
ಜಿಲ್ಲಾ ಸುದ್ದಿ:

ಅಪಘಾತ ತಡೆಗೆ ರಿಪ್ಪನ್ಪೇಟೆ ಪೊಲೀಸರಿಂದ ವಿಶೇಷ ಕಾರ್ಯಾಚರಣೆ
ಅಪಘಾತ ತಡೆಗೆ ರಿಪ್ಪನ್ಪೇಟೆ ಪೊಲೀಸರಿಂದ ವಿಶೇಷ ಕಾರ್ಯಾಚರಣೆ ರಿಪ್ಪನ್ಪೇಟೆ : ಅಪಘಾತಗಳ ನಿಯಂತ್ರಣಕ್ಕಾಗಿ, ವಾಹನಗಳಿಗೆ ರಿಫ್ಲೆಕ್ಟರ್ ಸ್ಟಿಕ್ಕರ್ ಅಂಟಿಸುವ ವಿಶೇಷ ಕಾರ್ಯಾಚರಣೆಯನ್ನು ಪಿಎಸ್ಐ ಪ್ರವೀಣ್ ಎಸ್ ಪಿ ನೇತ್ರತ್ವದ ಸಿಬ್ಬಂದಿಗಳು ನಡೆಸಿದ್ದಾರೆ. ಅಪಘಾತಗಳ ನಿಯಂತ್ರಣ ಹಾಗೂ ಸಾರ್ವಜನಿಕರ ಸುರಕ್ಷತೆ ಹಿತದೃಷ್ಟಿಯಿಂದ, ವಾಹನಗಳಿಗೆ ರಿಫ್ಲೆಕ್ಟರ್ ಸ್ಟಿಕ್ಕರ್ ಅಂಟಿಸುವ ಕಾರ್ಯಾಚರಣೆಯನ್ನು ಜಿಲ್ಲೆಯಾದ್ಯಂತ ನಡೆಸಲಾಗುತ್ತಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ. ರಾತ್ರಿ ವೇಳೆ ಸರಕು ಸಾಗಾಣೆ ವಾಹನಗಳು, ಲಾರಿ, ಟ್ರ್ಯಾಕ್ಟರ್ ಸೇರಿದಂತೆ ಭಾರೀ ವಾಹನಗಳ ಗೋಚರತೆ ಹೆಚ್ಚಿಸಲು ಸದರಿ ವಿಶೇಷ ಕಾರ್ಯಾಚರಣೆಯನ್ನು…

ರಾಜ್ಯದ ಗಮನ ಸೆಳೆದ ಹೊಸನಗರ ವಸತಿ ಶಾಲೆಯ ಪ್ರಾಂಶುಪಾಲ ಯೋಗೇಶ್
ರಾಜ್ಯದ ಗಮನ ಸೆಳೆದ ಹೊಸನಗರ ವಸತಿ ಶಾಲೆಯ ಪ್ರಾಂಶುಪಾಲ ಯೋಗೇಶ್ ವಿದ್ಯಾರ್ಥಿಗಳ ಮುಖ ನೋಡದೆ ಅವರ ಧ್ವನಿಯ ಮೂಲಕ ಹೆಸರನ್ನು ಗುರುತಿಸುವ ಕೇರಳದ ಶಿಕ್ಷಕನ ವಿಡಿಯೋ ವೈರಲ್ ಆದ ಬೆನ್ನಲ್ಲೇ ರಾಜ್ಯದ ಶಿಕ್ಷಕನೋರ್ವ ಅದೇ ಮಾದರಿಯಲ್ಲಿ ಗಮನ ಸೆಳೆದಿದ್ದಾರೆ. ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಗೇರುಪುರ ಇಂದಿರಾ ಗಾಂಧಿ ವಸತಿ ಶಾಲೆಯ ಪ್ರಾಂಶುಪಾಲ ಯೋಗೇಶ್ ಹೆಬ್ಬಳಗೆರೆ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ 250 ವಿದ್ಯಾರ್ಥಿಗಳು ಇದ್ದು, ಮೊದಲಿಗೆ ಎಸ್ಎಸ್ಎಲ್ಸಿ…

