ಜಿಲ್ಲಾ ಸುದ್ದಿ:
ರಿಪ್ಪನ್ ಪೇಟೆ | ಕಾಡಾನೆ ದಾಳಿ ಪ್ರದೇಶಕ್ಕೆ ತಹಶೀಲ್ದಾರ್ ಭರತ್ ರಾಜ್ ಭೇಟಿ – ಸೂಕ್ತ ಪರಿಹಾರದ ಭರವಸೆ
ರಿಪ್ಪನ್ ಪೇಟೆ | ಕಾಡಾನೆ ದಾಳಿ ಪ್ರದೇಶಕ್ಕೆ ತಹಶೀಲ್ದಾರ್ ಭರತ್ ರಾಜ್ ಭೇಟಿ – ಸೂಕ್ತ ಪರಿಹಾರದ ಭರವಸೆ ರಿಪ್ಪನ್ ಪೇಟೆ: ಕೆರೆಹಳ್ಳಿ ವ್ಯಾಪ್ತಿಯಲ್ಲಿ ಕಾಡಾನೆಯೊಂದು ದಾಳಿ ನಡೆಸಿ ತೋಟ ಮತ್ತು ಗದ್ದೆಗಳನ್ನು ನಾಶಮಾಡಿರುವ ವಿಷಯ ತಿಳಿಯುತಿದ್ದಂತೆ ಹೊಸನಗರ ತಹಶೀಲ್ದಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ,ಸೂಕ್ತ ಪರಿಹಾರಕ್ಕೆ ಅರಣ್ಯಾಧಿಕಾರಿಗಳಿಗೆ ಸೂಚನೆ ನೀಡಿದರು. ಶಿವಮೊಗ್ಗ ರಸ್ತೆಯ ಪೆಟ್ರೋಲ್ ಬಂಕ್ ಹಿಂಭಾಗದಲ್ಲಿರುವ ಕೆಳಗಿನ ಕೆರೆಹಳ್ಳಿಯ ಟೀಕಪ್ಪ ಗೌಡರ ತೋಟಕ್ಕೆ ನುಗ್ಗಿದ ಕಾಡಾನೆ ಬಾಳೆಗಿಡಗಳನ್ನು ಮುರಿದು ನಾಶಮಾಡಿದ್ದು, ಅಕ್ಕಪಕ್ಕದ…
ರಿಪ್ಪನ್ ಪೇಟೆ ಸರ್ಕಾರಿ ಆಸ್ಪತ್ರೆಗೆ ತಹಶೀಲ್ದಾರ್ ಭರತ್ ರಾಜ್ ದಿಡೀರ್ ಭೇಟಿ , ಪರಿಶೀಲನೆ
ರಿಪ್ಪನ್ ಪೇಟೆ ಸರ್ಕಾರಿ ಆಸ್ಪತ್ರೆಗೆ ತಹಶೀಲ್ದಾರ್ ಭರತ್ ರಾಜ್ ದಿಡೀರ್ ಭೇಟಿ , ಪರಿಶೀಲನೆ ರಿಪ್ಪನ್ ಪೇಟೆ : ಪಟ್ಟಣದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದೊರೆಯುತ್ತಿರುವ ಆರೋಗ್ಯ ಸೇವೆಗಳ ಸ್ಥಿತಿಯನ್ನು ಪರಿಶೀಲಿಸಲು ಹೊಸನಗರ ತಾಲೂಕು ತಹಶೀಲ್ದಾರ್ ಭರತ್ ರಾಜ್ ಇಂದು ದಿಡೀರ್ ಭೇಟಿ ನೀಡಿದರು. ತಹಶೀಲ್ದಾರ್ ಮೊದಲು ಆಸ್ಪತ್ರೆಗೆ ಬಂದಿದ್ದ ಹೊರ ರೋಗಿಗಳೊಂದಿಗೆ ಮಾತನಾಡಿ ಚಿಕಿತ್ಸೆ, ಔಷಧಿ ಲಭ್ಯತೆ ಕುರಿತಂತೆ ಮಾಹಿತಿ ಪಡೆದರು. ನಂತರ ವೈದ್ಯಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಆಸ್ಪತ್ರೆಯ ದಿನ ನಿತ್ಯದ ಕಾರ್ಯವೈಖರಿ ಹಾಗೂ…
