w
Headlines
Home » ಮದ್ಯ ಸೇವಿಸಲು ಬಾರ್ ಗೆ ಬಂದ ದಂಪತಿಗಳ ಮೇಲೆ ಮಚ್ಚಿನಿಂದ ದಾಳಿ – ಆಸ್ಪತ್ರೆಗೆ ದಾಖಲು

ಮದ್ಯ ಸೇವಿಸಲು ಬಾರ್ ಗೆ ಬಂದ ದಂಪತಿಗಳ ಮೇಲೆ ಮಚ್ಚಿನಿಂದ ದಾಳಿ – ಆಸ್ಪತ್ರೆಗೆ ದಾಖಲು

JPEG 20260303 160946

ಮದ್ಯ ಸೇವಿಸಲು ಬಾರ್ ಗೆ ಬಂದ ದಂಪತಿಗಳ ಮೇಲೆ ಮಚ್ಚಿನಿಂದ ದಾಳಿ |

A couple was seriously injured after a youth allegedly attacked them with a machete on Sagar Road near Gadikoppa in Shivamogga. The accused fled the scene, and a case has been registered at Tunganagar Police Station.

ಶಿವಮೊಗ್ಗ: ನಗರದಲ್ಲಿನ ಸಾಗರ ರಸ್ತೆಯಲ್ಲಿ ದಂಪತಿ ಮೇಲೆ ಯುವಕನೋರ್ವ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಭಾನುವಾರ ರಾತ್ರಿ ವರದಿಯಾಗಿದೆ. ಘಟನೆಯಲ್ಲಿ ದಂಪತಿಗಳು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ.

ಶಿವಮೊಗ್ಗ ನಗರದ ಗಾಡಿಕೊಪ್ಪ ಬಳಿಯ ಸಾಗರ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಗಾಯಗೊಂಡ ದಂಪತಿಗಳನ್ನು ಅಂಬೇಡ್ಕರ್ ನಗರದ ನಿವಾಸಿಗಳಾದ 45 ವರ್ಷದ ರಾಜು ಹಾಗೂ 35 ವರ್ಷದ ಚುಮ್ಮ ಎಂದು ಗುರುತಿಸಲಾಗಿದೆ. ಇವರಿಗೆ ತಲೆ ಹಾಗೂ ಕೈ ಭಾಗಗಳಿಗೆ ಗಂಭೀರ ಗಾಯಗಳಾಗಿದ್ದು, ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಸ್ಥಳೀಯರ ಮಾಹಿತಿ ಪ್ರಕಾರ, ಘಟನೆ ಸಂಭವಿಸಿದ ಬಳಿಕ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣಗೊಂಡಿದ್ದು, ನೂರಾರು ಜನರು ಕೂಡಿಕೊಂಡಿದ್ದರು. ದಾಳಿ ನಡೆಸಿದ ಯುವಕ ಘಟನೆಯ ನಂತರ ಅಲ್ಲಿಂದ ಪರಾರಿಯಾಗಿದ್ದಾನೆ.

ಆರೋಪಿ ತನ್ನನ್ನು ಟಿಪ್ಪು ನಗರದ ನಿವಾಸಿ ಎಂದು ಹೇಳಿಕೊಂಡಿದ್ದಾನೆ ಎಂದು ದಂಪತಿ ತಿಳಿಸಿದ್ದಾರೆ.

ಘಟನೆ ಸಂಬಂಧ ಶಿವಮೊಗ್ಗದ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಬಂಧನಕ್ಕೆ ಪೊಲೀಸರು ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ಮುಂದುವರಿದಿದೆ.

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.