ರಿಪ್ಪನ್ಪೇಟೆಯ ಅಜಿತ್ ಸಿಂಹ ನಟಿಸಿರುವ ‘ಏರಿಸೀಮೆ’ ಕಿರುಚಿತ್ರದ ಟ್ರೈಲರ್ ಬಿಡುಗಡೆ
ರಿಪ್ಪನ್ಪೇಟೆಯ ಅಜಿತ್ ಸಿಂಹ ನಟಿಸಿರುವ ‘ಏರಿಸೀಮೆ” ಕಿರುಚಿತ್ರದ ಟ್ರೈಲರ್ ಬಿಡುಗಡೆ ರಿಪ್ಪನ್ಪೇಟೆ : ಅದ್ಬುತ ನಟನೆಯ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸದ್ದು ಮಾಡುತ್ತಿರುವ ಪಟ್ಟಣದ ಅಜಿತ್ ಸಿಂಹ ನಟನೆಯ ಏರಿಸೀಮೆ ಕಿರುಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ಯೂಟ್ಯೂಬ್ ನಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಪಟ್ಟಣದ ರಾಘವೇಂದ್ರ ಬೇಕರಿ ಮಾಲೀಕ ಸುರೇಶ್ ನಿರ್ಮಾಣದಲ್ಲಿ ಅಜಿತ್ ಸಿಂಹ ನಟಿಸಿರುವ ಥ್ರಿಲ್ಲರ್ ಕಿರುಚಿತ್ರದ ಟ್ರೈಲರ್ ಬುಧವಾರ ಸಂಜೆ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದು ಮಾರ್ಚ್ 2 ರಂದು ಕಿರುಚಿತ್ರ ಬಿಡುಗಡೆಯಾಗಲಿದೆ. ಮುಗ್ಧ ವ್ಯಕ್ತಿಯು…

RIPPONPETE | ಹುಲ್ಲಿನ ಬಣವೆಗೆ ಆಕಸ್ಮಿಕ ಬೆಂಕಿ – ತಪ್ಪಿದ ಭಾರಿ ಅನಾಹುತ
RIPPONPETE | ಹುಲ್ಲಿನ ಬಣವೆಗೆ ಆಕಸ್ಮಿಕ ಬೆಂಕಿ – ತಪ್ಪಿದ ಭಾರಿ ಅನಾಹುತ ರಿಪ್ಪನ್ಪೇಟೆ : ಇಲ್ಲಿನ ಸಮೀಪದ ಮುಡುಬ ಗ್ರಾಮದ ಪಾಲಾಕ್ಷಪ್ಪ ಗೌಡ ಎಂಬುವರಿಗೆ ಸೇರಿದ ಹುಲ್ಲಿನ ಬಣವೆಗೆ ಆಕಸ್ಮಿಕ ಬೆಂಕಿ ತಗುಲಿ ಸಾವಿರಾರು ರೂ ನಷ್ಟವಾಗಿರುವ ಘಟನೆ ನಡೆದಿದೆ. ಮುಡುಬಾ ಗ್ರಾಮದ ಪಾಲಾಕ್ಷಪ್ಪ ರವರಿಗೆ ಸೇರಿದ 200ಕ್ಕೂ ಹೆಚ್ಚು ಹುಲ್ಲಿನ ಬಣವೆಗೆ ಆಕಸ್ಮಿಕ ಬೆಂಕಿ ತಗುಲಿ ಅಪಾರ ನಷ್ಟವುಂಟಾಗಿದೆ. ಈ ಅವಘಡದಲ್ಲಿ 50ಕ್ಕೂ ಹೆಚ್ಚು ನೀರಿನ ಪೈಪುಗಳು ಸುಟ್ಟು ಭಸ್ಮವಾಗಿದೆ. ಅವಘಡ ನಡೆದ ಸ್ಥಳದಲ್ಲಿ…