ರಿಪ್ಪನ್ ಪೇಟೆಯ ಸಿದ್ದಪ್ಪನಗುಡಿ ಬಳಿ ಕಾಡಾನೆ ದಾಳಿ – ತೋಟ, ಗದ್ದೆ ನಾಶ | ಆತಂಕದಲ್ಲಿ ಗ್ರಾಮಸ್ಥರು
ರಿಪ್ಪನ್ ಪೇಟೆಯ ಸಿದ್ದಪ್ಪನಗುಡಿ ಬಳಿ ಕಾಡಾನೆ ದಾಳಿ – ತೋಟ, ಗದ್ದೆ ನಾಶ | ಆತಂಕದಲ್ಲಿ ಗ್ರಾಮಸ್ಥರು ರಿಪ್ಪನ್ ಪೇಟೆ: ಕೆರೆಹಳ್ಳಿ ವ್ಯಾಪ್ತಿಯಲ್ಲಿ ಕಾಡಾನೆಯೊಂದು ದಾಳಿ ನಡೆಸಿ ತೋಟ ಮತ್ತು ಗದ್ದೆಗಳನ್ನು ನಾಶಮಾಡಿರುವ ಘಟನೆ ಸ್ಥಳೀಯರಲ್ಲಿ ಭಯ–ಭೀತಿಯ ವಾತಾವರಣವನ್ನು ಉಂಟುಮಾಡಿದೆ. ಶಿವಮೊಗ್ಗ ರಸ್ತೆಯ ಪೆಟ್ರೋಲ್ ಬಂಕ್ ಹಿಂಭಾಗದಲ್ಲಿರುವ ಕೆಳಗಿನ ಕೆರೆಹಳ್ಳಿಯ ಟೀಕಪ್ಪ ಗೌಡರ ತೋಟಕ್ಕೆ ನುಗ್ಗಿದ ಕಾಡಾನೆ ಬಾಳೆಗಿಡಗಳನ್ನು ಮುರಿದು ನಾಶಮಾಡಿದ್ದು, ಅಕ್ಕಪಕ್ಕದ ಗದ್ದೆಗಳು ಕೂಡ ಗಂಭೀರ ಹಾನಿಗೊಳಗಾಗಿವೆ. ಭಾನುವಾರ ರಾತ್ರಿ ಕೆರೆಹಳ್ಳಿಯ ನಾಗರದೇವರ ಗುಡಿ ಹತ್ತಿರ…
ರಾಷ್ಟ್ರೀಯ ಸ್ವಯಂಸೇವಕ ಸಂಘದ ಗೃಹ ಸಂಪರ್ಕ ಅಭಿಯಾನಕ್ಕೆ ಚಾಲನೆ
ರಾಷ್ಟ್ರೀಯ ಸ್ವಯಂಸೇವಕ ಸಂಘದ ಗೃಹ ಸಂಪರ್ಕ ಅಭಿಯಾನಕ್ಕೆ ಚಾಲನೆ ರಿಪ್ಪನ್ ಪೇಟೆ: ಪಟ್ಟಣದ ಶ್ರೀ ಸಿದ್ಧಿ ವಿನಾಯಕ ಸ್ವಾಮಿ ದೇವಸ್ಥಾನದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಗೃಹ ಸಂಪರ್ಕ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಡಿಸೆಂಬರ್ 7 ರಿಂದ 14 ವರೆಗೆ ಗೃಹ ಸಂಪರ್ಕ ಅಭಿಯಾನದ ನಿಮಿತ್ತ ಹೊಸನಗರ ತಾಲೂಕಿನ ಪ್ರತಿ ಮನೆ ಮನೆಗೆ ಕಾರ್ಯಕರ್ತರು ಭೇಟಿ ನೀಡಿ ಆರೆಸೆಸ್ಸ್ ವಿಚಾರಧಾರೆಗಳನ್ನು ಮತ್ತು 100 ವರ್ಷದ ಸಾಧನೆಯನ್ನು ಮನೆ ಮನೆಗೆ ಮುಟ್ಟಿಸಲಿದ್ದೆವೆ ಎಂದು ತಾಲೂಕು ಕಾರ್ಯವಾಹ ಅಶ್ವಥ್ ತಿಳಿಸಿದರು. ಭಾರತ…
