ಹೊಸನಗರದ ಯುವಕ ಸೇರಿ ಇಬ್ಬರು ಕಾಪು ಬೀಚ್‌ನಲ್ಲಿ ಸಮುದ್ರಪಾಲು; ಐವರ ಪೈಕಿ ಇಬ್ಬರು ಸಾವು | Two youths, including a 20-year-old from Mavinakoppa in Hosanagara taluk, drowned while swimming at Kaup Lighthouse Beach in Udupi district. Three others were rescued.
ಉಡುಪಿ: ಜಿಲ್ಲೆಯ ಕಾಪು ಲೈಟ್‌ಹೌಸ್ ಬೀಚ್‌ನಲ್ಲಿ ಭಾನುವಾರ ಸಂಜೆ ಸಂಭವಿಸಿದ ದುರಂತದಲ್ಲಿ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಯುವಕ ಸೇರಿದಂತೆ ಇಬ್ಬರು ಮೃತಪಟ್ಟಿದ್ದಾರೆ.
ಸಮುದ್ರದಲ್ಲಿ ಈಜಲು ತೆರಳಿದ್ದ ಐವರು ಯುವಕರ ಪೈಕಿ ಇಬ್ಬರು ಬಲವಾದ ಅಲೆಗಳ ಹೊಡೆತಕ್ಕೆ ಸಿಲುಕಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಮೃತರನ್ನು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಮಾವಿನಕೊಪ್ಪದ 20 ವರ್ಷದ ಸಮೀರ್ ಹಾಗೂ ದಾವಣಗೆರೆ ಜಿಲ್ಲೆಯ ಅಹಮ್ಮದಿ ನಗರದ 15 ವರ್ಷದ ಮಲ್ಲಿಕ್ ರಿಹಾನ್ ಎಂದು ಗುರುತಿಸಲಾಗಿದೆ.
ಐವರು ಯುವಕರ ತಂಡ ಪ್ರವಾಸದ ನಿಮಿತ್ತ ಕಾಪು ಲೈಟ್‌ಹೌಸ್ ಬೀಚ್‌ಗೆ ಆಗಮಿಸಿತ್ತು. ಈ ವೇಳೆ ಐವರೂ ಸಮುದ್ರದಲ್ಲಿ ಈಜಲು ಇಳಿದಿದ್ದಾರೆ. ಆದರೆ, ಏಕಾಏಕಿ ಅಪ್ಪಳಿಸಿದ ಬೃಹತ್ ಅಲೆಗಳು ಯುವಕರನ್ನು ಸಮುದ್ರದ ಸೆಳೆತಕ್ಕೆ ಸಿಲುಕಿಸಿವೆ.
ತಕ್ಷಣ ಕಾರ್ಯಪ್ರವೃತ್ತರಾದ ಸ್ಥಳೀಯರು ಹಾಗೂ ರಕ್ಷಣಾ ತಂಡ ಮೂವರು ಯುವಕರನ್ನು ಸುರಕ್ಷಿತವಾಗಿ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಸಮೀರ್ ಹಾಗೂ ಮಲ್ಲಿಕ್ ರಿಹಾನ್ ಅವರನ್ನು ರಕ್ಷಿಸಲು ಸಾಧ್ಯವಾಗದೆ ಇಬ್ಬರೂ ಮೃತಪಟ್ಟಿದ್ದಾರೆ.
ಹೊಸನಗರ ತಾಲೂಕಿನ ಮಾವಿನಕೊಪ್ಪದ ಯುವಕ ಸಮೀರ್ ಮೃತಪಟ್ಟಿರುವ ಸುದ್ದಿ ಸ್ಥಳೀಯರಲ್ಲಿ ತೀವ್ರ ಆಘಾತ ಹಾಗೂ ದುಃಖ ಮೂಡಿಸಿದೆ.
ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಿರುವ ಸಂದರ್ಭದಲ್ಲಿ ಮುನ್ನೆಚ್ಚರಿಕೆ ವಹಿಸದೆ ಈಜಲು ಇಳಿಯುವುದು ಎಷ್ಟು ಅಪಾಯಕಾರಿ ಎಂಬುದಕ್ಕೆ ಈ ದುರಂತ ಮತ್ತೊಮ್ಮೆ ಎಚ್ಚರಿಕೆಯಾಗಿದೆ.