ರಸ್ತೆ ಅಪಘಾತ : ಓರ್ವ ಸಾವು ,ಇನ್ನೋರ್ವ ಗಂಭೀರ – ರಸ್ತೆ ಅವ್ಯವಸ್ಥೆ ಖಂಡಿಸಿ ಸ್ಥಳೀಯರಿಂದ ಪ್ರತಿಭಟನೆ
ರಸ್ತೆ ಅಪಘಾತ : ಓರ್ವ ಸಾವು ,ಇನ್ನೋರ್ವ ಗಂಭೀರ – ರಸ್ತೆ ಅವ್ಯವಸ್ಥೆ ಖಂಡಿಸಿ ಸ್ಥಳೀಯರಿಂದ ಪ್ರತಿಭಟನೆ ಹೊಳೆಹೊನ್ನೂರು ಜಂಕ್ಷನ್ ಬಳಿ ರಸ್ತೆ ಅಪಘಾತ ಸಂಭವಿಸಿದ್ದು ಅಪಘಾತದಲ್ಲಿ ಟಿವಿಎಸ್ ಎಕ್ಸ ಎಲ್ ಸವಾರ ಮೃತಪಟ್ಟು ಹಿಂಬದಿ ಕುಳಿತಿದ್ದ ಮಹಿಳೆಗೆ ತೀವ್ರತರವಾದ ಗಾಯಗಳಾಗಿರುವ ಘಟನೆ ನಡೆದಿದೆ.ಈ ಅಪಘಾತಕ್ಕೆ ಅವೈಜ್ಞಾನಿಕ ರಸ್ತೆಯೇ ಕಾರಣ ಎಂದು ಆರೋಪಿಸಿ ಸ್ಥಳದಲ್ಲಿ ನೆರೆದ ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ. ಪುಟ್ಟಪ್ಪ ಎಂಬ ವ್ಯಕ್ತಿ ಮೃತಪಟ್ಟ ದುರ್ಧೈವಿಯಾಗಿದ್ದಾರೆ. ಹೊಳೆಹೊನ್ನೂರಿನಿಂದ ಶಿವಮೊಗ್ಗಕ್ಕೆ ತೆರಳುವ ನೂತನ ರಸ್ತೆಯಲ್ಲಿ ಅಶೋಕ್ ಲೈಲ್ಯಾಂಡ್…

HUMCHA | ಅಕ್ರಮ ಮರ ಕಡಿತಲೆ – ಪ್ರಕರಣ ದಾಖಲು
HUMCHA | ಅಕ್ರಮ ಮರ ಕಡಿತಲೆ – ಪ್ರಕರಣ ದಾಖಲು ಹೊಸನಗರ ತಾಲೂಕಿನ ಹುಂಚ ಗ್ರಾ ಪಂ ವ್ಯಾಪ್ತಿಯ ಹುತ್ತಳ್ಳಿ ಗ್ರಾಮದ ಸರ್ವೇ ನಂಬರ್ 31 ರ ಅರಸಾಳು ವಲಯ ಅರಣ್ಯ ವ್ಯಾಪ್ತಿಯಲ್ಲಿ ನೂರಾರು ಮರ ಗಿಡಗಳನ್ನು ಅಕ್ರಮವಾಗಿ ಕಡಿದಿರುವ ಘಟನೆಗೆ ಸಂಬಂಧಿಸಿ ಭಾನುವಾರ ಪ್ರಕರಣ ದಾಖಲಾಗಿದೆ. ಹುತ್ತಳ್ಳಿ ಗ್ರಾಮದ ಸರ್ವೆ ನಂ. 31 ರಲ್ಲಿದ್ದ ನೈಸರ್ಗಿಕ ಅರಣ್ಯವನ್ನು ಕಡಿದು ನಾಶಪಡಿಸಿರುವ ಹಿನ್ನೆಲೆಯಲ್ಲಿ ಗ್ರಾಮದ ದೇವರಾಜ್ ಎಂಬುವರ ವಿರುದ್ಧ ಅರಣ್ಯ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಸುಮಾರು 4 ಎಕರೆ…