ರಿಪ್ಪನ್ ಪೇಟೆ | ವಿವಿಧ ಗ್ರಾಮಗಳಲ್ಲಿ ರಸ್ತೆ ಕಾಮಗಾರಿಯ ಶಂಕುಸ್ಥಾಪನೆ ನೆರವೇರಿಸಿದ ಶಾಸಕ ಬೇಳೂರು ಗೋಪಾಲಕೃಷ್ಣ
ರಿಪ್ಪನ್ ಪೇಟೆ | ವಿವಿಧ ಗ್ರಾಮಗಳಲ್ಲಿ ರಸ್ತೆ ಕಾಮಗಾರಿಯ ಶಂಕುಸ್ಥಾಪನೆ ನೆರವೇರಿಸಿದ ಶಾಸಕ ಬೇಳೂರು ಗೋಪಾಲಕೃಷ್ಣ ರಿಪ್ಪನ್ ಪೇಟೆ : ಪಟ್ಟಣದ ಸಾವರ್ಕರ್ ರಸ್ತೆಯ ಕಾಂಕ್ರೀಟ್ ರಸ್ತೆ , ತಮ್ಮಡಿಕೊಪ್ಪ ಗ್ರಾಮದ ಊರೊಳಗಿನ ರಸ್ತೆ ,ಕೊಣನಜೆಡ್ಡು ರಸ್ತೆ ಹಾಗೂ ಆಕಾಶ್ ಮಕ್ಕಿ ಗ್ರಾಮದ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಶಾಸಕ ಬೇಳೂರು ಗೋಪಾಲಕೃಷ್ಣ ಶಂಕುಸ್ಥಾಪನೆ ನೇರವೇರಿಸಿದರು. ವಿವಿಧ ಗ್ರಾಮಗಳಲ್ಲಿ ಶಂಕುಸ್ಥಾಪನೆಯ ನಂತರ ಡಿ.ಸಿ.ಸಿ ಬ್ಯಾಂಕ್ ನ ಸಭಾಭವನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತಾನಾಡಿದ ಶಾಸಕ ಬೇಳೂರು ಗೋಪಾಲಕೃಷ್ಣ ಹೊಸನಗರ…
ಬಿಸಿಎಂ ಮಹಿಳಾ ವಸತಿ ನಿಲಯಕ್ಕೆ ಶಾಸಕ ಬೇಳೂರು ಗೋಪಾಲಕೃಷ್ಣ ದಿಡೀರ್ ಭೇಟಿ | ವಾರ್ಡನ್ ವಿರುದ್ಧ ಗರಂ
ಬಿಸಿಎಂ ಮಹಿಳಾ ವಸತಿ ನಿಲಯಕ್ಕೆ ಶಾಸಕ ಬೇಳೂರು ಗೋಪಾಲಕೃಷ್ಣ ದಿಡೀರ್ ಭೇಟಿ | ವಾರ್ಡನ್ ವಿರುದ್ಧ ಗರಂ ರಿಪ್ಪನ್ಪೇಟೆ : ಸಾಗರ–ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಶನಿವಾರ ಸಂಜೆ ರಿಪ್ಪನ್ಪೇಟೆಯ ಬಿಸಿಎಂ ಮಹಿಳಾ ವಸತಿ ನಿಲಯಕ್ಕೆ ದಿಡೀರ್ ಭೇಟಿ ನೀಡಿ, ಹಾಸ್ಟೆಲ್ನ ವ್ಯವಸ್ಥೆಯನ್ನು ಪರಿಶೀಲಿಸಿದರು. ಆಹಾರ ಗುಣಮಟ್ಟ ಮತ್ತು ಹಾಜರಾತಿ ದಾಖಲೆ ಕುರಿತು ಬಂದಿದ್ದ ದೂರುಗಳ ಹಿನ್ನೆಲೆಯಲ್ಲಿ ಈ ಪರಿಶೀಲನೆ ನಡೆಸಲಾಯಿತು. ಶಾಸಕರ ಭೇಟಿ ಸಂದರ್ಭದಲ್ಲಿ ಹಾಸ್ಟೆಲ್ ವಾರ್ಡನ್ ಹಾಜರಾತಿ ಸರಿಯಾಗಿ ದಾಖಲು…
ಹಸಿರುಮಕ್ಕಿ ಸೇತುವೆ ಇನ್ನೂ ಮೂರು ತಿಂಗಳಲ್ಲಿ ಸಿಎಂ ಸಿದ್ದರಾಮಯ್ಯರಿಂದ ಉದ್ಘಾಟನೆ – ಶಾಸಕ ಬೇಳೂರು
