ಅಕ್ರಮ ಗೋ ಸಾಗಾಟ – ವಾಹನ ಸಮೇತ ಪೊಲೀಸ್ ವಶಕ್ಕೆ!
ತೀರ್ಥಹಳ್ಳಿ : ಯಾವುದೇ ದಾಖಲೆ ಇಲ್ಲದೆ ಟಾಟಾ ಲೈಲ್ಯಾಂಡ್ ವಾಹನದಲ್ಲಿ 3 ಹಸುಗಳನ್ನು ತುಂಬಿಕೊಂಡು ಹೋಗುತ್ತಿದ್ದಾಗ ಕುರುವಳ್ಳಿಯಲ್ಲಿ ಸ್ಥಳೀಯರು ಹಿಡಿದು ವಾಹನ ಸಮೇತ ಹಸುಗಳನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ಶುಂಠಿಕಟ್ಟೆಯಿಂದ – ಭದ್ರಾವತಿಗೆ ಹಸುವನ್ನು ಸಾಗಿಸಲಾಗುತ್ತಿತ್ತು ಎನ್ನಲಾಗಿದ್ದು ಯಾವುದೇ ದಾಖಲಾತಿ ಇರದ ಕಾರಣ ವಶಕ್ಕೆ ಪಡೆಯಲಾಗಿದೆ.
ಯಾವ ಕಾರಣಕ್ಕೆ ಹಸು ಸಾಗಿಸಲಾಗುತ್ತಿತ್ತು ಎಂಬುದು ತಿಳಿದು ಬಂದಿಲ್ಲ. ದಾಖಲೆ ಇಲ್ಲದ ಕಾರಣ ಪ್ರಕರಣ ದಾಖಲಾಗುವ ಸಾಧ್ಯತೆ ಇದ್ದು ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.