ಚಲಿಸುತಿದ್ದ KSRTC ಬಸ್ನಲ್ಲಿ ಸಾಗರದ ಯುವಕನಿಗೆ ಚೂರಿ ಇರಿದು ಹತ್ಯೆ – ಭಗ್ನ ಪ್ರೇಮಿ ಹಾಗೂ ಮೃತನ ಪತ್ನಿಯ ಬಂಧನ
ಚಲಿಸುತಿದ್ದ KSRTC ಬಸ್ನಲ್ಲಿ ಸಾಗರದ ಯುವಕನಿಗೆ ಚೂರಿ ಇರಿದು ಹತ್ಯೆ – ಭಗ್ನ ಪ್ರೇಮಿ ಹಾಗೂ ಮೃತನ ಪತ್ನಿಯ ಬಂಧನ ಶಿರಸಿಯಲ್ಲಿ ಸಾಗರ ತಾಲ್ಲೂಕು ನಿವಾಸಿಯೊಬ್ಬರನ್ನು ಬಸ್ನಲ್ಲಿಯೇ ಇರಿದು ಹತ್ಯೆ ಮಾಡಲಾಗಿದೆ. ಸಾಗರ ತಾಲ್ಲೂಕು ನಿಚಡಿಯ ಗಂಗಾಧರ್ ಮೃತ ಯುವಕ. ಗಂಗಾಧರ್ ಶಿರಸಿಯ ಯವತಿಯ ಜೊತೆ ನಾಲ್ಕು ತಿಂಗಳ ಹಿಂದೆಷ್ಟೆ ಮದುವೆಯಾಗಿ ಬೆಂಗಳೂರಿನಲ್ಲಿ ನೆಲೆಸಿದ್ದವರು, ಸಂಬಂಧಿಕರ ಮನೆಯ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳುವ ಸಲುವಾಗಿ ಶನಿವಾರ ಶಿರಸಿಗೆ ಬಂದಿದ್ದರು. ವಾಪಸ್ ಬೆಂಗಳೂರಿಗೆ ಹೋಗಲು ಸಂಜೆ 7ರ ಸುಮಾರಿಗೆ ಹೊಸ ಬಸ್…

ಮೈಸೂರು – ತಾಳಗುಪ್ಪ ರೈಲು ಅರಸಾಳು ಮತ್ತು ಕುಂಸಿಯಲ್ಲಿ ನಿಲುಗಡೆ ಮುಂದುವರಿಕೆ
ಮೈಸೂರು – ತಾಳಗುಪ್ಪ ರೈಲು ಅರಸಾಳು ಮತ್ತು ಕುಂಸಿಯಲ್ಲಿ ನಿಲುಗಡೆ ಮುಂದುವರಿಕೆ ಶಿವಮೊಗ್ಗ ಜಿಲ್ಲೆಯ ಅರಸಾಳು ಮತ್ತು ಕುಂಸಿಯಲ್ಲಿ ಮೈಸೂರು-ತಾಳಗುಪ್ಪ ರೈಲಿಗೆ ತಾತ್ಕಾಲಿಕ ನಿಲುಗಡೆ ಮುಂದುವರೆಸಲಾಗಿದೆ. ನೈಋತ್ಯ ರೈಲ್ವೆಯು ಮೈಸೂರು-ತಾಳಗುಪ್ಪ ಮಾರ್ಗದ ಪ್ರಯಾಣಿಕರ ಅನುಕೂಲಕ್ಕಾಗಿ, ಈ ಕೆಳಗಿನ ರೈಲುಗಳಿಗೆ ಅರಸಾಳು ಮತ್ತು ಕುಂಸಿ ನಿಲ್ದಾಣಗಳಲ್ಲಿ ತಾತ್ಕಾಲಿಕ ನಿಲುಗಡೆಯ ಅವಕಾಶವನ್ನು ಮುಂದುವರೆಸಲಾಗಿದೆ. ಮೈಸೂರು-ತಾಳಗುಪ್ಪ-ಮೈಸೂರು ಡೈಲಿ ಎಕ್ಸ್ ಪ್ರೆಸ್ ರೈಲು ಈ ಹಿಂದೆ ಅರಸಾಳು ನಿಲ್ದಾಣದಲ್ಲಿ ಒಂದು ನಿಮಿಷ ತಾತ್ಕಾಲಿಕ ನಿಲುಗಡೆಯನ್ನು ಒದಗಿಸಲಾಗಿತ್ತು, ಈ ಸೌಲಭ್ಯವನ್ನು ಫೆ. 24ರಿಂದ 23.08.2025…