ಹಸಿರುಮಕ್ಕಿ ಸೇತುವೆ ಇನ್ನೂ ಮೂರು ತಿಂಗಳಲ್ಲಿ ಸಿಎಂ ಸಿದ್ದರಾಮಯ್ಯರಿಂದ ಉದ್ಘಾಟನೆ – ಶಾಸಕ ಬೇಳೂರು ನಿಟ್ಟೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ | ನಿಟ್ಟೂರು : ಬಹುದಿನಗಳಿಂದ ಸ್ಥಳೀಯರ ನಿರೀಕ್ಷೆಯಲ್ಲಿದ್ದ ಹಸಿರುಮಕ್ಕಿ ಸೇತುವೆ ಕಾಮಗಾರಿ ಇನ್ನೇನು ಮೂರು ತಿಂಗಳಲ್ಲಿ ಪೂರ್ಣಗೊಳ್ಳಲಿದ್ದು, ಕರ್ನಾಟಕದ ಜನಪ್ರಿಯ ಮುಖ್ಯಮಂತ್ರಿ ಸಿದ್ದರಾಮಯ್ಯರ ಕೈಗಳಿಂದ ಸೇತುವೆ ಉದ್ಘಾಟನೆ ನಡೆಯಲಿದೆ ಎಂದು ಸಾಗರ–ಹೊಸನಗರ ಕ್ಷೇತ್ರದ ಶಾಸಕ ಹಾಗೂ ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಬೇಳೂರು ಗೋಪಾಲಕೃಷ್ಣ ತಿಳಿಸಿದ್ದಾರೆ. ನಿಟ್ಟೂರು ಕಾಂಗ್ರೆಸ್ ಘಟಕದ ಕಾರ್ಯಕರ್ತರ…
ಟಾರ್ಪಲ್ ಶೆಡ್ ನಲ್ಲಿ ಬೆಳೆದು ವಿಶ್ವಕಪ್ ಗೆ ಮುತ್ತಿಕ್ಕಿದ ಬಡ ಪ್ರತಿಭೆಗೆ ಬೇಕು ನಿಮ್ಮೆಲ್ಲರ ಆರ್ಥಿಕ ನೆರವು
ವಿಶ್ವಕಪ್ ವಿಜೇತ ಕಾವ್ಯಾಳಿಗೆ ಬೇಕಿಲ್ಲ ಹಾರ ತುರಾಯಿ – ಟಾರ್ಪಲ್ ಶೆಡ್ ನಲ್ಲಿ ಬೆಳೆದು ವಿಶ್ವಕಪ್ ಗೆ ಮುತ್ತಿಕ್ಕಿದ ಬಡ ಪ್ರತಿಭೆಗೆ ಬೇಕು ನಿಮ್ಮೆಲ್ಲರ ಆರ್ಥಿಕ ನೆರವು ಟಿ–20 ಅಂಧರ ವಿಶ್ವಕಪ್ನಲ್ಲಿ ಭಾರತದ ಹೆಮ್ಮೆ ಹೆಚ್ಚಿಸಿದ ಮಹಿಳಾ ತಂಡದಲ್ಲಿ ರಿಪ್ಪನ್ಪೇಟೆಯ ಕಾವ್ಯಾ.ವಿ ಎಂಬ ಹೆಸರಿದೆ—ಆದರೆ ಆ ಹೆಸರಿನ ಹಿಂದೆ ಅಡಗಿರುವ ಬದುಕಿನ ನೋವು, ಹೋರಾಟ, ಕನಸುಗಳ ಕಥೆ ಯಾರಿಗೂ ಕಾಣುವುದಿಲ್ಲ. ದೇಶಕ್ಕೆ ವಿಶ್ವಕಪ್ ಗೆಲುವು ತಂದುಕೊಟ್ಟ ಈ ಯುವತಿಯ ಕಣ್ಣುಗಳಲ್ಲಿ ಇಂದಿಗೂ “ಮನೆ ಹಾಗೂ ಜೀವನ ಹೇಗೆ…
T20 ವಿಶ್ವಕಪ್ ಚಾಂಪಿಯನ್ ಕಾವ್ಯಾರವರಿಗೆ ಸ್ನೇಹ ಬಳಗದ ವತಿಯಿಂದ ಸನ್ಮಾನ
