನ್‌ಪೇಟೆಯಲ್ಲಿ ಆಂಬುಲೆನ್ಸ್ ಲಭ್ಯತೆ ಇಲ್ಲದ ಕಾರಣ ಹುಂಚ ಆಸ್ಪತ್ರೆಯ ಆಂಬುಲೆನ್ಸ್ ಬರುವುದಾಗಿ ತಿಳಿಸಿದ್ದರೂ ಅಷ್ಟರಲ್ಲಾಗಲೇ ವಿಧ್ಯಾರ್ಥಿಯೋರ್ವನ ಪ್ರಾಣಪಕ್ಷಿ ಹಾರಿ ಹೋಗಿತ್ತು. ಅದೇ ಸಮಯಕ್ಕೆ ರಿಪ್ಪನ್‌ಪೇಟೆಯಿಂದ ಶಿವಮೊಗ್ಗಕ್ಕೆ ಕಾರಿನಲ್ಲಿ ಪ್ರಯಾಣಿಸುತಿದ್ದ ಸಂಗೀತ ಮತ್ತು ಶಾಜಿ ದಂಪತಿಗಳು ಪೋಟೋ ಕ್ಲಿಕ್ಕಿಸುವವರ ನಡುವೆ ನುಗ್ಗಿ ಹೋಗಿ ಗಾಯಾಳುವೊಬ್ಬರನ್ನು ತನ್ನದೇ ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾರೆ,ರಿಪ್ಪನ್‌ಪೇಟೆ ಜುಮ್ಮಾ ಮಸೀದಿಯ ಆಂಬುಲೆನ್ಸ್ ಚಾಲಕ ಅಜಾದ್ ಸ್ಥಳಕ್ಕೆ ಧಾವಿಸಿ ಈಗಾಗಲೇ ಮೃತನಾಗಿದ್ದಾನೆ ಸಾರ್ವಜನಿಕರೇ ನಿರ್ಧರಿಸಿದ್ದ ಮನೋಜ್ ಎಂಬ ವಿಧ್ಯಾರ್ಥಿಯನ್ನು ಉಳಿಸುವ ಭರವಸೆಯೊಂದಿಗೆ ಶಿವಮೊಗ್ಗಕ್ಕೆ ಕರೆದೊಯ್ಯುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಈ ಅಪಘಾತ ಸಂಭವಿಸಿದ ತಕ್ಷಣ ಸಂಧರ್ಭದಲ್ಲಿ ಅಲ್ಲಿ ನೆರೆದಿದ್ದ ನಾಗರೀಕರು ಮೊಬೈಲ್ ಗಳಲ್ಲಿ ಕ್ಲಿಕ್ಕಿಸುವ ಬದಲು ತಮ್ಮಲ್ಲಿರುವ ವಾಹನದ ಮೂಲಕ ಸಮೀದ ಆಸ್ಪತ್ರೆಗೆ ಕರೆದೊಯ್ದಿದ್ದರೆ ಅಂಗಾತ ಬಿದ್ದು ಉಸಿರಾಡಲು ಕಷ್ಟಪಡುತಿದ್ದ ಮನೋಜ್ ಎಂಬ ವಿದ್ಯಾರ್ಥಿಯ ಪ್ರಾಣ ಉಳಿಸಬಹುದಿತ್ತಲವೇ… ನಿಮ್ಮ ಆತ್ಮ ಸಾಕ್ಷಿಯನ್ನೊಮ್ಮೆ ಪ್ರಶ್ನಿಸಿಕೊಳ್ಳಿ….!!!?
ಈ ಲಿಂಕ್ ಬಳಸಿ ಅಪಘಾತ ಸ್ಥಳದ ವೀಡಿಯೋ ನೋಡಿ https://x.com/RaafiRemo/status/1866864979833655469?s=19