ಬಡವರ ಜನ ಸಾಮಾನ್ಯರ ಸೇವೆಗೆ ನಾನು ಸದಾ ಸಿದ್ಧ: ಬೇಳೂರು ಗೋಪಾಲಕೃಷ್ಣ
ಬಡವರ ಜನ ಸಾಮಾನ್ಯರ ಸೇವೆಗೆ ನಾನು ಸದಾ ಸಿದ್ಧ: ಬೇಳೂರು ಗೋಪಾಲಕೃಷ್ಣ ಬೇಳೂರು ಗೋಪಾಲಕೃಷ್ಣ ಹುಟ್ಟುಹಬ್ಬಕ್ಕೆ ಹೊಸನಗರದಲ್ಲಿ ಜನಸಾಗರ ಹೊಸನಗರ; ಜನಪ್ರಿಯ ಶಾಸಕ ಬೇಳೂರು ಗೋಪಾಲಕೃಷ್ಣ ಅವರ ಹುಟ್ಟು ಹಬ್ಬವನ್ನು ವೈಶಿಷ್ಠö್ಯಪೂರ್ಣವಾಗಿ ಫೆ.22ರ ಶನಿವಾರ ರಾತ್ರಿ ಹೊಸನಗರದ ನೆಹರು ಮೈದಾನದಲ್ಲಿ ಬ್ಲಾಕ್ ಕಾಂಗ್ರೇಸ್ ಪಕ್ಷ ಹಾಗೂ ಬೇಳೂರು ಅಭಿಮಾನಿ ಬಳಗದವರು ಆಚರಿಸಲಾಗಿದ್ದು ನೆಹರು ಮೈದಾನದ ತುಂಬಾ ಜನ ಸಾಗರವೇ ಸೇರಿ ಬೇಳೂರು ಹುಟ್ಟು ಹಬ್ಬದ ಶುಭಾಷಯ ಕೋರಿದರು. ದೇಶವನ್ನು ಸೈನಿಕರು ರಕ್ಷಣೆ ಮಾಡಿದ ಹಾಗೇ ಬಡವರ ಶ್ರೀ…

HOSANAGARA | ಶಾಸಕ ಬೇಳೂರು ಗೋಪಾಲಕೃಷ್ಣ ಹುಟ್ಟುಹಬ್ಬದ ಅಂಗವಾಗಿ ವಿಶೇಷ ಪೂಜೆ
HOSANAGARA | ಶಾಸಕ ಬೇಳೂರು ಗೋಪಾಲಕೃಷ್ಣ ಹುಟ್ಟುಹಬ್ಬದ ಅಂಗವಾಗಿ ವಿಶೇಷ ಪೂಜೆ ಹೊಸನಗರ : ಸಾಗರ- ಹೊಸನಗರ ಕ್ಷೇತ್ರದ ಶಾಸಕರಾದ ಗೋಪಾಲಕೃಷ್ಣ ಬೇಳೂರು ಅವರ ಹುಟ್ಟುಹಬ್ಬದ ಪ್ರಯುಕ್ತ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಿ ಜಿ ಚಂದ್ರಮೌಳಿ ನೇತೃತ್ವದಲ್ಲಿ ಬೇಳೂರು ಗೋಪಾಲಕೃಷ್ಣ ಅಭಿಮಾನಿಗಳು ಜೊತೆಗೂಡಿ ಕೊಡೂರಿನ ಶಂಕರೇಶ್ವರ ದೇವಸ್ತಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಲೋಕಕಲ್ಯಾಣಕ್ಕಾಗಿ ಪ್ರಾರ್ಥನೆ ಮಾಡಿ ಸುತ್ತಮುತ್ತಲಿನ ಶಾಲೆಗಳಿಗೆ ಸಿಹಿ ಹಂಚಲಾಯಿತು. ಈ ಸಮಯದಲ್ಲಿ ಕಲಗೋಡ್ ಉಮೇಶ್ ಸುಧಾಕರ್ ಗೌಡ ವೇದಾಂತ ಗೌಡ್ರು ರಂಜಿತ್ ಕುಮಾರ್ ವಿಕಾಸ್ …