T20 ವಿಶ್ವಕಪ್ ಚಾಂಪಿಯನ್ ಕಾವ್ಯಾ.ವಿ ಸ್ನೇಹ ಬಳಗದ ವತಿಯಿಂದ ಸನ್ಮಾನ ಟಿ–20 ಅಂಧರ ವಿಶ್ವಕಪ್ನಲ್ಲಿ ಭಾರತಕ್ಕೆ ಕೀರ್ತಿ ತಂದ ಮಹಿಳಾ ತಂಡದಲ್ಲಿ ರಿಪ್ಪನ್ಪೇಟೆಯ ಕಾವ್ಯಾ.ವಿ ಕೂಡ ಪ್ರಮುಖ ಪಾತ್ರವಹಿಸಿದ್ದರು. ಈ ಅಂತರಾಷ್ಟ್ರೀಯ ಪ್ರಶಸ್ತಿಯಿಂದ ದೇಶವನ್ನು ಬೆಳಗಿಸಿದ ಗೌರವದ ಸಾಧನೆಗೆ ಪಟ್ಟಣದ ಸರ್ಕಾರಿ ಪ್ರೌಢಶಾಲೆಯ 95-96 ನೇ ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಸ್ನೇಹ ಬಳಗದ ವತಿಯಿಂದ ಸನ್ಮಾನಿಸಲಾಯಿತು. ಬರುವೆ ಗ್ರಾಮದ ಬ್ರಹ್ಮೇಶ್ವರ ದೇವಸ್ಥಾನ ಆವರಣದಲ್ಲಿ ದೇವಸ್ಥಾನದ ಸಮಿತಿಯವರು ಹಾಗೂ ಗ್ರಾಮಸ್ಥರು ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ…
ಅಂತರ್ ವಿಶ್ವವಿದ್ಯಾಲಯ ವಾಲಿಬಾಲ್ ಪಂದ್ಯಾವಳಿಗೆ ರಿಪ್ಪನ್ಪೇಟೆಯ ವಿದ್ಯಾರ್ಥಿಗಳು ಆಯ್ಕೆ
ಅಂತರ್ ವಿಶ್ವವಿದ್ಯಾಲಯ ವಾಲಿಬಾಲ್ ಪಂದ್ಯಾವಳಿಗೆ ರಿಪ್ಪನ್ಪೇಟೆಯ ವಿದ್ಯಾರ್ಥಿಗಳು ಆಯ್ಕೆ ರಿಪ್ಪನ್ಪೇಟೆ : ಆಂಧ್ರಪ್ರದೇಶದಲ್ಲಿ ನಡೆಯುವ ಅಂತರ್ ವಿಶ್ವವಿದ್ಯಾಲಯದ ವಾಲಿಬಾಲ್ ಪಂದ್ಯಾವಳಿಗೆ ರಿಪ್ಪನ್ಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮೂವರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಡಿಸೆಂಬರ್ 10 ರಿಂದ 14 ರವರೆಗೆ ಆಂಧ್ರಪ್ರದೇಶದ ಖಾಕಿನಾಡ ನಗರದಲ್ಲಿ ನಡೆಯುವ ದಕ್ಷಿಣ ವಲಯದ ಅಂತರ್ ವಿಶ್ವವಿದ್ಯಾಲಯದ ವಾಲಿಬಾಲ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ ಕುವೆಂಪು ವಿಶ್ವವಿದ್ಯಾಲಯದ ತಂಡಕ್ಕೆ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ತೃತೀಯ ಬಿಕಾಂ ವಿದ್ಯಾರ್ಥಿಗಳಾದ ಮಹಮ್ಮದ್ ಝಿಯಾದ್ ಎಂ , ಆದರ್ಶ್…